Monday, June 1, 2026
Monday, June 1, 2026

ತ್ರಿಶಾ ಕ್ಲಾಸಸ್: ಸಿ.ಎ. ಫೌಂಡೇಷನ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

ತ್ರಿಶಾ ಕ್ಲಾಸಸ್: ಸಿ.ಎ. ಫೌಂಡೇಷನ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

Date:

ಉಡುಪಿ, ಜೂ. 25: ಸಿ.ಎ ಸಿ.ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳ ತರಬೇತಿ ನೀಡುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿ.ಎ. ಫೌಂಡೇಷನ್ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರವು ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿ ಎ ಗೋಪಾಲಕೃಷ್ಣ ಭಟ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರಿಯಾದ ಯೋಜನೆ ಹಾಗೂ ಛಲ ಬಿಡದ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ. ಸಫಲತೆಯ ಶಿಖರ ಏರಲು ಕಷ್ಟಪಟ್ಟು ಕೆಲಸ ಮಾಡುವುದೊಂದೇ ಹಾದಿ ಎಂದರು. ಸಿ. ಎ. ಕೋರ್ಸಿನ ಬಗ್ಗೆ, ‘ಐ.ಸಿ.ಎ.ಐ’ನ ಹೊಸತಾಗಿ ತಿದ್ದುಪಡಿಯಾದ ನಿಯಮಗಳ ಬಗ್ಗೆ ಮತ್ತು ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಸಂಪೂರ್ಣ ಅವರು ವಿಸ್ತ್ರತವಾಗಿ ಮಾತನಾಡಿದರು.

ಸಿದ್ಧಾಂತ್ ಫೌಂಡೇಶನ್ ನ ಖಜಾಂಚಿಯಾದ ನಮಿತಾ ಜಿ.ಭಟ್, ತ್ರಿಶಾ ವಿದ್ಯಾ ಕಾಲೇಜಿನ ಸಿಬ್ಬಂದಿ ವರ್ಗದವರು, 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಗೌರಿ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಘವೇಂದ್ರ ಚಾರಿಟೇಬಲ್ ಸಂಸ್ಥೆ: ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಧನಸಹಾಯ

ಉಡುಪಿ, ಜೂ.1: ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಸಂಸ್ಥೆ ವತಿಯಿಂದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ...

ನೆನಪಿನ ತೋರಣ ಕೃತಿ ಬಿಡುಗಡೆ

ಕೊಡವೂರು, ಜೂ.1: ಎಪ್ಪತ್ತು ವರುಷಗಳ ಸಾರ್ಥಕ ಜೀವನವನ್ನು ನಡೆಸುತ್ತಿರುವ ಕೊಡವೂರು ಅಗ್ರಹಾರ...

ಬಿ. ಬಿ. ಹೆಗ್ಡೆ ಕಾಲೇಜು: ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಕುಂದಾಪುರ, ಜೂ.1: ಪದವಿಯ ನಂತರ ಉನ್ನತ ಶಿಕ್ಷಣ ಉದ್ಯೋಗಗಳ ಜೊತೆಗೆ ಉದ್ಯಮಶೀಲತೆಯನ್ನು...

ತ್ರಿಶಾ ಕ್ಲಾಸಸ್: ಸಿಎ ಫೌಂಡೇಶನ್ ಹಾಗೂ ಸಿಎಸ್‌ಇಇಟಿ ಮಾಹಿತಿ ಕಾರ್ಯಕ್ರಮ

ಉಡುಪಿ, ಜೂ 1: ಕಟಪಾಡಿಯ ಎಸ್‌ವಿಎಸ್ ಕನ್ನಡ ಮಾಧ್ಯಮ ಶಾಲೆಯ ಆಡಿಟೋರಿಯಂನಲ್ಲಿ...
error: Content is protected !!