Friday, October 2, 2026
Friday, October 2, 2026

ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

Date:

ಕೋಟ, ಮಾ.23: ಭಾರತೀಯ ಅಂಚೆ ವಿಭಾಗ ಉಡುಪಿ ಮತ್ತು ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇವರ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ಮಾ.೨೨ರಂದು ನಡೆಯಿತು. ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಸಾಲಿಗ್ರಾಮ ಇದರ ಗೌರವಾಧ್ಯಕ್ಷ ರಾಜೇಶ್ ಉಪಾಧ್ಯಾಯ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಕುಂದಾಪುರ ದಕ್ಷಿಣ ಉಪವಿಭಾಗ ಅಂಚೆ ನಿರೀಕ್ಷಕ ನಾಗಾಂಜಿನೇಯಲು ವಿವಿಧ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಉಡುಪಿ ವಿಭಾಗ ಅಂಚೆ ಅಧೀಕ್ಷಕ ರಮೇಶ್ ಪ್ರಭು, ಕುಂದಾಪುರ ದಕ್ಷಿಣ ಉಪವಿಭಾಗ ಅಂಚೆ ಸಹಾಯಕ ಸಂದೇಶ್, ಅಂಚೆ ಮೇಲ್ವಿಚಾರಕ ಮಹೇಂದ್ರ ಯು.ಎಸ್., ವಿನ್‌ಲೈಟ್ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ರಮೇಶ್ ಪೂಜಾರಿ, ಕಾರ್ಯದರ್ಶಿ ಸುಧಾಕರ್ ಪೂಜಾರಿ, ಖಜಾಂಚಿ ರವಿ ಹಾಗೂ ಮಾಜಿ ಅಧ್ಯಕ್ಷ ಗಿರೀಶ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೧೫೦ಕ್ಕೂ ಹೆಚ್ಚು ಜನರು ಆಧಾರ್ ತಿದ್ದುಪಡಿಯ ಪ್ರಯೋಜನವನ್ನು ಪಡೆದರು. ದೇವೇಂದ್ರ ಶ್ರೀಯನ್ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗಾಂಧಿ ನೆನಪಲ್ಲಿ ಸಾಮರಸ್ಯ ನಡಿಗೆ

ಹಿರಿಯಡಕ, ಅ.2: ಈ ನೆಲದ ಆತ್ಮವಾಗಿ ಭಾರತವನ್ನು ಮುನ್ನಡೆಸಿ ಜಗತ್ತನ್ನು ಎಚ್ಚರಿಸುವ...

ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 125ನೇ ವರ್ಷಚಾರಣೆಗೆ ಚಾಲನೆ

ಉಡುಪಿ, ಅ.2: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ತಾಂಗದಗಡಿ ಪ್ರಸಕ್ತ...

ಏಷ್ಯನ್ ಗೇಮ್ಸ್: ಭಾರತದ ಪದಕ ಪಟ್ಟಿಗೆ 6 ಪದಕಗಳ ಸೇರ್ಪಡೆ

ಯು.ಬಿ.ಎನ್.ಡಿ., ಅ.1: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಇಂದು ಮತ್ತೊಂದು...
error: Content is protected !!