Monday, October 5, 2026
Monday, October 5, 2026

ಗ್ರಹಣ ಹೌದಾದರೂ ಗೋಚರ ಕಷ್ಟ

ಗ್ರಹಣ ಹೌದಾದರೂ ಗೋಚರ ಕಷ್ಟ

Date:

ವರ್ಷದ ಒಂದೇ ಗ್ರಹಣ ಚಂದ್ರಗ್ರಹಣ. ಮಾರ್ಚ್ 3 ಹುಣ್ಣಿಮೆಯಂದು. ಭಾರತೀಯರಿಗೆ ಇದು ಗ್ರಹಣವೆಂದು ಅನಿಸದು. ಕಾರಣ ಗ್ರಹಣ ಸಂಪೂರ್ಣ ಮುಗಿಯುವ ಹಂತದಲ್ಲಿ ಚಂದ್ರೋದಯ ಆಗುವುದರಿಂದ ನಮಗೆ ಗ್ರಹಣದ ಚಂದ್ರ ಕಾಣುವುದೇ ಬರೇ 9 ನಿಮಿಷ. ಅದೂ ಪಾರ್ಶ್ವ ಚಂದ್ರಗ್ರಹಣ. ಅದೂ ಬರೇ ಚಂದ್ರ 8 ಅಂಶ ಭಾಗ ಮಾತ್ರ ಗ್ರಹಣ ಆವರಿಸಿರುವುದು. ಉಡುಪಿಗೆ ಸೂರ್ಯಾಸ್ತ 6:38ಕ್ಕೆ. ಚಂದ್ರೋದಯವೂ 6:38 ಕ್ಕೆ. ಆಕಡೆ ಪಶ್ಚಿಮದಲ್ಲಿ ಸೂರ್ಯಾಸ್ತ. ಈ ಕಡೆ ಪೂರ್ವದಲ್ಲಿ ಪಾರ್ಶ್ವ ಗ್ರಹಣದ ಚಂದ್ರೋದಯ. ಇದು ಗ್ರಹಣದ ಚಂದಿರ ಹೌದೋ ಅಲ್ಲವೋ ಎಂದು ಯೋಚಿಸುವಷ್ಟರಲ್ಲಿ ಗ್ರಹಣ ಮುಗಿದಿರುತ್ತದೆ.

6:47 ಕ್ಕೆ ಗ್ರಹಣ ಮುಗಿಯುವದರಿಂದ ಗ್ರಹಣದ ಚಂದಿರ ಕಾಣಸಿಗುವುದು ಕಷ್ಟ. ಸೂರ್ಯ ಗ್ರಹಣದಲ್ಲಾದರೆ ಗ್ರಹಣದ ಬಿಂಬ ಪ್ರಾರಂಭ ಅಂತ್ಯ ಪ್ರತಿಬಿಂಬ ನೋಡಿ ಕರಾರುವಕ್ಕಾಗಿ ತಿಳಿಯಬಹುದು. ಆದರೆ ಚಂದ್ರಗ್ರಹಣದಲ್ಲಿ ಕಪ್ಪು ಆವರಿಸಿರುವುದು ಕರಾರುವಕ್ಕಾಗಿ ಕಾಣುವುದಿಲ್ಲ. ಸುಮಾರು 25 ಅಂಶ ಆವರಿಸಿದಾಗ ಅನುಭವಕ್ಕೆ ಬರುತ್ತದೆ . ಈ ದಿನ ಗ್ರಹಣದ ಕಡೇಯ ಉಳಿದ ಭಾಗ ಬರೇ 8 ಅಂಶ. ಬರೇ 9ತ್ತೇ ನಿಮಿಷ. ಹಾಗಾಗಿ ಗ್ರಹಣ ಹೌದಾದರೂ ನೋಡಲು ಕಷ್ಟ.

-ಡಾ. ಎ ಪಿ ಭಟ್ ಉಡುಪಿ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ಜಾನಕಿ ನಮನ’

ಉಡುಪಿ, ಅ.4: ಉಡುಪಿಯ ಕೋಸ್ಟಲ್‌ ಸ್ಟಾರ್‌ ಮ್ಯೂಸಿಕ್‌ ಕ್ಲಬ್‌ ಆಶ್ರಯದಲ್ಲಿ ಕರ್ಣಾಟಕ...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ. ನಿಖಿಲ್ ಗುಪ್ತ ಭೇಟಿ

ಕಾಪು, ಅ.4: ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ...

ಕುಪ್ಮಾ ಉತ್ತಮ ಉಪನ್ಯಾಸಕ ಪ್ರಶಸ್ತಿ ಪ್ರದಾನ

ಮಣಿಪಾಲ, ಅ.4: ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ...
error: Content is protected !!