ಕಟಪಾಡಿ, ನ.13: ಉಡುಪಿ ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದ ವತಿಯಿಂದ ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಏಕಜಾತಿ ಧರ್ಮ ಪೀಠದ ಪೀಠಾಧೀಶರಾದ ಶ್ರೀ ಸಾಯಿ ಈಶ್ವರ ಗುರೂಜಿ, ಜಗತ್ತಿನ 87 ಲಕ್ಷ ಜೀವ ರಾಶಿಯಲ್ಲಿ ಅತ್ಯಂತ ನಂಬಿಕಸ್ತ ಜೀವಿ ನಾಯಿಯಾಗಿದೆ. ಇಂದು ಹಲವಾರು ಕಾರಣಗಳಿಂದ ಬೀದಿ ನಾಯಿಗಳು ತೊಂದರೆ ಅನುಭವಿಸುತ್ತಿವೆ, ಈ ನಿಟ್ಟಿನಲ್ಲಿ ಬೀದಿ ನಾಯಿಗಳ ಸಂರಕ್ಷಣೆ ನಡೆಯಬೇಕು ಎಂದರು.
ಪ್ರತಿಯೊಬ್ಬ ವ್ಯಕ್ತಿ ತನ್ನನ್ನು ತಾನು ಅರಿತುಕೊಂಡಾಗ ಜಗತ್ತಿನಲ್ಲಿ ಬದಲಾವಣೆಯನ್ನು ತರಬಹುದು. ಎಲ್ಲಾ ಜೀವರಾಶಿಗಳಿಗೂ ಆತ್ಮವಿದೆ, ಈ ಆತ್ಮಕ್ಕೆ ಗೌರವ ನೀಡಬೇಕಾಗುವುದು ನಮ್ಮ ಧರ್ಮ ಎಂದರು.
ಬೀದಿ ಶ್ವಾನ ಸಂರಕ್ಷಣೆ ಕುರಿತ ಸ್ಟಿಕರ್ ಬಿಡುಗಡೆಗೊಳಿಸಲಾಯಿತು. ನಿವೃತ್ತ ಪಶು ಸಂಗೋಪನ ಇಲಾಖೆ ಅಧಿಕಾರಿ ಬಿ ರವೀಂದ್ರ ಹೆಬ್ಬಾರ್ ಶುಭ ಹಾರೈಸಿದರು. ಮಂದಿರದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ರಾಮ ಟಿ ಪೂಜಾರಿ, ಭದ್ರಕಾಳಿ ದೇವಸ್ಥಾನದ ಮನೋರಮ ಬಜ್ಪೆ, ಶ್ರೀಧರ್ ಶಾಂತಿ ಮುಂತಾದವರು ಉಪಸ್ಥಿತರಿದ್ದರು.
ಟ್ರಸ್ಟಿ ಗೀತಾಂಜಲಿ ಸುವರ್ಣ ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು. ಟ್ರಸ್ಟಿ ಸತೀಶ್ ದೇವಾಡಿಗ, ವಿಘ್ನೇಶ್ ನೀಲಾವರ, ನಾಗರಾಜ್ ಬೈಂದೂರು, ವಿಜಯ್ ಕುಂದರ್, ಆಡಳಿತ ಮಂಡಳಿಯ ಲಾವಣ್ಯ, ವಿನೋದ್ ಕುಮಾರ್, ರಾಜೇಶ್ ಇನ್ನಂಜೆ, ಶ್ವೇತಾ, ಜಯರಾಮ ಶೆಟ್ಟಿಗಾರ್, ಪ್ರತಿಮ ಪ್ರಭಾಕರ್, ಜ್ಯೋತಿ ಶೆಟ್ಟಿ, ಚೇತನ ಶೆಟ್ಟಿ ಮುಂತಾದವರಿದ್ದರು.




By
ForthFocus™