Friday, October 2, 2026
Friday, October 2, 2026

ಗಾಂಧಿ ನೆನಪಲ್ಲಿ ಸಾಮರಸ್ಯ ನಡಿಗೆ

ಗಾಂಧಿ ನೆನಪಲ್ಲಿ ಸಾಮರಸ್ಯ ನಡಿಗೆ

Date:

ಹಿರಿಯಡಕ, ಅ.2: ಈ ನೆಲದ ಆತ್ಮವಾಗಿ ಭಾರತವನ್ನು ಮುನ್ನಡೆಸಿ ಜಗತ್ತನ್ನು ಎಚ್ಚರಿಸುವ ಬೆಳಕಾಗಿ ಬೆಳಗುತ್ತಿರುವ ಅಹಿಂಸೆ ಮತ್ತು ಸತ್ಯಾಗ್ರಹದ ಗಾಂಧಿ ಭಾರತದ ಹೆಮ್ಮೆಯ ಪದಕ ಎಂದು ಲಯನ್ಸ್‌ನ ಕ್ಯಾಬಿನೆಟ್‌ ಸದಸ್ಯ ಬಿ ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುವ ರೆಡ್‌ಕ್ರಾಸ್‌ ಘಟಕ, ರೋವರ್ಸ್‌ ಮತ್ತು ರೇಂಜರ್ಸ್‌ ಘಟಕ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ, ಸಹಯೋಗದಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜಯಂತಿಯ ಭಾಗವಾದ ಸಾಮರಸ್ಯ ನಡಿಗೆಗೆ ಚಾಲನೆ ನೀಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಯಪ್ರಕಾಶ ಶೆಟ್ಟಿ ಎಚ್ ಅವರು, ʼಸಾಮರಸ್ಯದ ಬದ್ದತೆಯೊಂದಿಗೆ ಸತ್ಯಾಗ್ರಹದ ಸಾತ್ವಿಕ ಸಾಮರ್ಥ್ಯವನ್ನು ಕಳೆದುಕೊಳ್ಳದೆ ಈ ದೇಶದ ಪ್ರಜಾಸತ್ತೆಯ ಉಳಿವಿಗೆ ಗಾಂಧಿಯೇ ತೋರುಬೆಳಕು ಮಾತ್ರವಲ್ಲ ಕೇವಲ ವ್ಯಕ್ತಿಯಾಗದೆ ವಿದ್ಯಾಮಾನವಾಗಿ ರೂಪುಗೊಂಡ ಗಾಂಧಿತನದ ಒಳಗೆ ಲಾಲ್‌ ಬಹದ್ದೂರ್‌ ಶಾಸ್ತ್ರಿ ಹಾಗೂ ಅವರ ಇನ್ನಿತರ ಅನುಯಾಯಿಗಳು ಮಿಳಿತವಾಗುವುದರಿಂದ ಭಾರತದ ನಿಜ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಎದುರಾಳಿತನವನ್ನು ಕಲಿಸುವ ಅವಕಾಶವೇ ಇಲ್ಲ ಎಂದರು.

ಬಾಲಕೃಷ್ಣ ಹೆಗ್ಡೆ, ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ, ರೆಡ್‌ಕ್ರಾಸ್‌ ಸಂಚಾಲಕ ಡಾ. ರಾಧಾಕೃಷ್ಣ ನಾಯಕ್‌, ರೋವರ್ಸ್‌ ಹಾಗೂ ಐಕ್ಯುಎಸಿ ಸಂಚಾಲಕ ಡಾ.ಲಿತಿನ್ ಬಿ.ಎಂ. ಹಾಗೂ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದ. ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ನಂದೀಶ್ ಕುಮಾರ್ ಕೆ.ಸಿ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

ಬೆಂಗಳೂರು, ಅ.2: ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ...

ಏಷ್ಯನ್ ಗೇಮ್ಸ್: ಭಾರತದ ಒಟ್ಟು ಪದಕಗಳ ಸಂಖ್ಯೆ 76ಕ್ಕೆ ಏರಿಕೆ; ಪದಕ ಪಟ್ಟಿಯಲ್ಲಿ ಐದನೇ ಸ್ಥಾನ

ಯು.ಬಿ.ಎನ್.ಡಿ., ಅ.2: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ...

ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ನಮನ

ನವದೆಹಲಿ, ಅ.2: ಮಹಾತ್ಮ ಗಾಂಧಿಯವರ 157ನೇ ಜನ್ಮದಿನದ ಅಂಗವಾಗಿ ದೇಶ ಅವರಿಗೆ...

ಹಿರಿಯ ನಾಗರಿಕರನ್ನು ಗೌರವಯುತವಾಗಿ ನಡೆಸಿಕೊಳ್ಳಿ: ಎಂ.ಎ.ಗಫೂರ್

ಉಡುಪಿ, ಅ.2: ಸಮಾಜದಲ್ಲಿ ಹಿರಿಯ ನಾಗರಿಕರು ತಮ್ಮದೇ ಆದ ಸ್ಥಾನ ಹೊಂದಿದ್ದು,...
error: Content is protected !!