Tuesday, November 10, 2026
Tuesday, November 10, 2026

ಪೆರಂಪಳ್ಳಿ: ಬ್ಯಾರಿಕೇಡ್‌ಗಳ ಹಸ್ತಾಂತರ

ಪೆರಂಪಳ್ಳಿ: ಬ್ಯಾರಿಕೇಡ್‌ಗಳ ಹಸ್ತಾಂತರ

Date:

ಪೆರಂಪಳ್ಳಿ, ನ.9: ಪವರ್ ಫ್ರೆಂಡ್ಸ್, ಪೆರಂಪಳ್ಳಿ ಇವರ ನೇತೃತ್ವದಲ್ಲಿ ಪೆರಂಪಳ್ಳಿ ಚರ್ಚ್ ವೃತ್ತದ ಬಳಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ದಾನಿಗಳಾದ ಅನಿಶ್ ಜನರಲ್ ಸ್ಟೋರ್ಸ್, ಪೆರಂಪಳ್ಳಿ, ಯೂನಿಯನ್ ಬ್ಯಾಂಕ್, ಪೆರಂಪಳ್ಳಿ ಹಾಗೂ ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ ಇವರ ಸಹಕಾರದಿಂದ ಒಟ್ಟು 6 ಬ್ಯಾರಿಕೇಡ್‌ಗಳ ಹಸ್ತಾಂತರ ಕಾರ್ಯಕ್ರಮ ಸೋಮವಾರ ನಡೆಯಿತು.

ಪವರ್ ಫ್ರೆಂಡ್ಸ್, ಪೆರಂಪಳ್ಳಿ ಇದರ ಅಧ್ಯಕ್ಷರಾದ ಅನಿಲ್ ಗೊನ್ಸಲ್ವಿಸ್ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಾತಿಮಾ ಮಾತೆ ಚರ್ಚ್‌ನ ಧರ್ಮ ಗುರುಗಳಾದ ರೆಜಿನೋಲ್ಡ್ ಪಿಂಟೋ, ಮಣಿಪಾಲ ಠಾಣೆಯ ಮುಖ್ಯ ಪೊಲೀಸ್ ಅಧಿಕಾರಿ ಮಹೇಶ್ ಪ್ರಸಾದ್ ಹಾಗೂ ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಫಾತಿಮಾ ಮಾತೆ ಚರ್ಚ್‌ನ ಧರ್ಮ ಗುರುಗಳಾದ ರೆಜಿನೋಲ್ಡ್ ಪಿಂಟೋ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಆಶೀರ್ವಚನ ನೀಡಿ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪವರ್ ಫ್ರೆಂಡ್ಸ್, ಪೆರಂಪಳ್ಳಿ ಸಂಘಟನೆಯ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ ದೇವರ ಕೃಪೆ ಎಲ್ಲರ ಮೇಲಿರಲಿ ಎಂದರು. ಮಣಿಪಾಲ ಠಾಣೆಯ ಮುಖ್ಯ ಪೊಲೀಸ್ ಅಧಿಕಾರಿಯಾದ ಮಹೇಶ್ ಪ್ರಸಾದ್ ಅವರು ಪವರ್ ಫ್ರೆಂಡ್ಸ್, ಪೆರಂಪಳ್ಳಿ ಸಂಘಟನೆಗೆ ಧನ್ಯವಾದ ತಿಳಿಸಿ ಊರಿನ ಒಳಿತಿಗಾಗಿ ದಾನಿಗಳ ನೆರವಿನಿಂದ ಅಪಘಾತ ನಿಯಂತ್ರಿಸಲು ಬ್ಯಾರಿಕೇಡ್‌ಗಳ ಅಳವಡಿಸುವುದರ ಮೂಲಕ ವಾಹನ ಸವಾರರಿಗೆ ಹಾಗೂ ನಾಗರಿಕರಿಗೆ ಎಚ್ಚರ ವಹಿಸಲು ಇದೊಂದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.

ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಮೊದಲಿಗೆ ಪವರ್ ಫ್ರೆಂಡ್ಸ್, ಪೆರಂಪಳ್ಳಿ ತಂಡದ ಎಲ್ಲರಿಗೂ ಹಾಗೂ ದಾನಿಗಳಿಗೂ ಅಭಿನಂದನೆ ಸಲ್ಲಿಸಿ ಊರಿನಲ್ಲಿ ಅಪಘಾತ ತಡೆಗಟ್ಟಲು ಯುವಕರು ಒಂದಾದರೆ ಅದು ಬೇರೆ ಊರಿಗೂ ಮಾದರಿಯಾಗುತ್ತದೆ. ಬ್ಯಾರಿಕೇಡ್ ಅಳವಡಿಕೆಯಿಂದ ವಾಹನ ವೇಗವನ್ನು ನಿಯಂತ್ರಿಸಲು ಸಾಧ್ಯ. ವೃತ್ತವಿರುವ ಸ್ಥಳದಲ್ಲಿ ರಸ್ತೆ ದಾಟಲು ಬ್ಯಾರಿಕೇಡ್ ಇರುವುದರಿಂದ ಸಾರ್ವಜನಿಕರಿಗೆ ಸಹಕಾರಿಯಾಗುತ್ತದೆ. ಇಂತಹ ಸಮಾಜಮುಖಿ ಚಟುವಟಿಕೆಗಳಿಗೆ ನಮ್ಮೆಲ್ಲರ ಬೆಂಬಲವಿದೆ ಎಂದು ತಿಳಿಸಿ ಸೇರಿದ ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯವನ್ನು ತಿಳಿಸಿದರು.

ಪೆರಂಪಳ್ಳಿ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು, ಸ್ಥಳೀಯ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದ್ಯಸರು, ಊರಿನ ನಾಗರೀಕರು ಉಪಸ್ಥಿತರಿದ್ದರು. ಕೃಷಿಕ ಸಂಘದ ಮಾಜಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಶ್ರೀಯಾನ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ; ಇತಿಹಾಸ ನೆನಪಿಸಿದ ಪರ್ಕಳ ವಾಲಿಬಾಲ್​ ಫ್ರೆಂಡ್ಸ್​

ಕ್ರೀಡಾ ಕ್ಷೇತ್ರದೊಂದಿಗೆ ಸಾಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ...

ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ: ಸಾಹಿತಿ ಇಂದಿರಾ ಹಾಲಂಬಿ

ಉಡುಪಿ, ನ.9: ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿ​ಕ ಕ್ಷೇತ್ರದಲ್ಲಿ...

ಶ್ರೀಕೃಷ್ಣ ಮಠದಲ್ಲಿ ಗೋಪೂಜೆ ಸಂಭ್ರಮ; ರಥಬೀದಿಯಲ್ಲಿ ವೈಭವದ ಗೋ-ಮೆರವಣಿಗೆ

ಉಡುಪಿ, ನ.9: ಶ್ರೀಕೃಷ್ಣ ಮಠದಲ್ಲಿ ದೀಪಾವಳಿ ಸಂದರ್ಭದಲ್ಲಿ ಗೋಪೂಜೆ ವೈಭವದಿಂದ ನಡೆಯಿತು....

ದೀಪಾವಳಿ: ಬೆಳಕಿನ ಹಬ್ಬದ ಸಮಗ್ರ ಇತಿಹಾಸ, ಪೌರಾಣಿಕ ಹಿನ್ನೆಲೆ ಮತ್ತು ಆಚರಣೆಗಳು

ದೀಪಾವಳಿ ಅಥವಾ ದೀಪಾವಳೀ ಎಂದರೆ ಸಂಸ್ಕೃತದಲ್ಲಿ 'ದೀಪಗಳ ಆವಳಿ' (ಸಾಲು ಸಾಲು...
error: Content is protected !!