Saturday, August 29, 2026
Saturday, August 29, 2026

ಆಗಸ್ಟ್ 14 ರಂದು ಮೆಗಾ ಲೋಕ್ ಅದಾಲತ್

ಆಗಸ್ಟ್ 14 ರಂದು ಮೆಗಾ ಲೋಕ್ ಅದಾಲತ್

Date:

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಆಗಸ್ಟ್ 14 ರಂದು ಬೆಳಿಗ್ಗೆ 10.30 ರಿಂದ ಮೆಗಾ ಲೋಕ್ ಅದಾಲತ್‌ನ್ನು ಆಯೋಜಿಸಲಾಗಿದೆ. ರಾಜೀ ಮಾಡಿ ಇತ್ಯರ್ಥಪಡಿಸಬಹುದಾದ 4678 ವಿವಿಧ ಪ್ರಕರಣಗಳನ್ನು ಈಗಾಗಲೇ ಗುರುತಿಸಲಾಗಿದೆ.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಸುದೀರ್ಘ ಕಾಲದಿಂದ ಇತ್ಯರ್ಥಗೊಳ್ಳದೇ ಬಾಕಿ ಉಳಿದಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಮೆಗಾ ಲೋಕ್ ಅದಾಲತ್ ನಲ್ಲಿ ರಾಜೀ ಸಂದಾನದ ಮೂಲಕ ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿ ಇತ್ಯರ್ಥಪಡಿಸಲಾಗುವುದು.

ಕಕ್ಷಿಗಾರರು ಆನ್ ಲೈನ್ / ವೀಡಿಯೋ ಕಾನ್ಪರೆನ್ಸ್ / ಎಲೆಕ್ಟ್ರಾನಿಕ್ ಮೋಡ್ / ಖುದ್ದಾಗಿ ಹಾಜರಾಗುವ ಮೂಲಕ ಅದಾಲತ್ ನಲ್ಲಿ ಭಾಗವಹಿಸಿ ವಿವಾದವನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ. ಪ್ರಕರಣ ರಾಜಿಯಾದಲ್ಲಿ ಸಂಪೂರ್ಣ ನ್ಯಾಯಾಲಯದ ಶುಲ್ಕವನ್ನು ಹಿಂದಿರುಗಿಸಲಾಗುವುದು. ತ್ವರಿತ ನ್ಯಾಯ, ಸಮಯ ಹಾಗೂ ಸಂಬಂಧ ಉಳಿಸುವ ನಿಟ್ಟಿನಲ್ಲಿ ಲೋಕ್ ಅದಾಲತ್ ಆಯೋಜಿಸಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡಿಸಿಕೊಳ್ಳಬಹುದಾಗಿದೆ. ಸಂಧಾನಕಾರರು ಸೂಚಿಸುವ ಪರಿಹಾರ ಒಪ್ಪಿಗೆಯಾದಲ್ಲಿ ಮಾತ್ರ ಪ್ರಕರಣ/ವ್ಯಾಜ್ಯವನ್ನು ರಾಜೀ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ವಿವರಗಳಿಗಾಗಿ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಠಡಿ ಸಂಖ್ಯೆ. 5, ನೆಲಮಹಡಿ, ನ್ಯಾಯಾಲಯ ಸಂಕೀರ್ಣ, ಉಡುಪಿ ದೂ.ಸಂ. 0820-2523355, 9480898702 ಸಂಪರ್ಕಿಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಅವರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವರ್ತಮಾನದ ಸಂಕಟಗಳನ್ನು ಮೀರುವ ಶಕ್ತಿ ಸಾಹಿತ್ಯಕ್ಕಿದೆ: ಡಾ. ಸಂತೋಷ್ ಆಳ್ವ

ವಾಮದಪದವು. ಆ.28: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ...

ಗಂಗೊಳ್ಳಿ: ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಗಂಗೊಳ್ಳಿ, ಆ.28: ಶ್ರೀ ನಾರಾಯಣ ಗುರು ಜನ ಸೇವಾ ಬಳಗ ಗಂಗೊಳ್ಳಿ...

ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ

ಉಡುಪಿ, ಆ.28: ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ ಶುಕ್ರವಾರ ಟ್ರಸ್ಟಿನ ಗೌರವಾಧ್ಯಕ್ಷರು,...

ಕಾರ್ಕಳ: ಮಾಳ ಕೋಟೆ ಬಸದಿಯಲ್ಲಿ 5 ಅಪರೂಪದ ಜಿನ ಶಾಸನಗಳ ಪತ್ತೆ; ಸಂಶೋಧಕ ಶ್ರುತೇಶ್ ಆಚಾರ್ಯರಿಂದ ಅಧ್ಯಯನ

ಕಾರ್ಕಳ, ಆ.27: ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಸ್ವಸ್ತಿ ಶ್ರೀ ಲಲಿತಕೀರ್ತಿ...
error: Content is protected !!