ಉಡುಪಿ, ಅ.2: ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ತಾಂಗದಗಡಿ ಪ್ರಸಕ್ತ ವರ್ಷ 125ನೇ ವರ್ಷದ ಸಂಭ್ರಮಾಚರಣೆಗೆ ಕರಸೇವೆಯ ಮೂಲಕ ಗಾಂಧಿ ಜಯಂತಿ ಆಚರಣೆಯೊಂದಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕರಾದ ಕೆ ನವೀನ್ ಐತಾಳ್ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದ ಬಳಿಕ ಕರಸೇವೆಯ ಮೂಲಕ ಹಳೆಯ ಮಾಡಿನ ಹಂಚುಗಳನ್ನು ತೆಗೆದು ಅವುಗಳನ್ನು ವ್ಯವಸ್ಥಿತವಾಗಿ ನಿಗದಿತ ಸ್ಥಳಕ್ಕೆ ವರ್ಗಾಯಿಸುವ ಕಾರ್ಯ ನಡೆಯಿತು.

ಕಟ್ಟಡದ ನಿರ್ಮಾಣ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾನಂದ ನಾಯಕ್ ಮಾತನಾಡಿ, 125 ನೇ ವರ್ಷಾಚರಣೆಯ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಮಂಡಳಿ ಹಾಗೂ ಅಭಿಮಾನಿ ಬಳಗ ಜೊತೆಯಾಗಿ ಸೇರಿ ಅತ್ಯಂತ ವಿಜೃಂಭಣೆಯಿಂದ ಆಚರಣೆಗೆ ನಿರ್ಣಯಿಸಲಾಗಿದೆ. ಇದರ ಪ್ರಯಕ್ತ ಶಿಥಿಲಾವಸ್ಥೆಯಲ್ಲಿ ಇರುವ ಕಟ್ಟಡವನ್ನು ನವೀಕರಣ ಮಾಡುವ ಚಿಂತನೆ ನಡೆಸಲಾಗಿದೆ. ಅಲ್ಲದೆ ಶಾಲೆ ಅತ್ಯಾಧುನಿಕ ಮಾದರಿ ಶೌಚಾಲಯನ್ನು ನಿರ್ಮಾಣ, ಶಿಕ್ಷಣದ ಗುಣಮಟ್ಟ ಹೆಚ್ಚಳ ಹಿನ್ನಲೆಯಲ್ಲಿ ಗೌರವ ಶಿಕ್ಷಕರನ್ನು ನೇಮಿಸಿ ಅವರ ವೇತನಕ್ಕಾಗಿ ಪ್ರತ್ಯೇಕ ನಿಧಿ ರಚನೆ, ಇದಾದ ಬಳಿಕ ಶಾಲೆಯ ಹಿಂಬಂದಿಯಲ್ಲಿ ಪ್ರತ್ಯೇಕ ಆಂಗ್ಲ ಮಾಧ್ಯಮ ಶಾಲೆ ನಿರ್ಮಾಣದ ಚಿಂತನೆಯಿದೆ ಎಂದರು.

