Sunday, October 4, 2026
Sunday, October 4, 2026

ಮನುಷ್ಯ ಕೇಂದ್ರಿತ ಜೀವನ ದೃಷ್ಟಿಕೋನ ಹವಾಮಾನ ತುರ್ತು ಸ್ಥಿತಿಗೆ ಕಾರಣ

ಮನುಷ್ಯ ಕೇಂದ್ರಿತ ಜೀವನ ದೃಷ್ಟಿಕೋನ ಹವಾಮಾನ ತುರ್ತು ಸ್ಥಿತಿಗೆ ಕಾರಣ

Date:

ಮಣಿಪಾಲ, ಮಾ.22: ಮನುಷ್ಯ ಕೇಂದ್ರಿತ ಜೀವನ ದೃಷ್ಟಿಕೋನವು ಹವಾಮಾನ ತುರ್ತು ಸ್ಥಿತಿಗೆ ಕಾರಣವಾಗಿದೆ. ಇಂದು ನಮಗೆ ಬೇಕಾಗಿರುವುದು ಹಸಿರು ರಾಜಕೀಯ ಸಿದ್ಧಾಂತ ಎಂದು ಜರ್ಮನಿಯ ಡಾರ್ಮ್‌ಸ್ಟಾಡ್ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಜೆನ್ಸ್ ಮಾರ್ಕ್ವಾಡ್ ಹೇಳಿದರು.

ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಮತ್ತು ಡಿಪಾರ್ಟ್‌ಮೆಂಟ್ ಜಿಯೋಪಾಲಿಟಿಕ್ಸ್ ಅಂಡ್ ಇಂಟರ್ನ್ಯಾಷನಲ್ ರಿಲೇಶನ್ಸ್ (ಡಿಜಿಐಆರ್) ಮಾಹೆ, ಇದರ ಜಂಟಿ ಆಶ್ರಯದಲ್ಲಿ ‘ಜಿಯೋಪಾಲಿಟಿಕ್ಸ್ ಆಂಡ್ ಪೀಸ್ ಇನ್ ದಿ ಆಂಥ್ರೊಪೊಸೀನ್‌’ ‘ಆಂಥ್ರೊಪೊಸೀನ್‌ ನಲ್ಲಿ ಭೂರಾಜಕೀಯ ಮತ್ತು ಶಾಂತಿ’ ಕುರಿತು ಮಾತನಾಡಿದ ಡಾ. ಜೆನ್ಸ್ ಮಾರ್ಕ್ವಾಡ್, ಮಾನವ ಕೇಂದ್ರಿತ ಬೆಳವಣಿಗೆಯ ಮಾದರಿಯ ಹುಟ್ಟು ಮತ್ತು ವಿಕಸನದ ಕುರಿತು ಮಾತನಾಡಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಇಂದಿನ ಜಾಗತಿಕ ಬೆಳವಣಿಗೆಗಳನ್ನು ನೋಡಿದರೆ ಇಂದು ಜಗತ್ತು ವಾಸ್ತವಿಕತೆ ಮತ್ತು ಆದರ್ಶವಾದ ಎರಡರಿಂದಲೂ ಅಸಂಗತೆಯ ಕಡೆಗೆ ಸಾಗುತ್ತಿರುವಂತೆ ತೋರುತ್ತಿದೆ, ಎಂದರು. ಡಿಜಿಐಆರ್ ಮುಖ್ಯಸ್ಥೆ ಪ್ರೊ. ವಿಜಯಲಕ್ಷ್ಮಿ, ಹವಾಮಾನ ಬಿಕ್ಕಟ್ಟು ಮತ್ತು ಶಾಂತಿ ಭೂರಾಜಕೀಯದಲ್ಲಿ ಸಂಪರ್ಕ ಹೊಂದಿವೆ ಎಂದು ಹೇಳಿದರು. ಡಾ. ಧನಶ್ರೀ ಜಯರಾಮ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಾರಂಭದಲ್ಲಿ ಶ್ರಾವ್ಯ ಬಾಸ್ರಿ ವೈದಿಕ ಶಾಂತಿ ಮಂತ್ರ ಹಾಡಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೆಂಕನಿಡಿಯೂರು ಕಾಲೇಜು: ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ

ತೆಂಕನಿಡಿಯೂರು, ಅ.3: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ...

ವಿಧಿಕ್ತ–2026 ಉದ್ಘಾಟನೆ

ಕುಂದಾಪುರ, ಅ.3: ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ...

ಕ್ರಿಯೇಟಿವ್ ಕಾಲೇಜು: ಗಾಂಧಿ ಜಯಂತಿ ಸಂಭ್ರಮ

ಕಾರ್ಕಳ, ಅ.3: ಕ್ರಿಯೇಟಿವ್ ಪದವಿ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಹಾಗೂ...
error: Content is protected !!