Sunday, September 6, 2026
Sunday, September 6, 2026

ಅ.17, 18- ಉಡುಪಿ ಜಿಲ್ಲೆಯ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಅ.17, 18- ಉಡುಪಿ ಜಿಲ್ಲೆಯ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

Date:

ಉಡುಪಿ ಅ.೧೫: ಅ.17ರಂದು ಬೆಳಿಗ್ಗೆ 9.30 ರಿಂದ ಸಂಜೆ 5:30 ಗಂಟೆಯವರೆಗೆ ಕುಂದಾಪುರ/ಹಾಲಾಡಿ/ಬೆಳ್ವೆ/ಹೈಕಾಡಿ/ಬಿದ್ಕಲ್ ಕಟ್ಟೆ/ಆವರ್ಸೆ ವ್ಯಾಪ್ತಿಯಲ್ಲಿ 110/11ಕೆ.ವಿ ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಬೆಳ್ವೆ, ಹೈಕಾಡಿ,ಬಿದ್ಕಲ್‌ಕಟ್ಟೆ ಮತ್ತು ಆವರ್ಸೆ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಳ್ವೆ, ಅಲ್ಬಾಡಿ, ಆರ್ಡಿ, ಹೆಂಗವಳ್ಳಿ, ಸೂರ್ಗೋಳಿ, ಶೇಡಿಮನೆ, ಹೈಕಾಡಿ, ಗೋಳಿಯಂಗಡಿ, ರಟ್ಟಾಡಿ, ಮಾವಿನಕೊಡ್ಲು, ಹೆಮ್ಮಣ್ಣು, ಅಮಾಸೆಬೈಲು, ಜಡ್ಡಿನಗದ್ದೆ, ತೊಂಬಟ್ಟು, ಬಳ್ಮನೆ, ಬಿದ್ಕಲ್‌ಕಟ್ಟೆ, ಮೊಳಹಳ್ಳಿ, ಹಾರ್ದಳ್ಳಿ-ಮಂಡಳ್ಳಿ, ಯಡಾಡಿ-ಮತ್ಯಾಡಿ ಮತ್ತು ಹಾಲಾಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಅ.18ರಂದು ಬೆಳಿಗ್ಗೆ 10.00 ರಿಂದ ಸಂಜೆ 5:00 ಗಂಟೆಯವರೆಗೆ ಉಡುಪಿ/ಹಿರಿಯಡ್ಕ/ಬಜೆ/ಪೆರ್ಡೂರು ವ್ಯಾಪ್ತಿಯಲ್ಲಿ 110/33/11 ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಲ್ಲಿ 110/11ಕೆವಿ 10 ಎಂವಿಎ ಶಕ್ತಿ ಪರಿವರ್ತಕಕ್ಕೆ ಸಂಬಂಧಿಸಿದ 11ಕೆವಿ ಬ್ಯಾಂಕ್ ಸಿಟಿಗಳನ್ನು ಬದಲಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಸದರಿ ಉಪಕೇಂದ್ರದಿಂದ ಹೊರಡುವ 11ಕೆವಿ ಹಿರಿಯಡ್ಕ, ಬಜೆ, ಪೆರ್ಡೂರು, ಮಾಣೈ, ಹಿರೇಬೆಟ್ಟು ಫೀಡರ್ ಮಾರ್ಗದಲ್ಲಿ ಬಜೆ ವಾಟರ್ ಸಪ್ಲೈ, ಹಿರಿಯಡ್ಕ ಪೇಟೆ, ಪಾಪುಜೆ, ಬಜೆ, ಗುಡ್ಡೆಯಂಗಡಿ, ಕೊಂಡಾಡಿ, ಕೋಡಿಬೆಟ್ಟು, ಪೆರ್ಣಂಕಿಲ, ಕಣಂಜಾರು, ಕಾಜರಗುತ್ತು, ಹರಿಖಂಡಿಗೆ, ವಡ್ಜ, ಸಾಣೆಕಲ್ಲು, ಮಾಣೈ ನವಗ್ರಾಮ, ಪಂಚನಬೆಟ್ಟು, ಮೂಂಡುಜೆ, ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಅ.18 ರಂದು ಬೆಳಿಗ್ಗೆ 9.00 ರಿಂದ ಸಂಜೆ 5:00 ಗಂಟೆಯವರೆಗೆ ಮಣಿಪಾಲ/ಅನಂತನಗರ/ಇಂದ್ರಾಳಿ/ಪ್ರಗತಿನಗರ ವ್ಯಾಪ್ತಿಯಲ್ಲಿ 110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಅನಂತನಗರ, ಇಂದ್ರಾಳಿ, ಪ್ರಗತಿನಗರ ಮತ್ತು ಮೂಡುಬೆಳ್ಳೆ ಫೀಡರ್ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಹುಡ್ಕೋ, ಅನಂತನಗರ, ಕಲ್ಯಾಣನಗರ, ಸೋನಿಯಾ ಕ್ಲಿನಿಕ್, ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಪ್ರಗತಿನಗರ, ಶಾಂತಿನಗರ, ರಾಜೀವ ನಗರ, 80 ಬಡಗುಬೆಟ್ಟು, ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠ: ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಅರ್ಘ್ಯ ಪ್ರದಾನ

ಉಡುಪಿ, ಸೆ.5: ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಶುಕ್ರವಾರ ಮಧ್ಯರಾತ್ರಿ ಚಂದ್ರೋದಯ...

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿಗೆ ಅವಳಿ ಪ್ರಶಸ್ತಿ

ಉಡುಪಿ, ಸೆ.4: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಮತ್ತು ಸರಕಾರಿ...

ರಥಬೀದಿ ಕಾಲೇಜು: ಸಂಸ್ಕೃತ ದಿನಾಚರಣೆ

ಮಂಗಳೂರು, ಸೆ.3: ರಥಬೀದಿ ಕಾಲೇಜಿನಲ್ಲಿ ಸಂಸ್ಕೃತ ದಿನಾಚರಣೆ ಕಾರ್ಯಕ್ರಮ ಮಂಗಳೂರು ರಥಬೀದಿಯ...

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಸೆ.4: ಉಡುಪಿ, ಕಾಪು ಹಾಗೂ ಬ್ರಹ್ಮಾವರ ತಾಲೂಕುಗಳಿಗೆ ಸಂಬಂಧಿಸಿದಂತೆ ಅಡಿಕೆ...
error: Content is protected !!