Tuesday, November 10, 2026
Tuesday, November 10, 2026

ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ; ಇತಿಹಾಸ ನೆನಪಿಸಿದ ಪರ್ಕಳ ವಾಲಿಬಾಲ್​ ಫ್ರೆಂಡ್ಸ್​

ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ; ಇತಿಹಾಸ ನೆನಪಿಸಿದ ಪರ್ಕಳ ವಾಲಿಬಾಲ್​ ಫ್ರೆಂಡ್ಸ್​

Date:

ಕ್ರೀಡಾ ಕ್ಷೇತ್ರದೊಂದಿಗೆ ಸಾಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ವಾಲಿಬಾಲ್​ ಫ್ರೆಂಡ್ಸ್ ತಂಡವು ಈ ಬಾರಿ ತುಳುನಾಡಿನ ವೈಭವ ಸ್ಮರಿಸುವ ಆಕಾಶದೀಪದೊಂದಿಗೆ ದೀಪಾವಳಿ ಆಚರಿಸಿದೆ.

ಬದುಕಿನ ಅಂಧಕಾರ ಕಳೆಯುವ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಏನಾದರೊಂದು ವಿಶೇಷ ಜ್ಞಾನ ನೀಡುವುದು ಈ ಸಂಘಟನೆಯ ವಿಶಿಷ್ಟತೆಯಾಗಿದೆ.

ತುಳು ಭಾಷೆಗೆ ಮಾನ್ಯತೆ: ಇತ್ತೀಚೆಗಷ್ಟೇ ರಾಜ್ಯ ಸರ್ಕಾರವು ತುಳು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿದೆ. ಹೀಗಾಗಿ ತುಳುನಾಡಿನ ವಿಶಿಷ್ಟತೆ, ಸಂಸ್ಕೃತಿ, ಸಂಪ್ರದಾಯ ಹಾಗೂ ಜನಜೀವನ ಬಿಂಬಿಸುವ ಬೃಹತ್​ ಆಕಾಶದೀಪ ಸಿದ್ಧಪಡಿಸಲಾಗಿದೆ. ಸಹಕಾರ ಭಾರತಿ ಹಾಗೂ ಪರ್ಕಳದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ಧಿನಿ ದೇವಸ್ಥಾನದ ಸಹಕಾರದಲ್ಲಿ ದೇಗುಲದ ಮುಂಭಾಗದ ರಸ್ತೆಯಲ್ಲಿ ಬೃಹತ್​ ಆಕಾಶದೀಪ ಅಳವಡಿಸಲಾಗಿದೆ.

ಅಷ್ಟಾಕೃತಿಯ ಗೂಡುದೀಪ: 13 ಫೀಟ್​ ಎತ್ತರ, 6 ಫೀಟ್​ ಅಗಲದ ಅಷ್ಟಾಕೃತಿಯ ಆಕಾಶದೀಪದಲ್ಲಿ ತುಳುನಾಡಿನ ಆಚರಣೆಯ ಚಿತ್ರ ಅಳವಡಿಸಲಾಗಿದೆ. ಕೋಲ, ಯಕ್ಷಗಾನ, ಕೊರಲು ಕಟ್ಟುವುದು, ಕಂಬಳ, ಆಟಿ ಕಳಿಂಜ, ಕೋಳಿ ಅಂಕ, ಹುಲಿ ಕುಣಿತ, ಭತ್ತಕೃಷಿ, ಡೋಲು, ಗರಡಿ ನೇಮೋತ್ಸವ ಹೀಗೆ ತುಳುನಾಡಿನ ವಿವಿಧ ಜನಪದೀಯ ಸಂಸ್ಕೃತಿಯನ್ನು ಬಿಂಬಿಸಲಾಗಿದೆ.

ಮುಂಬರುವ ಚಂಪಾಷಷ್ಠಿಯವರೆಗೂ ಈ ಆಕಾಶದೀಪವು ತುಳುನಾಡಿನ ಸಂಸ್ಕೃತಿ, ವೈಭವವನ್ನು ಸಾರಲಿದೆ. ಕಳೆದ ವರ್ಷ ‘ಆಪರೇಷನ್​ ಸಿಂಧೂರ’ ಆಕಾಶದೀಪದ ಮೂಲಕ ಭಾರತಾಂಬೆಯ ‘ವಿಜಯದ ಸ್ಮರಣೆ’ ಮಾಡಿದ್ದೆವು. ಈ ಬಾರಿ ತುಳುವಿಗೆ 2ನೇ ಭಾಷೆಯ ಸ್ಥಾನಮಾನ ಲಭಿಸಿದ್ದರಿಂದ ತುಳುನಾಡಿನ ಸಂಸ್ಕೃತಿ, ಪರಶುರಾಮನ ಶಕ್ತಿ-ಭಕ್ತಿಯ ಜ್ಞಾನ ಸ್ಮರಿಸುವಂತೆ ಮಾಡಲಾಗಿದೆ ಎಂದು ಪರ್ಕಳದ ವಾಲಿಬಾಲ್​ ಫ್ರೆಂಡ್ಸ್​ ತಂಡ ತಿಳಿಸಿದೆ.

