Home ಸುದ್ಧಿಗಳು ಕ್ರೀಡೆ ಸ್ಯಾಫ್ ಚಾಂಪಿಯನ್ಶಿಪ್ 2023: ನೇಪಾಳವನ್ನು 2-0 ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ

ಸ್ಯಾಫ್ ಚಾಂಪಿಯನ್ಶಿಪ್ 2023: ನೇಪಾಳವನ್ನು 2-0 ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ

215
0

ಬೆಂಗಳೂರು, ಜೂ. 25: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ನೇಪಾಳವನ್ನು 2-0 ಗೋಲುಗಳಿಂದ ಮಣಿಸಿದ ಭಾರತದ ಹಿರಿಯ ಪುರುಷರ ತಂಡ ಬಂಗಬಂಧು ಎಸ್ಎಎಫ್ಎಫ್ ಚಾಂಪಿಯನ್ಶಿಪ್ 2023 ರ ಸೆಮಿಫೈನಲ್ಗೆ ಪ್ರವೇಶಿಸಿದೆ. ಈ ಗೆಲುವಿನೊಂದಿಗೆ ಭಾರತ ತವರು ನೆಲದಲ್ಲಿ ಅಜೇಯ 12 ಪಂದ್ಯಗಳನ್ನು ಗೆದ್ದುಕೊಂಡಿದೆ. ಪಂದ್ಯದ ಮೊದಲಾರ್ಧದಲ್ಲಿ ನಾಯಕ ಸುನಿಲ್ ಛೆಟ್ರಿ ಹಾಗೂ ನೌರೆಮ್ ಮಹೇಶ್ ಸಿಂಗ್ ಗಳಿಸಿದ ಗೋಲುಗಳ ನೆರವಿನಿಂದ ತಂಡ ಮೂರು ಅಂಕಗಳನ್ನು ಗಳಿಸಿತು.

ಕುವೈತ್ ತಂಡ ಪಾಕಿಸ್ತಾನವನ್ನು 4-0 ಗೋಲುಗಳಿಂದ ಮಣಿಸಿ ‘ಎ’ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಿದೆ. ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು 4-0 ಅಂತರದಿಂದ ಸೋಲಿಸಿದ ಭಾರತ ತಂಡದಲ್ಲಿ ಎಂಟು ಬದಲಾವಣೆಗಳಿವೆ. ಹ್ಯಾಟ್ರಿಕ್ ಹೀರೋ ಸುನಿಲ್ ಛೆಟ್ರಿ, ಅನಿರುದ್ಧ್ ಥಾಪಾ ಮತ್ತು ಸಹಲ್ ಅಬ್ದುಲ್ ಸಮದ್ ಮಾತ್ರ ಹನ್ನೊಂದರಲ್ಲಿ ಉಳಿದಿದ್ದಾರೆ. ಜೂನ್ 27ರಂದು ಸಂಜೆ 7.30ಕ್ಕೆ ನಡೆಯಲಿರುವ ‘ಎ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡ ಕುವೈತ್ ತಂಡವನ್ನು ಎದುರಿಸಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.