Wednesday, December 4, 2024
Wednesday, December 4, 2024

ಮನಸ್ಸನ್ನು ಅರಿತರೆ ಜಗತ್ತನ್ನೇ ಅರಿತ ಹಾಗೆ

ಮನಸ್ಸನ್ನು ಅರಿತರೆ ಜಗತ್ತನ್ನೇ ಅರಿತ ಹಾಗೆ

Date:

ದೇಹಕ್ಕೆ ಕೊಡುವಷ್ಟು ಪ್ರಾಮುಖ್ಯತೆ ನಾವು ಮನಸ್ಸಿಗೆ ನೀಡುವುದಿಲ್ಲ. ನಿಜವಾದ ಸ್ವಾಸ್ಥ್ಯ ಬೇಕಾದದ್ದು ನಮ್ಮ ಮನಸ್ಸಿಗೆ. ಮನಸ್ಸು ಖುಷಿಯಾಗಿದ್ದರೆ ದೇಹವು ತನ್ನಷ್ಟಕ್ಕೆ ಆರೋಗ್ಯದಿಂದ ಇರುತ್ತದೆ. ಆದ್ದರಿಂದ ಮನಸ್ಸನ್ನು ಶುದ್ಧೀಕರಿಸುವುದು ಅಗತ್ಯ. ಮನಸ್ಸಿನಲ್ಲಿ ತುಂಬಿರುವಂತಹ ಕಲ್ಮಶಗಳನ್ನು ಹೊರ ಹಾಕುವುದು ಅಗತ್ಯ. ಮನಸ್ಸು ಆಲೋಚನೆಗಳ ಬಿಡಾರ. ಎದ್ದಾಗಿನಿಂದ ಮಲಗುವವರೆಗೆ ಬಿಡುವಿಲ್ಲದೆ ಯೋಚಿಸುತ್ತಿರುತ್ತದೆ. ಹೀಗಿರುವಾಗ ಮನಸ್ಸನ್ನು ನಿಯಂತ್ರಿಸುವುದು ಸಾಧ್ಯವೇ? ಮನಸ್ಸಿದ್ದರೆ ಎಲ್ಲವೂ ಸಾಧ್ಯ, ಅದು ನಿಮಗೂ ಗೊತ್ತು. ನಾವು ನಮ್ಮ ಜ್ಞಾನೇಂದ್ರಿಯದಿಂದ ಹೊರ ಜಗತ್ತನ್ನು ನೋಡುತ್ತೇವೆ. ನಮ್ಮ ಒಳ ಜಗತ್ತನ್ನು ನೋಡಲು ನಮ್ಮ ಮನಸ್ಸಿನಿಂದ ಮಾತ್ರ ಸಾಧ್ಯ. ಇದನ್ನು ತೆರೆಯಬೇಕಾದರೆ ಹೊರಜಗತ್ತಿನಿಂದ ದೂರ ಸರಿಯಬೇಕು. ನಮ್ಮ ಮನಸ್ಸನ್ನು ಅರಿತರೆ ಜಗತ್ತು ಗೆದ್ದ ಹಾಗೆ. ನಾವು ನಮ್ಮ ಒಳ ಜಗತ್ತನ್ನು ಅರಿಯಲು ಪ್ರಯತ್ನಿಸಬೇಕು ಆಗ ನಮ್ಮ ಮನಸ್ಸಿನ ಬಗ್ಗೆ ಅದರ ಆಲೋಚನೆಗಳ ಬಗ್ಗೆ ಅರಿವಾಗುತ್ತದೆ. ಮನಸ್ಸನ್ನು ಅರಿಯುವುದೆಂದರೆ ನಮ್ಮ ಆಲೋಚನೆಗಳನ್ನು ತಿಳಿಯುವುದು. ನಾವು ದಿನವಿಡೀ ಏನು ಆಲೋಚಿಸುತ್ತೇವೆ? ಯಾಕೆ ಯೋಚಿಸುತ್ತೇವೆ?ಅದರ ಉಪಯೋಗವುಂಟೆ? ನಮ್ಮ ಆಲೋಚನೆಗಳಿಂದ ನಮಗೆ ಹಿತವಾಗುತ್ತಿದೆಯೇ ಅಥವಾ ಮನಸ್ಸು ವಿಕಾರಗೊಳ್ಳುತ್ತಿದೆಯೇ? ಇದೆಲ್ಲವನ್ನು ಅರಿಯಲು ಪ್ರಯತ್ನ ಪಡಬೇಕು.

