Home ಸುದ್ಧಿಗಳು ಕ್ರೀಡೆ ಆಸ್ಟ್ರೇಲಿಯನ್ ಓಪನ್: ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಜೋಡಿ

ಆಸ್ಟ್ರೇಲಿಯನ್ ಓಪನ್: ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ರೋಹನ್ ಬೋಪಣ್ಣ-ಮ್ಯಾಥ್ಯೂ ಎಬ್ಡೆನ್ ಜೋಡಿ

43 ವರ್ಷ ವಯಸ್ಸಿನ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್ ಗೆಲುವಿನೊಂದಿಗೆ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

162
0

ಉಡುಪಿ ಬುಲೆಟಿನ್ ಸಮಾಚಾರ, ಜ.27: ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯನ್ ಓಪನ್ 2024 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ರಾಡ್ ಲೇವರ್ ಅರೆನಾದಲ್ಲಿ ನಡೆದ ಫೈನಲ್‌ನಲ್ಲಿ 43 ವರ್ಷದ ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಅವರು ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸೋರಿ ಜೋಡಿಯನ್ನು 7-6, 7-5 ಸೆಟ್‌ಗಳಿಂದ ಸೋಲಿಸಿದರು. ಸುಮಾರು 100 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಬೋಪಣ್ಣ ಮ್ಯಾಥ್ಯೂ ಎಬ್ಡೆನ್ ಜೋಡಿ ಅತ್ಯುತ್ತಮವಾಗಿ ಆಡಿದರು.

ನಿಮ್ಮನ್ನು ನಂಬಿ: ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ರೋಹನ್ ಬೋಪಣ್ಣ, ನಾವು ನಮ್ಮ ಬಗ್ಗೆ ನಂಬಿಕೆ ಕಳೆದುಕೊಳ್ಳಬಾರದು. ಜೀವನದಲ್ಲಿ ಯಾವಾಗ ಯಶಸ್ಸು ಬರುತ್ತದೆ ಎಂದು ಹೇಳಲು ಅಸಾಧ್ಯ. ಆದ್ದರಿಂದ ನಮ್ಮ ಪ್ರಯತ್ನ ನಿರಂತರವಾಗಿರಬೇಕು. ನಾವು ಯಾವುದೇ ಇತಿಮಿತಿಗಳನ್ನು ಹಾಕಿಕೊಳ್ಳಬಾರದು. ಅಭೂತಪೂರ್ವ ಬೆಂಬಲ ನೀಡಿದ ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ಮನದಾಳದ ವಂದನೆಗಳು ಎಂದು ರೋಹನ್ ಬೋಪಣ್ಣ ಹೇಳಿದರು.

ಎರಡನೆಯ ಗ್ರ್ಯಾಂಡ್ ಸ್ಲಾಮ್: ರೋಹನ್ ಬೋಪಣ್ಣ ಅವರಿಗೆ ಇದು ಎರಡನೆಯ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಪ್ರಶಸ್ತಿಯಾಗಿದೆ. ಈ ಹಿಂದೆ 2017 ರಲ್ಲಿ ಫ್ರೆಂಚ್ ಓಪನ್ ನಲ್ಲಿ ಅವರು ಕೆನಡಾದ ಗೇಬ್ರಿಯೆಲಾ ದಬ್ರೊಸ್ಕಿ ಜತೆ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.

ಪ್ರಧಾನಿ ಅಭಿನಂದನೆ: ಪ್ರತಿಭಾವಂತ ರೋಹನ್ ಬೋಪಣ್ಣ ಅವರು, ವಯಸ್ಸು ಯಾವುದೇ ನಿರ್ಬಂಧ ಹೇರುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಯಾವಾಗಲೂ ನಮ್ಮ ಉತ್ಸಾಹ, ಕಠಿಣ ಪರಿಶ್ರಮ ನಮ್ಮ ಸಾಮರ್ಥ್ಯಗಳನ್ನು ವ್ಯಾಖ್ಯಾನಿಸುತ್ತದೆ ಎಂಬುದನ್ನು ಅವರ ಅಭೂತಪೂರ್ವ ಗೆಲುವಿನ ಹಾದಿ ನೆನಪಿಸುತ್ತದೆ. ಅವರಿಗೆ ಅಭಿನಂದನೆಗಳು ಮತ್ತು ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.