Saturday, November 14, 2026
Saturday, November 14, 2026

ಸಿ.ಎ. ಫೌಂಡೇಶನ್‌ ಪರೀಕ್ಷೆ: ಬಿ. ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

ಸಿ.ಎ. ಫೌಂಡೇಶನ್‌ ಪರೀಕ್ಷೆ: ಬಿ. ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

Date:

ಕುಂದಾಪುರ, ನ. 13: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸೆಪ್ಟೆಂಬರ್ -2026ರ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ನೇರಂಬಳ್ಳಿಯ ಪ್ರೇಮಾ ಮತ್ತು ರಾಜು ಪೂಜಾರಿಯವರ ಪುತ್ರಿ ನಕ್ಷಾ ಆರ್. ಪೂಜಾರಿ, ಸುಣ್ಣಾರಿಯ ಭಾಗೀರಥಿ ಮತ್ತು ಅಶೋಕ್‌ ಶೆಟ್ಟಿಯವರ ಪುತ್ರ ಅಭಿಷೇಕ್, ಜಡ್ಕಲ್‌ನ ಕಸ್ತೂರಿ ಮತ್ತು ವಾಸು ಶೆಟ್ಟಿಯವರ ಪುತ್ರ ಆರ್ತೇಶ್ ಶೆಟ್ಟಿ, ಸಂಗಮ್‌ನ ರೇವತಿ ಮತ್ತು ನಾಗೇಶ್‌ ನಾಯ್ಕ್‌ ಅವರ ಪುತ್ರಿ ಐಶ್ವರ್ಯ, ಪಡುಕೋಣೆಯ ಸವಿತಾ ಮತ್ತು ಉದಯ ಅವರ ಪುತ್ರಿ ವರ್ಷಿತಾ ಯು.ಡಿ., ಕೋಟೇಶ್ವರದ ಸುನೀತಾ ಮತ್ತು ಜಗದೀಶ್‌ ಅವರ ಪುತ್ರ ರೋಹಿತ್, ವಾಲ್ತೂರಿನ ಶ್ಯಾಮಲ ಮತ್ತು ಚಂದ್ರಶೇಖರ್‌ ಶೆಟ್ಟಿಯವರ ಪುತ್ರಿ ಶಯನಾ ಸಿ. ಶೆಟ್ಟಿ ಸಿ.ಎ. ಫೌಂಡೇಶನ್‌ನಲ್ಲಿ ಉತ್ತೀರ್ಣರಾಗುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಶೈಕ್ಷಣಿಕ ಮತ್ತು ವೃತ್ತಿಜೀವನದ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೇಂದ್ರ ಸಚಿವರಿಂದ ಅಜ್ಜರಕಾಡಿನ ಆಕಾಶವಾಣಿ ಕೇಂದ್ರದಲ್ಲಿ ಎಫ್‌ಎಂ ಪ್ರೇಷಕದ ಉದ್ಘಾಟನೆ

ಉಡುಪಿ, ನ.13: ಉಡುಪಿ ಎಫ್‌ಎಂ ಸೇವೆಯ ಕಾರ್ಯಾರಂಭದಿಂದಾಗಿ ಕರಾವಳಿ ಪ್ರದೇಶದಲ್ಲಿ ಸಾರ್ವಜನಿಕ...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಐಪಿಎಸ್ ಅಧಿಕಾರಿ ಐ. ಜಯಕುಮಾರ್ ಭೇಟಿ

ಕಾಪು, ನ.13: ಮುಂಬೈ ಪೊಲೀಸ್ ಇಲಾಖೆಯ ಫೋರ್ಸ್ ಒನ್ ಘಟಕದ ವಿಶೇಷ...

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು: ಆಹಾರ ಮೇಳದಲ್ಲಿ ಭರ್ಜರಿ ವಹಿವಾಟು

ಉಡುಪಿ, ನ.13: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ವಾಣಿಜ್ಯ ಸಂಘದ...

ಕಟಪಾಡಿ: 1 ಕೋಟಿ 10 ಲಕ್ಷ ರೂಪಾಯಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕಟಪಾಡಿ, ನ.13: ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ...
error: Content is protected !!