ಶಾಲಾ ಮುಖ್ಯೋಪಾಧ್ಯಾಯರಾದ ಸಂತೋಷ್ ಕರ್ನೆಲಿಯೋ ಮಾತನಾಡಿ 1901 ರಲ್ಲಿ ನಮ್ಮ ಹಿರಿಯರಿಂದ ಈ ಶಾಲೆ ಆರಂಭಗೊಂಡಿದ್ದು, 125ನೇ ವರ್ಷಗಳಿಗೆ ಕಾಲಿಟ್ಟಿದೆ. ಹಿರಿಯರ ಸೇವೆ ಮತ್ತು ಶಾಲೆಯ ಅಭಿವೃದ್ಧಿಗೆ ಕಾರಣರಾದ ಪ್ರತಿಯೊಬ್ಬರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ. ಶಾಲೆಯ ಅಭಿವೃದ್ಧೀಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪಾತ್ರ ವಿಶೇಷವಾಗಿದ್ದು ಪ್ರಸ್ತುತ ಸಂಘಕ್ಕೆ 60 ವರ್ಷಗಳು ಪೂರ್ಣಗೊಂಡಿದೆ. ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಮಂಡಳಿ, ಅಭಿಮಾನಿಗಳ ನೆರವು ಮತ್ತು ಸಹಕಾರದಿಂದ 125 ವರ್ಷಗಳ ಆಚರಣೆ ಆಯೋಜಿಸಲು ನಿರ್ಧರಿಸಲಾಗಿದೆ.
125 ವರ್ಷದ ಸಂಭ್ರಮಾಚರಣೆಗೆ ಗಾಂಧಿ ಜಯಂತಿ ಮತ್ತು ಲಾಲ್ ಬಹಾದ್ದೂರು ಶಾಸ್ತ್ರೀಗಳ ದಿನಾಚರಣೆಯ ದಿನದಂದು ಚಾಲನೆ ನೀಡಲು ನಿರ್ಧರಿಸಲಾಗಿದೆ. ಕರಸೇವೆಯ ಮೂಲಕ ಹಳೆಯ ಮಾಡಿನ ಹಂಚುಗಳನ್ನು ತೆಗೆದು ಅವುಗಳನ್ನು ವ್ಯವಸ್ಥಿತವಾಗಿ ನಿಗದಿತ ಸ್ಥಳಕ್ಕೆ ವರ್ಗಾಯಿಸುವ ಕಾರ್ಯ ಆಯೋಜಿಸಿದ್ದು ಹೆಚ್ಚಿನ ಸಂಖ್ಯೆಯ ಹಳೆ ವಿದ್ಯಾರ್ಥಿಗಳು ಇದರಲ್ಲಿ ಕೈಜೋಡಿಸಿದ್ದಾರೆ. ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ಧಿ ಮಂಡಳಿ, ಅಭಿಮಾನಿಗಳು ಸಹಕಾರ ನೀಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಪ್ರಸ್ತುತ ಶಾಲೆಯಲ್ಲಿ 200ಕ್ಕೂ ಅಧಿಕ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವಿದ್ಯಾರ್ಜನೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಆಡಳಿತ ಮಂಡಳಿ ಸದಸ್ಯರಾದ ಡೆನಿಸ್ ಕರ್ನೆಲಿಯೋ, ಸಂಘದ ಅಧ್ಯಕ್ಷರಾದ ರಮೇಶ್ ಎಸ್ ಬಾರಿತ್ತಾಯ, ಟ್ರಸ್ಟ್ ಅಧ್ಯಕ್ಷರಾದ ಯು ಜೆ ಮಹಮ್ಮದ್ ಹನೀಫ್, ವಿಶೇಶ ಸಮಿತಿ ಪ್ರಧಾನ ಕಾರ್ಯದರ್ಶಿ ಅಮ್ಮುಂಜೆ ಸದಾನಂದ ನಾಯಕ್, ಸಮಿತಿಯ ಪದಾಧಿಕಾರಿಗಳಾದ ಚಂದ್ರಕಾಂತ್ ಕೆ ಎನ್., ಕೃಷ್ಣ ಶ್ರೀಧರನ್, ಕೆ ಹರೀಶ್ ಆಚಾರ್ಯ, ಬಾಲಚಂದ್ರ ಗಾಂಸ್ಕರ್, ಕಮಲಾಕ್ಷ ಶೇಟ್, ಗೋಡ್ ಫ್ರಿ ಡಿಸಿಲ್ವಾ, ವಿನಯ್ ಕುಮಾರ್, ರಘುರಾಮ್ ಆಚಾರ್ಯ, ಹಯವದನ ಭಟ್, ತ್ರಿವೇಣಿ ರಘುರಾಮ ಆಚಾರ್ಯ, ಚಂದ್ರಕಾಂತ್ ಯು., ಎಸ್ ರಾಮಚಂದ್ರ ನಾಯಕ್, ದುರ್ಗಾಪ್ರಸಾದ್, ಪ್ರದ್ಯುಮ್ನ ಗಿರಿಧರ ಆಚಾರ್ಯ, ಶೇಖರ ಪಿ., ಗಣೇಶ್ ಕುಮಾರ್, ಅಬೂಬಕ್ಕರ್ ಸಿದ್ದಿಕ್, ಸುನೀಲ್ ಗುಂಡಿಬೈಲು, ಅನಿಲ್ ಗುಂಡಿಬೈಲು, ಸಮಿತಾ, ಕವಿತಾ ಶೆಟ್ಟಿ, ಸರೋಜಿನಿ, ಜಯ ಆಚಾರ್ಯ, ಪೂರ್ಣಿಮಾ ಆಚಾರ್ಯ, ಸುನೀತಾ ಆಚಾರ್ಯ, ಶೋಭಾ ಆಚಾರ್ಯ, ಇತರ ಪದಾಧಿಕಾರಿಗಳು ಶಾಲಾ ಶಿಕ್ಷಕ ವೃಂದ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.




By
ForthFocus™