ಪರಶುರಾಮನ ‘ತ್ರಿ-ಡಿ’ಸ್ಮರಣೆ: ಆಕಾಶದೀಪವು ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವುದರೊಂದಿಗೆ ತುಳುನಾಡಿನ ಸೃಷ್ಟಿಕರ್ತನೂ ಆದ ಮಹಾವಿಷ್ಣುವಿನ ಅವತಾರ ಪರಶುರಾಮನ ಸ್ಮರಣೆಯನ್ನೂ ಮಾಡಲಾಗಿದೆ. ಭೂಮಂಡಲದಾದ್ಯಂತ 21 ಬಾರಿ ಪ್ರದಕ್ಷಿಣೆ ಹಾಕಿ ಕ್ಷತ್ರಿಯರನ್ನೆಲ್ಲ ಸಂಹರಿಸಿದ ಪರಶುರಾಮನು ದೇಶದ ಪಶ್ಚಿಮ ಭಾಗದತ್ತ (ಈಗಿನ ಮಹಾರಾಷ್ಟ್ರದ ನಾಸಿಕ್​ ಜಿಲ್ಲೆಯ ಬಾಗ್ಲಾನ್​ ತಾಲೂಕಿನಲ್ಲಿರುವ ಸಲ್ಹೇರ್​ ಕೋಟೆ ಪ್ರದೇಶ) ಬಂದು ತನ್ನ ಪರಶು (ಕೊಡಲಿ)ವನ್ನು ಸಮುದ್ರಕ್ಕೆ ಎಸೆದು ಸಮುದ್ರದ ನೀರು ಹಿಂದಕ್ಕೆ ಹೋಗುವಂತೆ ಮಾಡಿ ಇಂದಿನ ಕರಾವಳಿ ಪ್ರದೇಶ ನಿರ್ಮಿಸಿದನೆಂದು ಪುರಾಣ ಕಥೆಯಿದೆ. ಬಳಿಕ ಕರಾವಳಿಯಲ್ಲಿ ವಿವಿಧ ಸಂಸ್ಕೃತಿ ಸೃಷ್ಟಿಯಾಗಿದ್ದು, ತುಳು ಸಂಸ್ಕೃತಿಯೂ ಪ್ರಮುಖವಾಗಿದೆ. ಅದರ ಸ್ಮರಣೆಗಾಗಿ ಪರಶುವನ್ನು ಎಸೆಯುತ್ತಿರುವ ಪರಶುರಾಮನನ್ನು ‘ತ್ರಿ-ಡಿ’ ಚಿತ್ರದ ಮೂಲಕ ಅನಾವರಣಗೊಳಿಸಿ ಜನರ ನೆಲೆಯ ಮಾಹಿತಿ ನೀಡಲಾಗಿದೆ.

ದೀಪಾವಳಿಯ ನಿಮಿತ್ತ ಪರ್ಕಳ ವಾಲಿಬಾಲ್​ ಫ್ರೆಂಡ್ಸ್ ತಂಡ ರಚಿಸಿರುವ ತುಳು ಸಂಸ್ಕೃತಿ ಬಿಂಬಿಸುವ ಆಕಾಶದೀಪ ಹಾಗೂ ಕರಾವಳಿ ಪ್ರದೇಶ ಸೃಷ್ಟಿಸಿದ ಪರಶುರಾಮನ ಶಕ್ತಿ ಅನಾವರಣದ ‘ತ್ರಿ-ಡಿ’ ಚಿತ್ರ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ: ಸಾಹಿತಿ ಇಂದಿರಾ ಹಾಲಂಬಿ

ಉಡುಪಿ, ನ.9: ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿ​ಕ ಕ್ಷೇತ್ರದಲ್ಲಿ...

ಶ್ರೀಕೃಷ್ಣ ಮಠದಲ್ಲಿ ಗೋಪೂಜೆ ಸಂಭ್ರಮ; ರಥಬೀದಿಯಲ್ಲಿ ವೈಭವದ ಗೋ-ಮೆರವಣಿಗೆ

ಉಡುಪಿ, ನ.9: ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಸಂದರ್ಭದಲ್ಲಿ ಗೋಪೂಜೆ ವೈಭವದಿಂದ ನಡೆಯಿತು....

ದೀಪಾವಳಿ: ಬೆಳಕಿನ ಹಬ್ಬದ ಸಮಗ್ರ ಇತಿಹಾಸ, ಪೌರಾಣಿಕ ಹಿನ್ನೆಲೆ ಮತ್ತು ಆಚರಣೆಗಳು

ದೀಪಾವಳಿ ಅಥವಾ ದೀಪಾವಳೀ ಎಂದರೆ ಸಂಸ್ಕೃತದಲ್ಲಿ 'ದೀಪಗಳ ಆವಳಿ' (ಸಾಲು ಸಾಲು...

ಪೆರಂಪಳ್ಳಿ: ಬ್ಯಾರಿಕೇಡ್‌ಗಳ ಹಸ್ತಾಂತರ

ಪೆರಂಪಳ್ಳಿ, ನ.9: ಪವರ್ ಫ್ರೆಂಡ್ಸ್, ಪೆರಂಪಳ್ಳಿ ಇವರ ನೇತೃತ್ವದಲ್ಲಿ ಪೆರಂಪಳ್ಳಿ ಚರ್ಚ್...
error: Content is protected !!