Friday, November 13, 2026
Friday, November 13, 2026

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು: ಆಹಾರ ಮೇಳದಲ್ಲಿ ಭರ್ಜರಿ ವಹಿವಾಟು

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು: ಆಹಾರ ಮೇಳದಲ್ಲಿ ಭರ್ಜರಿ ವಹಿವಾಟು

Date:

ಉಡುಪಿ, ನ.13: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ವಾಣಿಜ್ಯ ಸಂಘದ ವತಿಯಿಂದ ‘ಅರೋಮ 5.O’ ಆಹಾರ ಮೇಳ ನಡೆಯಿತು. ಆಹಾರ ಮೇಳದ ಉದ್ಘಾಟನೆಯನ್ನು ಯೂಟ್ಯೂಬರ್ ಸುದೀಪ್ ಶೆಟ್ಟಿ ಉದ್ಘಾಟಿಸಿದರು. ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಸಿಎ ಟಿ ಪ್ರಶಾಂತ್ ಹೊಳ್ಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳ ಕ್ರೀಯಾಶೀಲತೆಯನ್ನು ಶ್ಲಾಘಿಸಿದರು.

ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಚಂದ್ರಕಾಂತ್ ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥ ವಿನಾಯಕ ಪೈ, ಐಕ್ಯಾಎಸಿ ಸಂಯೋಜಕರಾದ ಡಾ. ರಾಘವೇಂದ್ರ ಎಲ್., ಕಾರ್ಯಕ್ರಮದ ಸಂಯೋಜಕರಾದ ದಿನೇಶ್ ಆರ್ ಮತ್ತು ವಾಣಿಜ್ಯ ಸಂಘದ ವಿದ್ಯಾರ್ಥಿ ಪ್ರತಿನಿಧಿ ರಶ್ಮಿ ಪೂಜಾರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಶ್ಮಿ ಸ್ವಾಗತಿಸಿ, ವೈಭವ್ ವಂದಿಸಿದರು. ಕಾಮಿಲ್ ಕಾರ್ಯಕ್ರಮ ನಿರೂಪಿಸಿದರು. ವ್ಯವಹಾರದ ಪ್ರಾಯೋಗಿಕ ಜ್ಞಾನ ನೀಡುವ ನಿಟ್ಟಿನಲ್ಲಿ ಆಯೋಜಿಸಿದ ಆಹಾರ ಮೇಳದಲ್ಲಿ 11 ಮಳಿಗೆಗಳಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಪಾರ ನಡೆಸಿದರು.

ವಿದ್ಯಾರ್ಥಿಗಳು ಬಗೆ ಬಗೆಯ ಖಾದ್ಯ,ತಂಪು ಪಾನೀಯ,ಐಸ್ ಕ್ರೀಮ್ ಗಳನ್ನು ವ್ಯಾಪಾರಮಾಡಿ ಗಮನ ಸೆಳೆದರು. ಒಂದು ದಿನದ ಆಹಾರ ಮೇಳದಲ್ಲಿ ಸುಮಾರು ಎರಡು ಲಕ್ಷ ವಹಿವಾಟು ನಡೆಯಿತು. 2500 ಕ್ಕೂ ಮಿಕ್ಕಿ ಜನರು ಭಾಗವಹಿಸಿದರು. ತೀರ್ಪುಗಾರರಾಗಿ ಆಗಮಿಸಿದ ತೆಂಕನಿಡಿಯೂರು ಕಾಲೇಜಿನ ಉಪನ್ಯಾಸಕರಾದ ಡಾ. ಗಣೇಶ್ ಪ್ರಸಾದ್, ಉಡುಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸೋನಿಯಾ ಡಿಸೋಜ ಹಾಗೂ ಸ್ಮಿತಾ ಅವರು ವಿದ್ಯಾರ್ಥಿಗಳ ಎಲ್ಲಾ ಸ್ಟಾಲ್ ಗೆ ಭೇಟಿ ನೀಡಿ ತೀರ್ಪು ನೀಡಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಟಪಾಡಿ: 1 ಕೋಟಿ 10 ಲಕ್ಷ ರೂಪಾಯಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕಟಪಾಡಿ, ನ.13: ಕಾಪು ವಿಧಾನಸಭಾ ಕ್ಷೇತ್ರದ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಶ್ರೀ ಕ್ಷೇತ್ರ ಶಂಕರಪುರ: ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ

ಕಟಪಾಡಿ, ನ.13: ಉಡುಪಿ ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ...

ಶ್ರೀ ಕೃಷ್ಣ ಮಠಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ

ಉಡುಪಿ, ನ.13: ಶ್ರೀ ಕೃಷ್ಣ ಮಠಕ್ಕೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ...

ಯಕ್ಷಗಾನ ಕಲಾರಂಗದ 109ನೇ ಮನೆ ಹಸ್ತಾಂತರ

ಉಡುಪಿ, ನ.12: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾನ್ವಿ...
error: Content is protected !!