ಇದನ್ನು ಹೇಗೆ ಸಾಧಿಸುವುದು? ಮೌನಾಚರಣೆಯಿಂದ ಅಥವಾ ಧ್ಯಾನದಿಂದ ಅಥವಾ ಸುಮ್ಮನೆ ಎಲ್ಲದನ್ನು ನೋಡಿ ಕೇಳಿ ಆನಂದಿಸುವುದರಿಂದ. ಇದು ಒಂದು ದಿನದಲ್ಲಿ ಬರುವಂತದ್ದಲ್ಲ. ಅನೇಕ ತಿಂಗಳು ಬೇಕಾಗಬಹುದು. ಆದರೆ ಪ್ರಯತ್ನ ಪಡಲು ಶುರು ಮಾಡಿದ ಪ್ರಥಮ ದಿನದಿಂದ ನಮ್ಮ ಮನಸ್ಥಿತಿ ಬದಲಾಗುತ್ತದೆ. ಮುಂದೆ ಅದು ನಾವು ಏನೇ ಯೋಚಿಸಲಿ ಅದರ ಹಿನ್ನೆಲೆ ತಕ್ಷಣ ಗೊತ್ತಾಗಿ ಬಿಡುತ್ತದೆ. ನಮ್ಮ ಮನಸ್ಸಿಗೆ ಟ್ರೈನಿಂಗ್ ನ ಅವಶ್ಯಕತೆ ಇರುತ್ತದೆ. ಅದನ್ನು ಪಳಗಿಸಿದರೆ ಮನಸ್ಸು ನಮ್ಮ ಹಿಡಿತದಲ್ಲಿರುತ್ತದೆ. ನಮ್ಮ ಮನಸ್ಸು ನಾವು ಹೇಳಿದ ಹಾಗೆ ಕೇಳಿದರೆ ಯಶಸ್ಸಿನ ಕಡೆ ದಾಪುಗಾಲು ಇಟ್ಟ ಹಾಗೆ. ಮೊದಲು ಮನಸ್ಸನ್ನು ಶುದ್ಧೀಕರಿಸಿ. ಸುಳ್ಳು, ರಾಗ, ದ್ವೇಷ ಮೊದಲಾದ ಕೆಟ್ಟ ಗುಣಗಳನ್ನು ದೂರ ಮಾಡಬೇಕು. ಒಳ್ಳೆಯದನ್ನು ಮಾತಾಡಿ ಒಳ್ಳೆಯದನ್ನು ನೋಡಿ ಹಾಗು ಕೇಳಿ. ಆಗ ನಮ್ಮ ಮನಸ್ಸು ಕೆಟ್ಟದ್ದನ್ನು ಗ್ರಹಿಸುವುದಿಲ್ಲ. ಒಳ್ಳೆಯ ಆಹಾರ ಸೇವಿಸಿರಿ. ನಾವು ಸೇವಿಸುವ ಆಹಾರ ಮನಸ್ಸಿಗೆ ತಲುಪುತ್ತದೆ. ಒಳ್ಳೆಯ ಪುಸ್ತಕಗಳನ್ನು ಓದಿ. ಮನಸ್ಸು ಶುದ್ಧ ಮಾಡುವುದು ನಿರಂತರವಾಗಿರಲಿ. ಪರಿಸರದ ಜೊತೆ ಒಡನಾಟವಿರಲಿ. ಧ್ಯಾನ, ಪ್ರಾಣಾಯಾಮ ಯೋಗಾಸನಗಳನ್ನು ರೂಡಿಸಿಕೊಳ್ಳಿ. ಇವೆಲ್ಲವುಗಳಿಂದ ಮನಸ್ಸು ಶುದ್ಧವಾಗುತ್ತದೆ. ಜೀವನವನ್ನು ತಿಳಿಯಲು ಮನಸ್ಸನ್ನು ತಿಳಿದರೆ ಸಾಕು. ಅದನ್ನು ಸ್ವಸ್ಥವಾಗಿಟ್ಟುಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಮನಸ್ಸನ್ನು ಅರಿತರೆ ಜಗತ್ತನ್ನೇ ಅರಿತ ಹಾಗೆ.

-ಡಾ. ಹರ್ಷಾ ಕಾಮತ್

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ಗೋಶಾಲೆಗೆ ಬೈಹುಲ್ಲು ಕೊಡುಗೆ

ಬೆಳ್ಮಣ್, ಡಿ.3: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ...

ಬ್ರಹ್ಮಾವರ: ಗಾಳಿ ಮಳೆಗೆ ಮನೆಗಳಿಗೆ ಹಾನಿ

ಉಡುಪಿ, ಡಿ.3: ಚಂಡಮಾರುತದ ಪ್ರಭಾವದಿಂದ ಸೋಮವಾರ ಸುರಿದ ಭಾರೀ ಮಳೆಗೆ ಬ್ರಹ್ಮಾವರ...

ಸ್ನೇಹಿತರ ಬಳಗದಿಂದ ಭಾಸ್ಕರ್ ಶೆಟ್ಟಿ ಅವರಿಗೆ ಸನ್ಮಾನ

ಗಂಗೊಳ್ಳಿ, ಡಿ.3: ಉತ್ತಮ ಸ್ನೇಹಿತರನ್ನು ಹೊಂದುವುದು ಜೀವನದಲ್ಲಿ ನಾವು ಮಾಡುವ ಅತಿ...
error: Content is protected !!