ತೆಂಕನಿಡಿಯೂರು, ಅ.3: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಐಕ್ಯೂಎಸಿ ಹಾಗೂ ಕೌಂಸೆಲಿಂಗ್ ಸೆಲ್ ಆಶ್ರಯದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ಅ.3 ಶನಿವಾರ ಕಾಲೇಜಿನ ಎವಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ ವಿ. ಗಾಂವ್ಕರ್ ಇವರು, ಲಭ್ಯವಿರುವ ಸಂಪನ್ಮೂಲಗಳ ಸದ್ಬಳಕೆಯನ್ನು ಮಾಡುವ ಮೂಲಕ ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿಗಳನ್ನು ಹಾಕುವ ಮೂಲಕ ಉತ್ತುಂಗದ ಸಾಧನೆಯಕಡೆಗೆ ವಿದ್ಯಾರ್ಥಿ ಜೀವನವನ್ನು ಕೇಂದ್ರೀಕರಿಸಿ ತನ್ಮೂಲಕ ಕುಟುಂಬಕ್ಕೆ ಹಾಗೂ ಕಲಿತ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆಳ್ವಾಸ್ ಸೆಂಟರ್ ಫಾರ್ ವೆಲ್ನೆಸ್ ಆಂಡ್ ಟ್ರೈನಿಂಗ್ ಇದರ ನಿರ್ದೇಶಕಿ ಡಾ. ದೀಪಾ ಕೊಟಾರಿ ಅವರು ಪಿಲ್ಲರ್ಸ್ ಆಫ್ ವೆಲ್ನೆಸ್ ಬಗ್ಗೆ ವಿಸ್ತ್ರತವಾದ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆಯ್ಕೆ, ಮನೋಭಾವ, ಒಡನಾಟವನ್ನು ಯಾವ ರೀತಿ ಸ್ಥಾಪಿಸಿ ತಮ್ಮ ವಯಕ್ತಿಕ ಬೆಳವಣಿಗೆಗೆ ಇವುಗಳನ್ನು ಇಂಧನವನ್ನಾಗಿಸಬಹುದು ಎಂಬ ವಿಚಾರದ ಕುರಿತು ವಿವಿಧ ಚಟುವಟಿಕೆಗಳ ಮೂಲಕ ಸವಿವರ ಮಾರ್ಗದರ್ಶನ ನೀಡಿದರು. ಸ್ನಾತಕೋತ್ತರ ಸಮಾಜಕಾರ್ಯ ಹಾಗೂ ಕೌಂಸಲಿಂಗ್ ಸೆಲ್ ಸಂಯೋಜಕಿ ಡಾ. ಶ್ರೀದೇವಿ ಕೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ನಾತಕೋತ್ತರ ವಿಭಾಗದ ಶೈಕ್ಷಣಿಕ ಸಲಹೆಗಾರರಾದ ಡಾ. ಶ್ರೀಧರ್ ಭಟ್, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಸಂಯೋಜಕಿ ಡಾ. ಜಯಮಂಗಳ, ಸ್ನಾತಕೋತ್ತರ ಕನ್ನಡ ವಿಭಾಗದ ಸಂಯೋಜಕಿ ರತ್ನಮಾಲ, ಎಂ.ಎ. ಇತಿಹಾಸ ಸಂಯೋಜಕ ಡಾ. ಮಹೇಶ್ ಕುಮಾರ್ ಕೆ.ಇ ಉಪಸ್ಥಿತರಿದ್ದರು. ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂ.ಕಾಂ ಸಂಯೋಜಕ ಡಾ. ದತ್ತ ಕುಮಾರ್ ಸ್ವಾಗತಿಸಿ, ಪ್ರಥಮ ಎಂ.ಎ ಅರ್ಥಶಾಸ್ತ್ರ ವಿದ್ಯಾರ್ಥಿನಿ ಅಶ್ವಿತಾ ವಂದಿಸಿದರು. ಪ್ರಥಮ ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಸಂಜನಾ ಕಾರ್ಯಕ್ರಮ ನಿರೂಪಿಸಿದರು.




By
ForthFocus™