Wednesday, April 22, 2026
Wednesday, April 22, 2026

ಮ್ಯಾಜಿಕ್ ಜಾರ್

ಮ್ಯಾಜಿಕ್ ಜಾರ್

Date:

ನಾವೆಲ್ಲ ದಿನಾಲು ಅನೇಕ ಋಣಾತ್ಮಕ ಭಾವನೆಗಳಿಂದ ತೋಲಾಡುತ್ತಿರುತ್ತೇವೆ. ಭಾರವಾದ ಮನಸ್ಸು, ಕೆಲಸದಲ್ಲಿ ನಿರುತ್ಸಾಹ, ಇನ್ನು ಅನೇಕ ರೀತಿಯ ಭಾವನೆಗಳ ಚಕ್ರದಲ್ಲಿ ತಿರುಗುತ್ತಿರುತ್ತೇವೆ. ಇದರಿಂದ ಹೊರಬರಲು ಇಲ್ಲಿದೆ ಹೊಸ ವಿಧಾನ. ಅದೇ ಗ್ರಾಟಿಟ್ಯೂಡ್ ಜಾರ್ ಅಥವಾ ಕೃತಜ್ಞತಾ ಜಾರ್ ನ ಚಮತ್ಕಾರ. ಇದನ್ನು ಅಭ್ಯಾಸ ಮಾಡಿ ಅನೇಕರು ತಮ್ಮ ನಕಾರಾತ್ಮಕ ಭಾವನೆಗಳನ್ನು ಧನಾತ್ಮಕವಾಗಿ ಪರಿವರ್ತನೆಗೊಂಡಿದ್ದಾರೆ. ಇದನ್ನು ಮ್ಯಾಜಿಕ್ ಜಾರ್ ಅಂತಲೂ ಕರೆಯಬಹುದು.

ಏನಿದು ಗ್ರಾಟಿಟ್ಯೂಡ್ ಜಾರ್?: ಯಾವುದಾದರೂ ಪಾರದರ್ಶಕ ಬಾಟಲಿ ಅಥವಾ ಜಾರನ್ನು ತೆಗೆದುಕೊಳ್ಳಿ. ದಿನಾಲು ಅಥವಾ ವಾರಕ್ಕೊಮ್ಮೆ ಆ ದಿನ ಅಥವಾ ಆ ವಾರದಲ್ಲಿ ಆಗಿರುವ ಖುಷಿಯ ವಿಚಾರವನ್ನು ಚೀಟಿಯಲ್ಲಿ ಬರೆದು ಆ ಬಾಟಲಿಯಲ್ಲಿ ಹಾಕಲು ಶುರು ಮಾಡಿ. ಇದು ರೂಢಿಯಾಗಲು ಕೆಲವು ತಿಂಗಳು ಆಗಬಹುದು ಆದರೆ ಪ್ರಯತ್ನ ಬಿಡದೆ ಇದನ್ನು ಮುಂದುವರಿಸಿ ರೂಡಿ ಮಾಡಿಕೊಳ್ಳಿ. ಜಾರನ್ನು ತುಂಬಿಸುತ್ತಾ ಹೋಗಿ. ಯಾವಾಗಲಾದರೂ ದುಃಖದಲ್ಲಿದ್ದಾಗ ಅಥವಾ ನಕಾರಾತ್ಮಕ ಭಾವನೆಗಳು ಬಂದಾಗ ಗ್ರೇಟ್ ಜಾರಿನಲ್ಲಿ ಇರುವ ಚೀಟಿಯನ್ನು ತೆಗೆದು ಓದಲಿಕ್ಕೆ ಶುರು ಮಾಡಿ. ಇದರಿಂದ ತಕ್ಷಣ ಭಾವನೆಗಳು ಬದಲಾಗುತ್ತದೆ. ಖುಷಿಯ ವಾತಾವರಣ ಸೃಷ್ಟಿಯಾಗದಿದ್ದರೂ ಸ್ವಲ್ಪವಾದರೂ ಭಾವನೆಗಳು ಹಿಡಿತದಲ್ಲಿರಲು ಸಹಾಯಮಾಡುತ್ತದೆ. ಈ ಅಭ್ಯಾಸದಿಂದ ಕ್ರಮೇಣ ನಾವು ಬದಲಾಗುತ್ತೇವೆ. ನಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆಯಾಗುತ್ತದೆ.

