Sunday, October 18, 2026
Sunday, October 18, 2026

ತ್ರಿಶೂಲದ ಬದಲಿಗೆ ಯುವಕರ ಕೈಯಲ್ಲಿ ಪುಸ್ತಕ ಪೆನ್ನು ಕೊಡಿ: ಅಮೃತ್ ಶೆಣೈ ‌

ತ್ರಿಶೂಲದ ಬದಲಿಗೆ ಯುವಕರ ಕೈಯಲ್ಲಿ ಪುಸ್ತಕ ಪೆನ್ನು ಕೊಡಿ: ಅಮೃತ್ ಶೆಣೈ ‌

Date:

ಉಡುಪಿ: ಯುವ ಜನತೆಯಲ್ಲಿ ‌ಕಾನೂನಿನ ಅರಿವು ಮೂಡಿಸುತ್ತಾ ಅವರನ್ನು ಸುಶಿಕ್ಷಿತರನ್ನಾಗಿ ಮಾಡಿ ಭವಿಷ್ಯದ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸುವುದನ್ನು ಬಿಟ್ಟು ಅವರ ಕೈಯಲ್ಲಿ ಆಯುಧಗಳನ್ನು ‌ನೀಡಿ‌ ಧರ್ಮ ರಕ್ಷಣೆಯ‌ ನೆಪದಲ್ಲಿ‌ ಅವರು‌ ಕಾನೂನನ್ನು‌ ಕೈಗೆತ್ತಿಕೊಳ್ಳುವ ಹಾಗೆ‌ ಮಾಡಿ ಅವರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಾ ಇರುವುದು ಅತ್ಯಂತ ಖೇದನೀಯ ಎಂದು ಉಡುಪಿ ಸಹಬಾಳ್ವೆ ತಂಡದ ಅಧ್ಯಕ್ಷ ಅಮೃತ್ ಶೆಣೈ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಮರಸ್ಯ ನಡಿಗೆ: ದಯೆಯೇ‌ ಧರ್ಮದ‌ ಮೂಲ. ಯಾವ ಧರ್ಮವೂ ಬೋಧಿಸುವುದಿಲ್ಲ, ಯುವ ಜನರು ಧರ್ಮದ ಪಾಲನೆ ಮಾಡಿದರೆ ಧರ್ಮವನ್ನು ರಕ್ಷಿಸಿದ ಹಾಗೆ ಆಗುತ್ತದೆ. ಕರಾವಳಿಯಲ್ಲಿ ಶಾಂತಿ, ಅಹಿಂಸೆ ಹಾಗೂ‌‌ ಪ್ರೀತಿಯನ್ನು ಎತ್ತಿ ಹಿಡಿಯಲು, ತನ್ಮೂಲಕ‌ ಸಹೋದರತೆ ಹಾಗೂ‌ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಸಹಬಾಳ್ವೆ ತಂಡದ ವತಿಯಿಂದ ಸಾಮರಸ್ಯ ನಡಿಗೆಯನ್ನು ಮುಂದಿನ‌ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ಎಲ್ಲಾ ಸಮಾನ ಮನಸ್ಕರ ಬೆಂಬಲ ಬೇಕು ಎಂದೂ ಅವರು ತಿಳಿಸಿದ್ದಾರೆ.

1 COMMENT

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!