ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ವಾರ್ಷಿಕ ಮಹಾಸಭೆಯು ಸಂಸ್ಥೆಯ ಆವರಣದಲ್ಲಿ ಜರುಗಿತು. ಸಂಸ್ಥೆಯ ಅಧ್ಯಕ್ಷ ಡಾ. ಅವನೀಂದ್ರನಾಥ್ ರಾವ್ ವೈ. ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. 2023-24, 2024-25, 2025-26ರ ವಾರ್ಷಿಕ ವರದಿ, ಲೆಕ್ಕಪತ್ರಗಳು ಮತ್ತು ಬಜೆಟ್ ಅನ್ನು ಸಭೆ ಅನುಮೋದಿಸಿತು. ಈ ಮೊದಲು ನಡೆದ ವಿಶೇಷ ಸಭೆಯಲ್ಲಿ ಸಂಸ್ಥೆಗೆ ನಡೆಯುವ ಮುಂದಿನ ಚುನಾವಣೆವರೆಗೆ ಡಾ. ಅವನೀಂದ್ರನಾಥ್ ರಾವ್ ಅವರು ಅಧ್ಯಕ್ಷರಾಗಿ ಮತ್ತು ಕಾಶೀನಾಥ್ ಬಿರಾದಾರ್ ಅವರು ಕಾರ್ಯದರ್ಶಿಯಾಗಿ ಮುಂದುವರಿಯಬೇಕು ಎನ್ನುವ ನಿರ್ಣಯವನ್ನು ಹಿರಿಯ ಸದಸ್ಯ ಈಶ್ವರ ಮಡಿವಾಳ ಅವರು ಪ್ರಸ್ತಾಪಿಸಿ, ಕೆ.ಆರ್. ರಾಮಮೂರ್ತಿ ಅನುಮೋದಿಸಿದರು. ಆಜೀವ ಸದಸ್ಯರಾದ ರೇಣುಕುಮಾರ್ ಆರ್., ಶ್ರೀಹರಿ, ಶಿವಪ್ಪ ಎಂ. ಮತ್ತು ಕೃಷ್ಣರಾಜ್ ಚರ್ಚೆಯಲ್ಲಿ ಭಾಗವಹಿಸಿದರು. ಉಪಾಧ್ಯಕ್ಷೆ ವೀಣಾ ಜಗದೀಶ್, ಗೌರವ ಕಾರ್ಯದರ್ಶಿ ಕಾಶೀನಾಥ್ ಬಿರಾದಾರ್, ಶಾಲೆಯ ಪ್ರಬಂಧಕ ಉಮೇಶ್ ಬಿ.ಆರ್. ಉಪಸ್ಥಿತರಿದ್ದರು.
ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಮಹಾಸಭೆ
ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಮಹಾಸಭೆ
Date:




By
ForthFocus™