Friday, August 28, 2026
Friday, August 28, 2026

ಕೃಷಿ ಪಂಡಿತ ಪ್ರಶಸ್ತಿ: ರೈತರಿಂದ ಅರ್ಜಿ ಆಹ್ವಾನ

ಕೃಷಿ ಪಂಡಿತ ಪ್ರಶಸ್ತಿ: ರೈತರಿಂದ ಅರ್ಜಿ ಆಹ್ವಾನ

Date:

ಕೃಷಿ ವಲಯದಲ್ಲಿ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮೂಲಕ ರೈತ ಸಮುದಾಯದ ಶ್ರೇಯೋಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವ ಪರಿಣಿತರಿಗೆ ಕೃಷಿ ಇಲಾಖೆಯಿಂದ ಕೃಷಿ ಪಂಡಿತ” ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಕೃಷಿ ಪಂಡಿತ ಪ್ರಶಸ್ತಿಗೆ ಭಾಗವಹಿಸಲು ಇಚ್ಚಿಸುವವರು ಉಡುಪಿ ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ವಿನೂತನ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ಗಮನಾರ್ಹ ಸಾಧನೆ ಮಾಡಿರುವ ಮತ್ತು ರೈತ ಸಮುದಾಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವವರಾಗಿರಬೇಕು. ಭಾಗವಹಿಸುವವರ ಸಂಶೋಧನೆ / ಸಾಧನೆಗಳು ಮೂಲ ಸ್ವರೂಪವಾಗಿದ್ದು, ಬೇರೆಯವರ ಸಾಧನೆಗಿಂತ ವಿಭಿನ್ನವಾಗಿರಬೇಕು ಹಾಗೂ ವ್ಯಾಪಕವಾಗಿ ಕೃಷಿ ಕ್ಷೇತ್ರದ ಏಳಿಗೆಗೆ ಕಾರಣವಾಗಿರಬೇಕು.

ಸದರಿ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸ ಬಯಸುವ ರೈತರುಗಳು, ಸ್ಥಳೀಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಿಂದ ನಿಗದಿತ ಅರ್ಜಿ ಪಡೆದುಕೊಂಡು ಮಾಹಿತಿಯನ್ನು ಭರ್ತಿ ಮಾಡಿ ದಿನಾಂಕ ಜೂನ್ 20 ರ ಒಳಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಸಲ್ಲಿಸಬಹುದಾಗಿರುತ್ತದೆ. ಕೃಷಿ ಪಂಡಿತ ಪ್ರಶಸ್ತಿಯು ಪ್ರಥಮ ಬಹುಮಾನ ರೂ. 1,25,000 ದ್ವಿತೀಯ 1,00,000 ತೃತೀಯ 75,000 ಕೃಷಿ ಪಂಡಿತ ಉದಯೋನ್ಮುಖ ಪ್ರಶಸ್ತಿ 50,000 ರೂ ಗಳನ್ನು ಒಳಗೊಂಡಿರುತ್ತದೆ ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವರ್ತಮಾನದ ಸಂಕಟಗಳನ್ನು ಮೀರುವ ಶಕ್ತಿ ಸಾಹಿತ್ಯಕ್ಕಿದೆ: ಡಾ. ಸಂತೋಷ್ ಆಳ್ವ

ವಾಮದಪದವು. ಆ.28: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ...

ಗಂಗೊಳ್ಳಿ: ಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

ಗಂಗೊಳ್ಳಿ, ಆ.28: ಶ್ರೀ ನಾರಾಯಣ ಗುರು ಜನ ಸೇವಾ ಬಳಗ ಗಂಗೊಳ್ಳಿ...

ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ

ಉಡುಪಿ, ಆ.28: ಯಕ್ಷಶಿಕ್ಷಣ ಟ್ರಸ್ಟಿನ ವಿಶ್ವಸ್ತರ ಸಭೆ ಶುಕ್ರವಾರ ಟ್ರಸ್ಟಿನ ಗೌರವಾಧ್ಯಕ್ಷರು,...

ಕಾರ್ಕಳ: ಮಾಳ ಕೋಟೆ ಬಸದಿಯಲ್ಲಿ 5 ಅಪರೂಪದ ಜಿನ ಶಾಸನಗಳ ಪತ್ತೆ; ಸಂಶೋಧಕ ಶ್ರುತೇಶ್ ಆಚಾರ್ಯರಿಂದ ಅಧ್ಯಯನ

ಕಾರ್ಕಳ, ಆ.27: ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಸ್ವಸ್ತಿ ಶ್ರೀ ಲಲಿತಕೀರ್ತಿ...
error: Content is protected !!