Saturday, November 21, 2026
Saturday, November 21, 2026

ಸಿಂಹಾವಲೋಕನ ತಂತ್ರ ಬಳಸಿ ಮಹಾಭಾರತ ಕತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಶಕ್ತಿಕವಿ ರನ್ನ: ಡಾ. ಪಾದೇಕಲ್ಲು ವಿಷ್ಣು ಭಟ್

ಸಿಂಹಾವಲೋಕನ ತಂತ್ರ ಬಳಸಿ ಮಹಾಭಾರತ ಕತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಶಕ್ತಿಕವಿ ರನ್ನ: ಡಾ. ಪಾದೇಕಲ್ಲು ವಿಷ್ಣು ಭಟ್

Date:

ಉಡುಪಿ, ನ.20: ಪ್ರಾಚೀನ ಕಾವ್ಯಗಳನ್ನು ಓದುಗಬ್ಬ ಪಾಡುಗಬ್ಬಗಳಾಗಿ ನಮ್ಮ ಪರಂಪರೆ ಕಟ್ಟಿಕೊಟ್ಟಿದೆ. ಚಂಪೂ ಕಾವ್ಯಗಳು ಓದುಗಬ್ಬಗಳಾಗಿದ್ದು ರಾಗ ತಾಳ ಬದ್ಧವಾಗಿ, ಕಬ್ಬವಾಕ್ಯ ನಿಯಮಗಳೊಂದಿಗೆ ಗಮಕ ಕ್ರಮದಲ್ಲಿ ವಾಚಿಸಿದಾಗ ಕಾವ್ಯ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ರನ್ನನ ಒಂದು ಕೃತಿ ಸಾಹಸ ಭೀಮ ವಿಜಯವಾಗಿದ್ದು ಗದಾಯುದ್ಧ ಅದರ ಜನಪ್ರಿಯ ಹೆಸರು. ಜನಪ್ರಿಯತೆಯ ಹೆಸರಿನಲ್ಲಿ ಪ್ರಾಚೀನ ಕಾವ್ಯಗಳು ನಾಮಾಂತರಗೊಂಡು ಜನಮಾನಸದಲ್ಲಿ ಬೇರೂರಿವೆ. ರನ್ನನ ಉದ್ದೇಶ ಭೀಮ-ದುರ್ಯೋಧನರ ಗದಾಯುದ್ಧ ಪ್ರಸಂಗದ ವರ್ಣನೆಯಾದರೂ, ಇಡೀ ಮಹಾಭಾರತದ ಕತೆಯನ್ನು ಸಿಂಹಾವಲೋಕನ ತಂತ್ರದ ಮೂಲಕ ಪರಿಣಾಮಕಾರಿಯಾಗಿ ಸಹೃದಯರ ಕಣ್ಣಿಗೆ ಕಟ್ಟಿಕೊಟ್ಟ ಶಕ್ತಿಕವಿ ರನ್ನ ಎಂದು ವಿಶ್ರಾಂತ ಪ್ರಾಂಶುಪಾಲರೂ, ತುಳು-ಕನ್ನಡ ಭಾಷಾ ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ ಹೇಳಿದರು. ಅವರು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ‘ಗದಾಯುದ್ಧ ಸಂಗ್ರಹಂ- ಭೀಷ್ಮವಚನಂ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪ್ರಾಚೀನ ಕಾವ್ಯಗಳನ್ನು ಅರ್ಥಗರ್ಭಿತವಾಗಿ ಮನನ ಮಾಡಿಕೊಂಡರೆ ಅದು ಸುಲಿದ ಬಾಳೆಯ ಹಣ್ಣಿನಂತಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಸಲಹೆ ನೀಡಿದರು. ಶೈಕ್ಷಣಿಕ ಸಲಹೆಗಾರ ಡಾ. ಶ್ರೀಧರ ಭಟ್, ಡಾ. ರಘು ನಾಯ್ಕ, ಡಾ. ಶ್ರೀದೇವಿ ಕೆ, ಡಾ. ದತ್ತ ಕುಮಾರ್‌ ಉಪನ್ಯಾಸಕರಾದ ಭವ್ಯಾ, ಅರ್ಚನಾ, ಸಂಧ್ಯಾರಾಣಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಮಾರುತಿ ಸ್ವಾಗತಿಸಿ, ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ರತ್ನಮಾಲಾ ವಂದಿಸಿದರು. ಉಪನ್ಯಾಸಕಿ ಶರಿತಾ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೀವ್ರತರ ಅತಿಸಾರ ಭೇದಿ ನಿಯಂತ್ರಣ ಅಭಿಯಾನ

ಉಡುಪಿ, ನ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ...

‘ಮಕ್ಕಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆ ಪಾತ್ರ’ -ಒಂದು ದಿನದ ತರಬೇತಿ ಕಾರ್ಯಾಗಾರ

ಉಡುಪಿ, ನ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,...

ಶಾಸ್ತ್ರೀಯ ಶಿಸ್ತು ಜಾನಪದ ಸ್ವಾತಂತ್ರ‍್ಯದಿಂದ ಯಕ್ಷಗಾನಕ್ಕೆ ಜನಮನ್ನಣೆ: ಪ್ರೊ. ಎಂ.ಎಲ್. ಸಾಮಗ

ಉಡುಪಿ, ನ.20: ಸಾಂಸ್ಕೃತಿಕ ವಿಶ್ವ ಮನ್ನಣೆ ಪಡೆಯಲು ರಾಜ್ಯದ ಎಲ್ಲಾ ಭಾಗವು...

ಸರಸ್ವತಿ ವಿದ್ಯಾಲಯ: ಕನ್ನಡ ಸಿರಿ ಕಾರ್ಯಕ್ರಮ

ಗಂಗೊಳ್ಳಿ, ನ.20: ಒಂದು ಭಾಷೆ ಬೆಳೆಯಲು ವಿವಿಧ ಭಾಷೆಗಳ ನಡುವೆ ಸಮನ್ವಯ...
error: Content is protected !!