ಉಡುಪಿ: ಕೋವಿಡ್ -19 ಸಾಂಕ್ರಾಮಿಕ ರೋಗವು, ಕೈತೊಳೆಯುವಿಕೆಯನ್ನು ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ಅತ್ಯಂತ ಸರಳವಾದ ಹಾಗೂ ಒಂದು ಪ್ರಮುಖ ಕ್ರಮವೆಂದು ಎತ್ತಿ ತೋರಿಸಿದೆ.
ಅಕ್ಟೋಬರ್ 15 ರಂದು ಆಚರಿಸಲಾಗುವ ವಿಶ್ವ ಕೈತೊಳೆಯುವ ದಿನಾಚರಣೆಯ ಸಂದರ್ಭದಲ್ಲಿ, ಉಡುಪಿ ಜಿಲ್ಲೆಯ ಡಾ. ಟಿಎಂಎ ಪೈ ಆಸ್ಪತ್ರೆಯು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ (8 ರಿಂದ 10 ನೇ ತರಗತಿ) ಪೋಸ್ಟರ್ ತಯಾರಿಕೆ ಸ್ಪರ್ಧೆಯನ್ನು ಆಯೋಜಿಸಿದೆ.
ಪೋಸ್ಟರ್ ಸ್ಪರ್ಧೆಯ ವಿಷಯವು “ನಮ್ಮ ಭವಿಷ್ಯವು ನಮ್ಮ ಕೈಯಲ್ಲಿದೆ – ಒಟ್ಟಿಗೆ ಸಾಗೋಣ”
ಮೂಲ ಪ್ರತಿಯನ್ನು ಭಾಗವಹಿಸುವವರ ಹೆಸರು, ವಯಸ್ಸು ಮತ್ತು ಸಂಪರ್ಕ ವಿವರಗಳೊಂದಿಗೆ, ಅಕ್ಟೋಬರ್ 12 ರ ಒಳಗೆ ಎ3 ಸೈಜ್ ನಲ್ಲಿ office.tmaph@manipal.edu ಗೆ ಇ-ಮೇಲ್ ಮಾಡಬೇಕು.
ಅತ್ಯುತ್ತಮ 3 ಪೋಸ್ಟರ್‌ಗಳಿಗೆ ನಗದು ಬಹುಮಾನ ನೀಡಲಾಗುವುದು ಮತ್ತು ಭಾಗವಹಿಸುವವರೆಲ್ಲರಿಗೂ ಇ-ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




By
ForthFocus™