Home ಸುದ್ಧಿಗಳು ಪ್ರಾದೇಶಿಕ ಗುರುಗಳಿಗೆ ಗೌರವ ಸಲ್ಲಿಸುವುದು ಶ್ರೇಷ್ಠ ಕಾರ್ಯ: ಆನಂದ್ ಸಿ ಕುಂದರ್

ಗುರುಗಳಿಗೆ ಗೌರವ ಸಲ್ಲಿಸುವುದು ಶ್ರೇಷ್ಠ ಕಾರ್ಯ: ಆನಂದ್ ಸಿ ಕುಂದರ್

97
0

ಕೋಟ, ಮೇ 5: ಗುರುಗಳ ಬಗ್ಗೆ ವಿಶೇಷ ಗೌರವ ಹಾಗೂ ಅವರ ನೆನಪಿನ ಮೂಲಕ ಶಿಷ್ಯ ವರ್ಗ ಗೌರವ ಸಲ್ಲಿಸುವ ಕಾರ್ಯ ಶ್ರೇಷ್ಠವಾದದ್ದು ಎಂದು ಮಣೂರು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು. ಭಾನುವಾರ ಕೋಟ ಮಣೂರು ಕೆ.ಸಿ ಕುಂದರ್ ಸಭಾಂಗಣದಲ್ಲಿ ಪಡುಕರೆ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಹಿಂದಿನ ವಿಧ್ಯಾರ್ಥಿಗಳು ಹಮ್ಮಿಕೊಂಡ ಪುನರ್ ಮಿಲನ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ ಶೈಕ್ಷಣಿಕ ಜೀವನದ ಪರಿಭಾಷೆಗೆ ಮುನ್ನುಡಿ ಬರೆದ ಶಿಕ್ಷಕರು ತಮ್ಮ ಶಿಷ್ಯವೃಂದಕ್ಕೆ ಬದುಕಿನ ದಾರಿದೀಪ ನೀಡಿ ಆ ವಿದ್ಯಾರ್ಥಿಗಳಿಂದ ಗೌರವ ಸಲ್ಲಿಸಿಕೊಳ್ಳುವುದೇ ಬಹುದೊಡ್ಡ ಭಾಗ್ಯವಾಗಿದೆ. ಶಾಲಾ ಜೀವನವನ್ನು ಮತ್ತೆ ನೆನೆಪಿಸಿ ಆ ಮೂಲಕ ಆಗಿನ ಗುರುಗಳಿಗೆ ವಿಶೇಷ ಗೌರವ ಕಾಣಿಕೆ ಸಲ್ಲಿಸಿದ ಕಾರ್ಯ ನಿಜಕ್ಕೂ ಸಂತೋಷ ನೀಡಿದೆ. ಇಂಥಹ ಕಾರ್ಯಕ್ರಮಗಳು ಆಗಾಗ ನಡೆದರೆ ಆ ಗುರುಗಳಿಗೆ ನೀಡುವ ಬಹುದೊಡ್ಡ ಗೌರವವಾಗಿದೆ ಎಂದು ಹೇಳಿದರು. 1995, 99ರವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಭವಾನಿ ಟೀಚರ್, ಗಾಯತ್ರಿ, ಸಹದೇವಿ ಕೋಟ್ಯಾನ್, ಬಸವ ಪೂಜಾರಿ, ಗಜೇಂದ್ರ ಶೆಟ್ಟಿ, ಸಂಜೀವ ಶೆಟ್ಟಿ, ರಾಜೀವ ಶೆಟ್ಟಿ, ಪ್ರಸಿಲ್ಲಾ, ಹರಿದಾಸ್ ಕಿಣಿ, ಕೃಷ್ಣ ಮಾಸ್ಟರ್, ಜ್ಞಾನೇಶ್ಚರಿ, ಶೇಖರ್ ಶೆಟ್ಟಿ, ನಾಗರತ್ನ, ಲಿನೇಖ ಟೀಚರ್, ಶೇಕರಪ್ಪ, ರುದ್ರಾಚಾರ್, ಜ್ಯೋತಿ, ವಿಠ್ಠಲ್ ವಿ ಗಾಂವ್ಕರ್, ರಾಮಚಂದ್ರ ಜೋಷಿ, ನಾಗೇಶ್ ಶ್ಯಾನುಭಾಗ್, ವಿಜಯ ಕುಮಾರ್, ರೇಖಾ ಸಿ ನಾಯಕ್, ಉಮಾದೇವಿ ಇವರುಗಳಿಗೆ ಗುರುವಂದನೆ ಸಲ್ಲಿಸಲಾಯಿತು. ವಿಶೇಷವಾಗಿ ಆಗಿನ ಕಾಲದಲ್ಲಿ ಐಸ್‌ಕ್ಯಾಂಡಿ ವ್ಯಾಪಾರಿ ಸುಬ್ಬಣ್ಣ ಗಾಣಿಗ ಇವರನ್ನು ಸನ್ಮಾನಿಸಲಾಯಿತು. ಶಿಷ್ಯ ವೃಂದದಿಂದ ಅನಿಸಿಕೆ, ಗುರುಗಳ ನೆನಪಿನ ಬುತ್ತಿ ವೇದಿಕೆಯಲ್ಲಿ ಅನಾವರಣಗೊಂಡಿತು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಕೆ.ಎಸ್., ಪ್ರೌಢಶಾಲಾ ವಿಭಾಗದ ಶಿಕ್ಷಕ ರಾಮದಾಸ್ ನಾಯಕ್ ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ಪ್ರೀತಿಕಾ, ಚಂದ್ರಶೇಖರ್ ವಾಚಿಸಿದರು. ಹಳೆ ವಿದ್ಯಾರ್ಥಿ ವಿಮಲ ಸ್ವಾಗತಿಸಿ, ಸರಿತಾ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿ ವಂದಿಸಿದರು. ನಾಗರಾಜ್ ಪಡುಕರೆ ಗಿಡಗಳನ್ನು ವಿತರಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.