ಏನು ಪ್ರಯೋಜನ?: ದೊಡ್ಡ ದೊಡ್ಡ ಖುಷಿಯನ್ನು ಮಾತ್ರ ಕಾಣುವ ನಮಗೆ ಈ ರೀತಿಯ ಅಭ್ಯಾಸಗಳಿಂದ ಚಿಕ್ಕ ಚಿಕ್ಕ ಖುಷಿಯನ್ನು ಕಾಣಲು ಶುರು ಮಾಡುತ್ತೇವೆ. ಮೊದಲು ವಾರಕ್ಕೊಮ್ಮೆ ಯಾವುದಾದರೂ ಖುಷಿಯನ್ನು ಕಂಡರೆ ನಂತರ ದಿನಗಳಲ್ಲಿ ದಿನಾಲು ಖುಷಿಯನ್ನು ಅನುಭವಿಸುತ್ತೇವೆ. ಈ ರೀತಿಯ ಅಭ್ಯಾಸಗಳಿಂದ ನಮ್ಮ ಮನಸ್ಸು ಋಣಾತ್ಮಕ ದಿಂದ ಧನ್ಯಾತ್ಮಕವಾಗಲು ಆರಂಬಿಸುತ್ತದೆ. ನಮ್ಮ ಜೀವನದಲ್ಲಿರುವ ಜಿಗುಪ್ಸೆ, ದುಃಖದಿಂದ ಹೊರಬರಲು ಸಹಾಯ ಮಾಡುತ್ತದೆ. ನಮ್ಮ ಆತ್ಮವಿಶ್ವಾಸ ಬೆಳೆಯುತ್ತದೆ. ನಮ್ಮನ್ನು ನಾವು ಪ್ರೀತಿಸಲು ಶುರು ಮಾಡುತ್ತೇವೆ. ನಮ್ಮಿಂದ ನಮ್ಮ ಜೊತೆ ಇರುವ ವ್ಯಕ್ತಿಗಳು ಅವರ ಜೊತೆ ಸಂಬಂಧಗಳು ಕೂಡ ಬದಲಾಗುತ್ತದೆ. ಮುಖ್ಯವಾಗಿ ನಾವು ಜೀವನವನ್ನು ನೋಡುವ ದೃಷ್ಟಿಕೋನ ಬದಲಾಗುವುದು. ಮನಸ್ಸು ಖುಷಿಯಾದಾಗ ದೇಹವು ಕೂಡ ಆರೋಗ್ಯದಿಂದಿರುವುದು.

ಈ ರೀತಿಯ ಗ್ರಾಟಿಟ್ಯೂಡ್ ಜಾರ್ ಅಭ್ಯಾಸದಿಂದ ಸಂತೃಪ್ತಿ ಭಾವನೆ ಬೆಳೆಯುವುದು. ನಮ್ಮಲ್ಲಿರುವ ದ್ವೇಷ, ಅಸೂಯೆ, ಸಿಟ್ಟು ಇನ್ನಿತರ ಋಣಾತ್ಮಕ ಭಾವನೆಗಳನ್ನು ಹಿಡಿತದಲ್ಲಿಡಬಹುದು. ಇದರ ಅರ್ಥ ನಮಗೆ ಋಣಾತ್ಮಕ ಭಾವನೆಗಳು ಬರುವುದೇ ಇಲ್ಲ ಅಂತ ಅಲ್ಲ. ಆದರೆ ಋಣಾತ್ಮಕ ಭಾವನೆಗಳು ಬಂದಾಗ ಅದರಿಂದ ಹೊರಬರಲು ಕಲಿಯುತ್ತೇವೆ. ಇದು ಗ್ರಾಟಿಟ್ಯೂಡ ಜಾರ್ ನ ಕೊಡುಗೆ. ಕಷ್ಟದ ಅಥವಾ ಕೆಟ್ಟ ಪರಿಸ್ಥಿತಿಯಲ್ಲಿಯೂ ಭಾವನೆಗಳನ್ನು ಅರ್ಥ ಮಾಡಲು ಸಹಾಯ ಮಾಡುವುದು. ಇದಕ್ಕಿಂತ ಬೇರೆ ಉಪಯೋಗ ಬೇಕೆ? ಆದ್ದರಿಂದ ಇವತ್ತೇ ಮ್ಯಾಜಿಕ್ ಜಾರ್ ನ ಅನ್ನು ಬಳಸಿ ಖುಷಿಯನ್ನು ಆಹ್ವಾನಿಸಿ.

ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ವರ್ಷ- ಭಯೋತ್ಪಾದನಾ ಕೃತ್ಯ ಎಸಗಿದವರಿಗೆ ಭಾರತೀಯ ಸೇನೆಯ ಕಠಿಣ ಎಚ್ಚರಿಕೆ

ಶ್ರೀನಗರ, ಏ.22: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷ ಈ ದಿನದಂದು,...

ಜೆಇಇ ಮೈನ್ (ಬಿ.ಟೆಕ್) ಅಂತಿಮ ಫಲಿತಾಂಶ: ಜ್ಞಾನಸುಧಾದ 10 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಟೋಟಲ್ ಪರ್ಸಂಟೈಲ್; ಟಾಪರ್ ಆಗಿ 99.9055199 ಪರ್ಸಂಟೈಲ್‌ನೊಂದಿಗೆ ಕನಿಷ್ಕ್ ಅಮೀನ್

ಕಾರ್ಕಳ, ಏ.21: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-2026ರ...

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

ಕಾರ್ಕಳ, ಏ.21: ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ...
error: Content is protected !!