Friday, July 24, 2026
Friday, July 24, 2026

10/10; ಹುಟ್ಟಿ ಬೆಳೆದ ಮುಂಬಯಿಯಲ್ಲೇ ನೂತನ ದಾಖಲೆ ನಿರ್ಮಿಸಿದ ಅಜಾಜ್ ಪಟೇಲ್

10/10; ಹುಟ್ಟಿ ಬೆಳೆದ ಮುಂಬಯಿಯಲ್ಲೇ ನೂತನ ದಾಖಲೆ ನಿರ್ಮಿಸಿದ ಅಜಾಜ್ ಪಟೇಲ್

Date:

ಮುಂಬಯಿ: ನ್ಯೂಜಿಲೆಂಡ್ ಎಡಗೈ ಬೌಲರ್ ಅಜಾಜ್ ಪಟೇಲ್ ಇಂದು ನೂತನ ದಾಖಲೆ ನಿರ್ಮಿಸಿದ್ದಾರೆ. ಮುಂಬಯಿಯಲ್ಲಿ ಹುಟ್ಟಿ ಬೆಳೆದ ಅಜಾಜ್ ಪಟೇಲ್ ಮುಂಬಯಿ ವಾಂಖೆಡೆ ಸ್ಟೇಡಿಯಂನಲ್ಲೇ ಇತಿಹಾಸ ನಿರ್ಮಿಸಿದ್ದಾರೆ.

ಜಾಹೀರಾತು

ಇಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಎರಡನೇ ಟೆಸ್ಟ್ ನಲ್ಲಿ ಎಲ್ಲಾ 10 ವಿಕೆಟ್ ಪಡೆಯುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ 3ನೇ ಆಟಗಾರ ಹಾಗೂ ನ್ಯೂಜಿಲೆಂಡಿನ ಮೊದಲ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ.

ಇಂಗ್ಲೆಂಡ್ ನ ಜಿಮ್ ಲೇಕರ್ 1956ರಲ್ಲಿ ಆಸ್ಟ್ರೇಲಿಯ ವಿರುದ್ಧ 10 ವಿಕೆಟ್ ಪಡೆದಿದ್ದರು. ಅನಿಲ್ ಕುಂಬ್ಳೆ 1999ರಲ್ಲಿ ಪಾಕಿಸ್ತಾನದ ವಿರುದ್ಧ 10 ವಿಕೆಟ್ ಪಡೆದಿದ್ದರು. ಇದೀಗ 10 ವಿಕೆಟ್ ಕ್ಲಬ್ ಗೆ ಅಜಾಜ್ ಪಟೇಲ್ ಸೇರ್ಪಡೆಯಾಗಿದ್ದಾರೆ.

ಸ್ಕೋರ್ ವಿವರ: ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 325ಕ್ಕೆ ಆಲೌಟ್. ಮಾಯಂಕ್ ಅಗರ್ವಾಲ್ 150, ಅಕ್ಷರ್ ಪಟೇಲ್ 52.

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 62 ರನ್ನಿಗೆ ಸರ್ವಪತನವಾಗಿದೆ. ಅಶ್ವಿನ್ ಕೇವಲ 8 ರನ್ ನೀಡಿ 4 ವಿಕೆಟ್ ಪಡೆದರು.

ಭಾರತ ದ್ವಿತೀಯ ಇನ್ನಿಂಗ್ಸ್ ನಲ್ಲಿ ವಿಕೆಟ್ ನಷ್ಟವಿಲ್ಲದೆ 69 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ಮಾಯಂಕ್ ಅಗರ್ವಾಲ್ ಅಜೇಯ 38, ಚೇತೇಶ್ವರ ಪೂಜಾರ ಅಜೇಯ 29 ರನ್ ಗಳಿಸಿದ್ದು ಭಾರತ 332 ರನ್ನುಗಳ ಮುನ್ನಡೆ ಪಡೆದು ಉತ್ತಮ ಸ್ಥಿತಿಯಲ್ಲಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ವಿದ್ಯಾ ಕಾಲೇಜು: ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ ಕಾರ್ಯಕ್ರಮ

ಕಟಪಾಡಿ, ಜು.23: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್...

ಶೈಕ್ಷಣಿಕ ಬದುಕಿನ ಅರ್ಥವನ್ನು ಅರಿತುಕೊಳ್ಳಿ: ವಿದ್ಯಾರ್ಥಿಗಳಿಗೆ ಡಾ. ಕೆ. ಉಮೇಶ್ ಶೆಟ್ಟಿ ಕರೆ

ಕುಂದಾಪುರ, ಜು.23: ವಿದ್ಯಾರ್ಥಿಗಳು ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಧನಾತ್ಮಕವಾಗಿ ಚಿಂತಿಸಿ,...

ಕಟ್ಟಡ ಕಾಮಗಾರಿ ಕೆಲಸ ನಿರ್ವಹಿಸುತ್ತಿದ್ದ ಬಾಲ ಕಾರ್ಮಿಕನ ರಕ್ಷಣೆ

ಉಡುಪಿ, ಜು.23: ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರ್ ಗ್ರಾಮದಲ್ಲಿ ನಡೆಯುತ್ತಿರುವ ಕಟ್ಟಡ...
error: Content is protected !!