Monday, July 27, 2026
Monday, July 27, 2026

ಸುಮೇಧಾ ಪ್ರಜ್ಞಾ ವಿಕಾಸ ಕೇಂದ್ರ ನೀಲಾವರ- ಶಿಕ್ಷಕ ರಕ್ಷಕ ಸಭೆ

ಸುಮೇಧಾ ಪ್ರಜ್ಞಾ ವಿಕಾಸ ಕೇಂದ್ರ ನೀಲಾವರ- ಶಿಕ್ಷಕ ರಕ್ಷಕ ಸಭೆ

Date:

ಬ್ರಹ್ಮಾವರ: ಸುಮೇಧಾ ಪ್ರಜ್ಞಾ ವಿಕಾಸ ಕೇಂದ್ರ ನೀಲಾವರ ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ ಸಂಸ್ಥಾಪಕರಾದ ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಸಂಸ್ಥೆಯ ಸ್ಥಾಪನೆಯ ಉದ್ಧೇಶವನ್ನು ವಿವರಿಸಿ ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.

ಸಂಸ್ಥೆಯ ಮಾರ್ಗದರ್ಶಕರಾದ ಡಾ. ಪಿ.ವಿ. ಭಂಡಾರಿಯವರು ಹೆತ್ತವರಿಗೆ ಅನೇಕ ಸೂಚನೆಗಳನ್ನು ನೀಡಿ ಅವರ ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು. ನಿವೃತ್ತ ವಿಕಲಚೇತನ ವಿಭಾಗದ ಅಧಿಕಾರಿ ನಿರಂಜನ ಭಟ್ ಸರಕಾರದ ಸವಲತ್ತುಗಳು ಕುರಿತು ಪೋಷಕರಿಗೆ ವಿಶೇಷ ಮಾಹಿತಿ ನೀಡಿದರು.

ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಜನಾರ್ಧನ್ ಭಟ್, ಕೋಶಾಧಿಕಾರಿ ರಾಮಚಂದ್ರ ಉಪಾಧ್ಯಾಯ, ಆಡಳಿತ ಮಂಡಳಿಯ ಸದಸ್ಯರಾದ ಬೈಕಾಡಿ ಸುಪ್ರಸಾದ ಶೆಟ್ಟಿ, ಚಂದ್ರಶೇಖರ್ ಆಚಾರ್ಯ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸುಮನ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಜು.26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ....
error: Content is protected !!