Friday, June 19, 2026
Friday, June 19, 2026

ಡಾ.ಎಸ್.ಎಲ್.ಭೈರಪ್ಪನವರ ಬದುಕು, ಸಾಹಿತ್ಯ ಕೃತಿ ಚಿಂತನೆಗಳು ಚಿರಾಯು: ಪ್ರೊ. ಶೆಟ್ಟಿ

ಡಾ.ಎಸ್.ಎಲ್.ಭೈರಪ್ಪನವರ ಬದುಕು, ಸಾಹಿತ್ಯ ಕೃತಿ ಚಿಂತನೆಗಳು ಚಿರಾಯು: ಪ್ರೊ. ಶೆಟ್ಟಿ

Date:

ಕಾಪು, ಅ.15: ದಿ.ಡಾ.ಎಸ್.ಎಲ್.ಭೈರಪ್ಪನವರ ಶ್ರೇಷ್ಠ ಕೃತಿಗಳು ಅನುಭವ ಜನ್ಯವಾದ ವಿಷಯಗಳಿಂದ ಕೂಡಿರುವುದು ಮಾತ್ರವಲ್ಲ ನಮ್ಮೆಲ್ಲರ ಬದುಕಿಗೆ ಹತ್ತಿರವಾದ ವಿಷಯಾಧಾರಿತ ನಿರೂಪಣಾ ಶೈಲಿಯಿಂದ ಕೂಡಿರುವ ಕಾರಣದಿಂದಲೇ ಜನಮಾನಸದಲ್ಲಿ ಅಳಿಯುವುವಿಲ್ಲದೆ ಸದಾಕಾಲ ಜೀವಂತಾಗಿಯೇ ಓದುಗರನ್ನು ಸೆಳೆಯುತ್ತದೆ. ಹಾಗಾಗಿಯೇ ಅವರ ಮೇರು ಕೃತಿಗಳಾದ ಆವರಣ, ದಾಟು, ವಂಶವೃಕ್ಷ, ಸಾರ್ಥ, ಪರ್ವ ಮುಂತಾದ ಕೃತಿಗಳು ನಮ್ಮ ಬದುಕಿನ ವಾಸ್ತವಿಕತೆಗೆ ಹಿಡಿದ ಕೈಗನ್ನಡಿಯಂತೆ ಸದಾ ಜೀವಂತವಾಗಿ ನಿಲ್ಲುತ್ತದೆ. ಭಿನ್ನತೆಯನ್ನು ಒಪ್ಪಿಕೊಳ್ಳುತ್ತಿದ್ದ ಭೈರಪ್ಪನವರು ಪರ ವಿರೇೂಧಿಗಳ ಹೃದಯವನ್ನು ಗೆದ್ದ ಸಾಹಿತ್ಯ ಕ್ಷೇತ್ರದಲ್ಲಿ ಸಾಮ್ರಾಟರಾದ ಕೀರ್ತಿ ಅವರಿಗೆ ಸಲ್ಲುತ್ತದೆ. ಬಡತನದಲ್ಲಿಯೇ ಬೆಂದು ಅರಳಿ ಬಂದ ಸ್ಪೂರ್ತಿಯ ಚಿಲುಮೆ ಅವರು. ಇಂದಿನ ಯುವ ಪೀಳಿಗೆಗೆ ಡಾ.ಭೈರಪ್ಪನವರ ಬದುಕು ಪ್ರೇರಣೆಯಾಗಬೇಕು ಎಂದು ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥರಾದ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು.

ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಪರಿಷತ್ತು ಕಾಪು ಘಟಕ ಹಾಗೂ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆದ ಡಾ.ಎಸ್.ಎಲ್.ಭೈರಪ್ಪ ನವರ ನುಡಿನಮನ ಸಲ್ಲಿಸಿ ಮಾತನಾಡಿದರು. ನುಡಿ ನಮನ ಕಾರ್ಯಕ್ರಮದ ವೇದಿಕೆಯಲ್ಲಿ ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾಲೇಜಿನ ಪ್ರಾಂಶುಪಾಲ ಪ್ರೊ.ಗೇೂಪಾಲಕೃಷ್ಣ ಎಂ.ಗಾಂವ್ಕರ್ ನುಡಿ ನಮನ ಸಲ್ಲಿಸಿ ಮಾತನಾಡಿದರು.

ಕಾಪು ಸಾಹಿತ್ಯ ಘಟಕದ ಅಧ್ಯಕ್ಷ ಪುಂಡಲೀಕ ಮರಾಠೆ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ರವಿರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕೇೂಶಾಧ್ಯಕ್ಷ ವಿದ್ಯಾಧರ ಪುರಾಣಿಕ ಕಾರ್ಯಕ್ರಮ ನಿರೂಪಿಸಿದರು. ಆಂಗ್ಲ ಭಾಷಾ ಪ್ರಾಧ್ಯಾಪಕಿ ದೀಪಿಕಾ ಸುವಣ೯ ವಂದಿಸಿದರು. ಕಾಪು ತಾಲ್ಲೂಕು ಸಾಹಿತ್ಯ ಪರಿಷತ್ತಿನ ಸದಸ್ಯರು, ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಲ ಜೀವನ್ ಮಿಷನ್ ಅಡಿಯಲ್ಲಿ 16 ಕೋಟಿ ಮನೆಗಳಿಗೆ ಪೈಪ್ ನೀರಿನ ಸಂಪರ್ಕ ನೀಡಲಾಗಿದೆ: ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್

ಕೋಲ್ಕತ್ತಾ, ಜೂ.18: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಜಲ ಜೀವನ್ ಮಿಷನ್...

ಹಿರಿಯ ಛಾಯಾ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಪಿಪಿಎಸ್ಎ ಗೌರವ

ಉಡುಪಿ, ಜೂ.18: ಹಿರಿಯ ಛಾಯಾಚಿತ್ರ ಪತ್ರಕರ್ತ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ...

ಜಾಗತಿಕ ನಾವೀನ್ಯತೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿ ಭಾರತ: ವಿವಾಟೆಕ್ 2026 ರಲ್ಲಿ ಪ್ರಧಾನಿ ಮೋದಿ ಮಾತು

ಯು.ಬಿ.ಎನ್.ಡಿ., ಜೂ.18: ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ನಲ್ಲಿ ನಡೆದ ವಿವಾಟೆಕ್...

ಆರ್.ಎಸ್. ಎಸ್. ನೋಂದಣಿ ಬಗ್ಗೆ ಪ್ರಶ್ನಿಸುವ ಪ್ರಿಯಾಂಕ್ ಖರ್ಗೆಗೆ ಇಸ್ಲಾಮಿಕ್ ಮತೀಯ ಸಂಘಟನೆಗಳನ್ನು ಕೇಳುವ ಧೈರ್ಯವಿದೆಯೇ: ಯಶ್ಪಾಲ್ ಸುವರ್ಣ ಆಕ್ರೋಶ

ಉಡುಪಿ, ಜೂ.18: ಭಾರತ ಸ್ವಾತಂತ್ರ್ಯ ರಾಷ್ಟ್ರವಾಗಿ ಗುರುತಿಸಿಕೊಳ್ಳುವ ಮುನ್ನವೇ ರಾಷ್ಟ್ರೀಯತೆಯ ಚಿಂತನೆಯ...
error: Content is protected !!