Home ಸುದ್ಧಿಗಳು ಪ್ರಾದೇಶಿಕ ಕರಾವಳಿ ಕರಾಟೆಪಟುಗಳಿಗೆ ಬ್ಲ್ಯಾಕ್ ಬೆಲ್ಟ್

ಕರಾವಳಿ ಕರಾಟೆಪಟುಗಳಿಗೆ ಬ್ಲ್ಯಾಕ್ ಬೆಲ್ಟ್

103
0

ಉಡುಪಿ, ಮೇ 5: ಕರಾಟೆ ಬುಡೋಕಾನ್ ಇಂಟರ್ನ್ಯಾಷನಲ್ ವತಿಯಿಂದ ಕೊಬುಡೊ ಬುಡೋಕಾನ್ ಕರಾಟೆ ಡೊ ಅಸೋಸಿಯೇಷನ್ (ರಿ) ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಉಡುಪಿ ದೊಡ್ಡಣ್ಣಗುಡ್ಡೆ ಜನತಾ ವ್ಯಾಯಾಮಶಾಲೆ ಇಲ್ಲಿ 2024 ನೇ ಸಾಲಿನ ಕರಾಟೆ ಬ್ಲ್ಯಾಕ್ ಬೆಲ್ಟ್ ವಿಭಾಗದ ಪರೀಕ್ಷೆ ನಡೆಯಿತು. ಸಂಸ್ಥೆಯ ಗೌರವಾಧ್ಯಕ್ಷರಾದ ಡಾ. ಎನ್. ಬಿ. ವಿಜಯ ಬಲ್ಲಾಳ್, ಸ್ಥಳೀಯ ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಯಕ್ಷಗಾನ ಕಲಾಕೇಂದ್ರ ಗುಂಡಿಬೈಲು ಅಧ್ಯಕ್ಷರಾದ ಬಾಬು ಗೌಡ, ವ್ಯಾಯಾಮಶಾಲೆಯ ಅಧ್ಯಕ್ಷರಾದ ರಾಮದಾಸ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಏಷ್ಯದ ಮುಖ್ಯ ಪರಿವೀಕ್ಷಕರಾದ ಬಿ. ಪರಮೇಶ್ ಉದ್ಘಾಟಿಸಿದರು. ಸಂಸ್ಥೆಯ ಮುಖ್ಯ ಶಿಕ್ಷಕರಾದ ಕ್ಯೋಷಿ ರವಿ ಕುಮಾರ್ ಉದ್ಯಾವರ, ಶಿಹಾನ್ ಹರ್ಷ ಭಾಗವತ್, ಶಿಹಾನ್ ಸಚಿನ್ ಪಿತ್ರೋಡಿ, ಶಿಹಾನ್ ಸೋಮನಾಥ್, ಶಿಹಾನ್ ದೀಪಕ್ ಪಿರೇರ, ಡಾ. ಅನೂಪ್ ಪೂಜಾರಿ, ಸೆನ್ಸಾಯಿ ಸೀತಾರಾಮ್ ಪೂಜಾರಿ ಉಪಸ್ಥಿತರಿದ್ದರು. ಸುಮಾರು 35 ಕರಾಟೆ ವಿದ್ಯಾರ್ಥಿಗಳು ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆಯಾದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.