Friday, October 2, 2026
Friday, October 2, 2026

ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ- ದಶಮಾನೋತ್ಸವ ಕಾರ್ಯಕ್ರಮ ಹಾಗೂ ವಾರ್ಷಿಕ ಸಾಮಾನ್ಯ ಸಭೆ

ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ- ದಶಮಾನೋತ್ಸವ ಕಾರ್ಯಕ್ರಮ ಹಾಗೂ ವಾರ್ಷಿಕ ಸಾಮಾನ್ಯ ಸಭೆ

Date:

ಉಡುಪಿ, ಅ.2: ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ನಿಯಮಿತ, ಉಡುಪಿ ಇದರ ದಶಮಾನೋತ್ಸವ ಹಾಗೂ ೨೦೨೫-೨೬ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಒಳಕಾಡು ಪದ್ಮಾವತಿ ಸಭಾಸದನದಲ್ಲಿ ನಡೆಯಿತು. ದಶಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ನಿರ್ದೇಶಕರಾದ ಮಂಜುನಾಥ ಎಸ್. ಕೆ. ರವರು ನೆರವೇರಿಸಿದರು. ಉದ್ಘಾಟನಾ ಭಾಷಣ ಮಾಡಿದ ಮಂಜುನಾಥ ಎಸ್. ಕೆ. ಸಂಘದ ವ್ಯವಹಾರದಲ್ಲಿ ಆಗಿರುವ ಪ್ರಗತಿಯನ್ನು ಶ್ಲಾಘಿಸುತ್ತಾ, ಸಂಘವು ಹತ್ತು ವರ್ಷವನ್ನು ಯಶಸ್ವಿಯಾಗಿ ಪೂರೈಸಿರುವುದಕ್ಕೆ ಶುಭ ಹಾರೈಸಿದರು. ಹಾಗೂ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ದಶಮಾನೋತ್ಸವದ ವಿಶೇಷತೆಯಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹತ್ತು ಸಾಧಕರಾದ ಪ್ರತೀಕ್ ಕಾಮತ್, ನಿತ್ಯಾನಂದ ವಳಕಾಡು, ವಿಶು ಶೆಟ್ಟಿ ಅಂಬಲಪಾಡಿ, ವೀಣಾ ಮುರಳೀಧರ ಸಾಮಗ, ಕೆ. ಗಣಪತಿ ನಾಯಕ್, ಕುಂಜಿಬೆಟ್ಟು ನಾರಾಯಣ ಕಾಮತ್, ಅಜಿತ್ ಕುಮಾರ್, ಸುಭಾಸ್ ಕೊರಂಗ್ರಪಾಡಿ, ಡಾ. ಕೆ. ಉಷಾ ಎಸ್. ಪೈ ಹಾಗೂ ಕೆ. ಗಣೇಶ್ ಪೈ ಅವರನ್ನು ಸನ್ಮಾನಿಸಲಾಯಿತು.

ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗದವರು, ಮಾಜಿ ನಿರ್ದೇಶಕರು, ಹಳೇಯ ಸಿಬ್ಬಂದಿಗಳು, ಪೆನೆಲ್ ವಕೀಲರು, ಆಸ್ತಿ ಮೌಲ್ಯಮಾಪಕರು ಹಾಗೂ ಪಿಗ್ಮಿ ಸಂಗ್ರಾಹಕರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಮಂಜುನಾಥ ಎಸ್. ಕೆ. ಅವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತ ಇದರ ಅಧ್ಯಕ್ಷರಾದ ಪಿ. ಜಗನ್ನಾಥ್ ಶೆಟ್ಟಿ ಅಂಪಾರು, ಲೆಕ್ಕಪರಿಶೋಧಕರಾದ ಕೆ. ಗಣೇಶ್ ಎಂ. ಕಾಮತ್ ಸಿ.ಎ., ಮುದ್ರಕರ ಸೌಹಾರ್ದ ಸಹಕಾರಿ ಸಂಘ ಉಡುಪಿ ಇದರ ಅಧ್ಯಕ್ಷರಾದ ಬಿ. ಜಿ. ಸುಬ್ಬರಾವ್ ಹಾಗೂ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ನಿಯಮಿತ ಇದರ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾದ ಲೋಹಿತ್ ಜಿ. ಸಾಲಿಯಾನ್ ಅವರನ್ನು ಅಭಿನಂದಿಸಲಾಯಿತು.

ದಶಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷರಾದ ಎಚ್. ಮಹೇಶ್ ಶೆಣೈ ಅವರು ಮಾತನಾಡಿ, ಸಹಕಾರಿಯು ವರದಿ ಸಾಲಿನ ಅಂತ್ಯಕ್ಕೆ ಒಟ್ಟು 9.11 ಕೋಟಿ ರೂ. ದುಡಿಯುವ ಬಂಡವಾಳ, 6.65 ಕೋಟಿ ರೂ. ಹೊರಬಾಕಿ ಸಾಲ, 15.22 ಕೋಟಿ ರೂ. ವ್ಯವಹಾರ ನಡೆಸಿ, ವರದಿ ವರ್ಷದಲ್ಲಿ 1.08 ಕೋಟಿ ರೂ. ಆದಾಯವನ್ನು ಗಳಿಸಿರುತ್ತದೆ ಹಾಗೂ ರೂ. 19,68,397.68 ಲಾಭವನ್ನು ಗಳಿಸಿದ್ದು, ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಅತೀ ಹೆಚ್ಚು ಲಾಭ ಗಳಿಸಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಸಂಘವನ್ನು ಇನ್ನಷ್ಟು ಬಲಿಷ್ಠವಾಗಿ, ಪಾರದರ್ಶಕವಾಗಿ ಹಾಗೂ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸದಸ್ಯರಿಗೆ ವೇಗವಾದ ಮತ್ತು ಉತ್ತಮ ಸೇವೆ ನೀಡುವ ಜೊತೆಗೆ ಸಂಘದ ಆರ್ಥಿಕ ಶಿಸ್ತು ಹಾಗೂ ವಿಶ್ವಾಸರ್ಹತೆಯನ್ನು ಮತ್ತಷ್ಟು ಬಲಪಡಿಸುವತ್ತ ಗಮನ ಹರಿಸುವುದಾಗಿ ತಿಳಿಸಿ, ಕಳೆದ ಹತ್ತು ವರ್ಷಗಳಲ್ಲಿ ಸಂಘದ ಬೆಳವಣಿಗೆಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಯನ್ನು ತಿಳಿಸಿದರು.

ಸಂಘದ ನಿರ್ದೇಶಕರಾದ ರವಿನಾಥ ಪೈ ಅವರು ಮಾತನಾಡಿ ಸಂಘವು ಪ್ರಾರಂಭಿಕ ದಿನದಿಂದ ಹತ್ತು ವರ್ಷದವರೆಗಿನ ಏಳು ಬೀಳುಗಳನ್ನು ಮೆಲುಕು ಹಾಕಿದರು. ಹಾಗೂ ಸಂಘದ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಸದಸ್ಯರಿಗೆ ವಿಸ್ತೃತವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಎಚ್. ಮಹೇಶ್ ಶೆಣೈ, ಉಪಾಧ್ಯಕ್ಷರಾದ ಎಮ್. ಸದಾಶಿವ ರಾವ್ ಹಾಗೂ ನಿರ್ದೇಶಕರಾದ ರವಿನಾಥ ಪೈ ಅವರನ್ನು ಅಭಿನಂದಿಸಲಾಯಿತು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ., ಬೆಂಗಳೂರು ಇದರ ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿಗಳಾದ ವಿಜಯ್ ಬಿ. ಎಸ್. ರವರು ಸೌಹಾರ್ದ ಸಹಕಾರಿಯಲ್ಲಿ ಸದಸ್ಯರ ಜವಾಬ್ದಾರಿ, ಹಕ್ಕು ಮತ್ತು ಕರ್ತವ್ಯಗಳು ಹಾಗೂ ಸೌಹಾರ್ದ ಸಹಕಾರಿಯ ಬೆಳವಣಿಗೆಯ ಕುರಿತು ಉಪನ್ಯಾಸವನ್ನು ನೆರವೇರಿಸಿದರು. ನಂತರ ಸಂಘದ ೨೦೨೫-೨೬ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಜರುಗಿತು.

