ಉಡುಪಿ, ಜು.26: ಗೆಳೆಯರ ಬಳಗ (ರಿ) ವಿಷ್ಣುನಗರ ಕೆಳಾರ್ಕಳಬೆಟ್ಟು ಇದರ ವತಿಯಿಂದ ಭಾನುವಾರ ತೆಂಕನಿಡಿಯೂರು ಕಾಲೇಜು ಮುಖ್ಯ ರಸ್ತೆಯನ್ನು ಸಂಘದ ಅಧ್ಯಕ್ಷರಾದ ಸಂದೇಶ ಸುವರ್ಣರ ಮಾರ್ಗದರ್ಶನದಲ್ಲಿ ಶ್ರಮದಾನದ ಮೂಲಕ ಎರಡೂ ಬದಿಯಲ್ಲಿ ಬೆಳೆದ ಗಿಡಗಂಟಿಗಳನ್ನು ಸ್ವಚ್ಛಗೊಳಿಸಲಾಯಿತು. ಹಿರಿಯರಾದ ಗಿರಿಯ ಮೇಸ್ತ್ರಿ, ಕಾರ್ಯದರ್ಶಿ ದಿನೇಶ್ ಕುಮಾರ್, ಪ್ರಕಾಶ್ ಆಚಾರ್, ವಿನೋದ್, ರವಿ, ಅಶ್ವಜಿತ್, ಪ್ರಕಾಶ್ ಗಾಣಿಗ, ರೋಹಿತ್, ನಿತಿನ್, ಪ್ರಶಾಂತ್ ಪೂಜಾರಿ, ನಿಖಿಲ್, ಹರೀಶ್, ಚರಣ್, ಹರೀಶ್ ಪೂಜಾರಿ, ಗಣೇಶ್, ರಾಜೇಶ್ ಹಾಗು ಮುಖ್ಯ ರಸ್ತೆಯ ಬದಿಯಲ್ಲಿ ಹಲವು ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವ ಪೊಲೀಸ್ ಸಿಬ್ಬಂದಿ ತಾರಾನಾಥ್ ಶ್ರಮದಾನದಲ್ಲಿ ಭಾಗವಹಿಸಿದ್ದರು.
ಗೆಳೆಯರ ಬಳಗ (ರಿ) ವಿಷ್ಣುನಗರ ಕೆಳಾರ್ಕಳಬೆಟ್ಟು: ಸ್ವಚ್ಛತಾ ಅಭಿಯಾನ
ಗೆಳೆಯರ ಬಳಗ (ರಿ) ವಿಷ್ಣುನಗರ ಕೆಳಾರ್ಕಳಬೆಟ್ಟು: ಸ್ವಚ್ಛತಾ ಅಭಿಯಾನ
Date:




By
ForthFocus™