Friday, November 13, 2026
Friday, November 13, 2026

ಹೋಂ ಡಾಕ್ಟರ್ ಫೌಂಡೇಶನ್: ವೈಶಿಷ್ಟ್ಯಪೂರ್ಣ ದೀಪಾವಳಿ ಆಚರಣೆ

ಹೋಂ ಡಾಕ್ಟರ್ ಫೌಂಡೇಶನ್: ವೈಶಿಷ್ಟ್ಯಪೂರ್ಣ ದೀಪಾವಳಿ ಆಚರಣೆ

Date:

ಮಲ್ಪೆ, ನ.11: ಸರಕಾರಿ ಪದವಿಪೂರ್ವ ಕಾಲೇಜು ಮಲ್ಪೆ (ಹೈಸ್ಕೂಲ್ ವಿಭಾಗ) ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಅತ್ಯಂತ ವೈಶಿಷ್ಟ್ಯ ಪೂರ್ಣವಾಗಿ ದೀಪಾವಳಿ ಹಬ್ಬದ ಆಚರಣೆ ಶನಿವಾರ ನಡೆಯಿತು. ಕಾರ್ಯಕ್ರಮದಲ್ಲಿ 8 ಅಸಹಾಯಕ ರೋಗಿಗಳಿಗೆ 95 ಸಾವಿರ ರೂ. ಧನಸಹಾಯ ನೀಡಲಾಯಿತು.

ಬಳಿಕ ಹರಿದ ಬ್ಯಾಗ್, ಚಪ್ಪಲಿ ಬಳಸುತ್ತಿದ್ದ ಮಕ್ಕಳನ್ನೂ ಗುರುತಿಸಿ ತಲಾ 4 ಹೊಸ ಚಪ್ಪಲಿ ಹಾಗೂ ಬ್ಯಾಗ್ ಗಳನ್ನು ವಿತರಿಸಲಾಯಿತು. ನಂತರ ಸ್ವರ್ಗ ಆಶ್ರಮದಲ್ಲಿ ಇತ್ತೀಚಿಗೆ ನಡೆದ ಬೆಂಕಿ ರಹಿತ ಸ್ಪರ್ಧೆಯ ವಿಜೇತರಿಗೆ ಮತ್ತು ಭಗವಹಿಸಿದವರಿಗೆ ಬಹುಮಾನ, ಸ್ವರ್ಗ ಆಶ್ರಮದ ಆಶ್ರಮವಾಸಿಗಳಿಗೆ 40 ವಿಶೇಷ ಬಟ್ಟಲುಗಳನ್ನು ನೀಡಲಾಯಿತು. ಮೇಸ್ತ್ರಿ ಗಳೇ ದೇವರಾಗೋಣ ಕಾನ್ಸೆಪ್ಟ್ ನಲ್ಲಿ ಸೇವೆ ಸಲ್ಲಿಸಿದ 23 ಮೇಸ್ತ್ರಿಗಳಿಗೆ ರೂ 1 ಲಕ್ಷದ ಬಾಂಡ್ ಗಳನ್ನು ಹಾಗೂ ಶಾಲೆಗೆ ಸ್ಯಾನಿಟರಿ ಪ್ಯಾಡ್ ಬರ್ನರ್ ಮಿಷಿನ್ ನೀಡಲಾಯಿತು.

ಕಾರ್ಕಳದ ವಿಜೇತ ಶಾಲೆಯ ವಿಶೇಷ ಚೇತನ ಮಕ್ಕಳು ಹಾಗು ಮೂಡುಬಿದರೆಯ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳು ತಯಾರಿಸಿದ ಹಣತೆ ಹಚ್ಚಿ ದೀಪಾವಳಿ ಆಚರಿಸಲಾಯಿತು. ಶಾಲಾ ಮಕ್ಕಳಿಗೆ ಕ್ವಿಜ್ ಕಾರ್ಯಕ್ರಮ ಸೇರಿದಂತೆ ಮನೋರಂಜನ ಕಾರ್ಯಕ್ರಮ ನಡೆಯಿತು. ಮಕ್ಕಳೊಂದಿಗೆ ಸಹ ಭೋಜನ ನಡೆಸಲಾಯಿತು.

ಫೌಂಡೇಶನ್ ಪ್ರಮುಖರಾದ ಡಾ. ಶಶಿಕಿರಣ್ ಶೆಟ್ಟಿ, ಡಾ. ಸುಮಾ ಎಸ್ ಶೆಟ್ಟಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಫೌಂಡೇಶನ್ ನ ಸದಸ್ಯರು ಭಾಗವಹಿಸಿದ್ದರು. ವಾಣಿಶ್ರೀ ಗೋವಿಂದ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಯಕ್ಷಗಾನ ಕಲಾರಂಗದ 109ನೇ ಮನೆ ಹಸ್ತಾಂತರ

ಉಡುಪಿ, ನ.12: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾನ್ವಿ...

ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಮಹಾಸಭೆ

ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ವಾರ್ಷಿಕ ಮಹಾಸಭೆಯು ಸಂಸ್ಥೆಯ ಆವರಣದಲ್ಲಿ ಜರುಗಿತು....

ಕುರ್ಕಾಲು: 40 ಲಕ್ಷ ರೂಪಾಯಿ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಕಾಪು, ನ.12: ಕಾಪು ವಿಧಾನಸಭಾ ಕ್ಷೇತ್ರದ ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ...

ಚಿನ್ನ ಬೆಳ್ಳಿ ಬೆಲೆಗಳಲ್ಲಿ ಇಳಿಕೆ

ಭಾರತದ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಗುರುವಾರ 24 ಕ್ಯಾರೆಟ್ ಚಿನ್ನದ ಬೆಲೆಯು ಶೇಕಡಾ...
error: Content is protected !!