ಸಭೆಯಲ್ಲಿ ವಿಜಯ್ ಬಿ. ಎಸ್. ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ನಿರ್ದೇಶಕರಾದ ಪಿ. ಶ್ಯಾಮ್‌ಪ್ರಸಾದ್ ಕುಡ್ವ ಅವರು ಮಾತನಾಡಿ ಸಂಘದ ಬೆಳವಣಿಗೆಗೆ ಕಾರಣೀಕರ್ತರಾದ ಸಮಾಜದ ಎಲ್ಲಾ ವರ್ಗದವರನ್ನು ಅಭಿನಂದಿಸಿದರು. ಹಾಗೂ ಸಂಘವನ್ನು ಮುಂದಿನ ದಿನಗಳಲ್ಲಿ ಸದೃಢವಾಗಿ ಬೆಳೆಸಲು ಸರ್ವರ ಸಹಕಾರವನ್ನು ಕೋರಿದರು. ವರದಿ ಸಾಲಿನ ಲಾಭದಲ್ಲಿ ಸದಸ್ಯರಿಗೆ ಶೇಕಡಾ 9 ಡಿವಿಡೆಂಡ್ ಘೋಷಿಸಲಾಯಿತು. ಉಪಾಧ್ಯಕ್ಷರಾದ ಎಮ್. ಸದಾಶಿವ ರಾವ್, ನಿರ್ದೇಶಕರಾದ ಉಮೇಶ್ ಜೋಗಿ, ಹೆಚ್. ಸುರೇಶ್ ಶೆಣೈ, ಎಂ. ಗಣೇಶ್ ಪೈ, ಅನಂತಕೃಷ್ಣ ಪ್ರಭು, ಪಿ. ಶ್ಯಾಮ್‌ಪ್ರಸಾದ್ ಕುಡ್ವ, ರೊನಾಲ್ಡ್ ಬ್ರೆಯಾನ್ ಬರ್ನಾರ್ಡ್, ಸೀಮಾ ಹೆಚ್. ಶೆಣೈ, ರಾಘು, ಹಾಗೂ ವೃತ್ತಿಪರ ನಿರ್ದೇಶಕರಾದ ಆನಂದ ಕೆ. ಪೂಜಾರಿ, ಸುಮತಿ ಪಿ ಮತ್ತು ಸಿಬ್ಬಂದಿಗಳಾದ ನಿತ್ಯಾನಂದ ಪೈ, ಕೆ. ವಿಜಯ್ ನಾಯಕ್ ಹಾಗೂ ವೈಷ್ಣವಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಮಾರುತಿ ಎನ್. ಪ್ರಭು ಅವರು ದಶಮಾನೋತ್ಸವ ಕಾರ್ಯಕ್ರಮವನ್ನು ಹಾಗೂ ರಾಮಚಂದ್ರ ಶೆಣೈ ಅವರು ವಾರ್ಷಿಕ ಸಾಮಾನ್ಯ ಸಭೆಯನ್ನು ನಿರೂಪಿಸಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಕಿರಣ ಉಳಿತ್ತಾಯ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

ಬೆಂಗಳೂರು, ಅ.2: ಮಹಾತ್ಮ ಗಾಂಧಿ ಜಯಂತಿಯ ಅಂಗವಾಗಿ ಬೆಂಗಳೂರಿನ ಗಾಂಧಿ ಭವನದಲ್ಲಿ...

ಏಷ್ಯನ್ ಗೇಮ್ಸ್: ಭಾರತದ ಒಟ್ಟು ಪದಕಗಳ ಸಂಖ್ಯೆ 76ಕ್ಕೆ ಏರಿಕೆ; ಪದಕ ಪಟ್ಟಿಯಲ್ಲಿ ಐದನೇ ಸ್ಥಾನ

ಯು.ಬಿ.ಎನ್.ಡಿ., ಅ.2: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪದಕ...

ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ನಮನ

ನವದೆಹಲಿ, ಅ.2: ಮಹಾತ್ಮ ಗಾಂಧಿಯವರ 157ನೇ ಜನ್ಮದಿನದ ಅಂಗವಾಗಿ ದೇಶ ಅವರಿಗೆ...
error: Content is protected !!