Monday, July 27, 2026
Monday, July 27, 2026

ರೋಟರಿ ವಲಯ ನಾಲ್ಕರ ಸಾಂಸ್ಕೃತಿಕ ರಂಗ ಹಬ್ಬ- 22

ರೋಟರಿ ವಲಯ ನಾಲ್ಕರ ಸಾಂಸ್ಕೃತಿಕ ರಂಗ ಹಬ್ಬ- 22

Date:

ಉಡುಪಿ: ಕಲಾವಿದರಿಗೆ ಕಲಾರಾಧಕರ ಮೆಚ್ಚುಗೆಯೇ ಪ್ರಶಸ್ತಿ, ಸಂತಸದ ಕರತಾಡನವೇ ಪುರಸ್ಕಾರ. ಹಾಗಾಗಿ ಕಲಾವಿದರ ಕಲಾ ಪ್ರೌಢಿಮೆಯನ್ನು ಗುರುತಿಸಿ ಗೌರವಿಸೋಣ ಎಂದು ರೋಟರಿ‌ ಜಿಲ್ಲಾ ಸಾಂಸ್ಕೃತಿಕ ಸಂಯೋಜಕ ಶುಭಾಶ್ಚಂದ್ರ ಕೊಡ್ಲಾಡಿ ಹೇಳಿದರು. ರೋಟರಿ ಉಡುಪಿ ರಾಯಲ್ ನ ಆತಿಥ್ಯದಲ್ಲಿ ಆಯೋಜಿಸಿದ್ದ ವಲಯ ನಾಲ್ಕರ ಸಾಂಸ್ಕೃತಿಕ ರಂಗ ಹಬ್ಬ -22 ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಮಿತ್ರರ ಕಲಾ ಪ್ರತಿಭೆಗೆ ವೇದಿಕೆ ಒದಗಿಸುವ ಈ ಒಂದು ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಿದ ರೋಟರಿ ಉಡುಪಿ ರಾಯಲ್ ಗೆ ಅಭಿನಂದನೆ ಸಲ್ಲಿಸಿದರು.

ಡ್ರಾಮಾ ಜ್ಯೂನಿಯರ್ ಖ್ಯಾತಿಯ ಸಮೃದ್ಧಿ ಕುಂದಾಪುರ ತಮಟೆಯನ್ನು ಬಡಿಯುವುದರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಕರ್ಣಾರ್ಜುನ ಕಾಳಗದ ಒಂದು ತುಣಕನ್ನು ಪ್ರದರ್ಶಿಸಿದರು. ರೋಟರಿ‌ ವಲಯ ನಾಲ್ಕರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ವಲಯ ಸೇನಾನಿಗಳಾದ ದಯಾನಂದ ನಾಯಕ್, ರಾಜೇಶ್ ಪಾಲನ್, ಗೀತಾಶ್ರೀ ಎಂ ಉಪಾಧ್ಯ ಉಪಸ್ಥಿತರಿದ್ದರು.

ರೋಟರಿ ಉಡುಪಿ ರಾಯಲ್ ನ ಅಧ್ಯಕ್ಷರಾದ ಬಾಲಕೃಷ್ಣ ಎಸ್ ಮಡ್ಡೋಡಿ ಅಧ್ಯಕ್ಷತೆ ವಹಿಸಿದ್ದರು. ವಲಯ ಸಾಂಸ್ಕೃತಿಕ ಸಂಯೋಜಕಿ ಪೂರ್ಣಿಮಾ ಜನಾರ್ದನ್ ಸ್ವಾಗತಿಸಿ ಪ್ರಸ್ತಾವನೆಯ ಮಾತುಗಳನ್ನಾಡಿದರು. ಕಾರ್ಯದರ್ಶಿ ರತ್ನಾಕರ ಇಂದ್ರಾಳಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಜು.26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ....
error: Content is protected !!