Saturday, July 25, 2026
Saturday, July 25, 2026

ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಸನ್ಮಾನ

ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರಿಗೆ ಸನ್ಮಾನ

Date:

ಉಡುಪಿ: ವಿಶ್ವಾದ್ಯಂತ ಶ್ರೀ ಕೃಷ್ಣ ಭಕ್ತಿ ಪ್ರಸಾರ ಮಾಡುತ್ತಾ ಇದೀಗ ಪರ್ಯಾಯ ಸಂಚಾರದಲ್ಲಿರುವ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ​ ​ತೀರ್ಥ ಸ್ವಾಮೀಜಿಯವರನ್ನು ಅಮೆರಿಕಾದ ವಾಸಿಂಗ್ಟನ್ ಡಿಸಿ ಇಲ್ಲಿರುವ ಪ್ರಸಿದ್ಧ ಶ್ರೀ ಶಿವ ವಿಷ್ಣು ದೇವಸ್ಥಾನದಲ್ಲಿ ದೇವಸ್ಥಾನದ ಮುಖ್ಯಸ್ಥರಾದ ಮುರಳಿ ಇಳಂ ಬಿಲನ್ ಅವರು ಸ್ವಾಗತಿಸಿದರು ಮತ್ತು ಪರ್ಯಾಯ ಪೀಠಾರೋಹಣ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದರು.

ಸ್ವಾಮೀಜಿಯವರಿಗೆ ವಾಷಿಂಗ್ಟನ್ ಡಿಸಿಯಲ್ಲಿರುವ ಜೆಎಸ್ಎಸ್ ಸಂಸ್ಥೆ ಮುಖ್ಯಸ್ಥರಾದ ಕುಮಾರ್ ರಾಜಶೇಖರ್ ಅವರು, ಇಸ್ಕಾನ್ ಮುಖ್ಯಸ್ಥೆ ಆನಂದ ಬೃಂದಾವನ ಅವರು, ರಾಜಧಾನಿ ಮಂದಿರದ ವತಿಯಿಂದ ಶ್ರೀ ಶ್ರೀ ನಟೇಶ್ ಅಯ್ಯರ್ ರವರು​, ವೇದಾಂತ ಉಪನ್ಯಾಸಕಾರ ​ಜಯಕೃಷ್ಣ ನೆಲಮಂಗಲ ​ಕೂಡ ಅಭಿನಂದನೆಗಳನ್ನು ಸಲ್ಲಿಸಿದರು.

ಕಾವೇರಿ ​ಕನ್ನಡ ಕೂಟದ ಅಧ್ಯಕ್ಷ ಸತೀಶ್ ಬೆಳಗುಟ್ಟಿ​,​ ​ಮಾಜಿ ಅಧ್ಯಕ್ಷರಾದ ಶರ್ಮಿಳಾಮೂರ್ತಿ, ಗುರು ನಾಗರಾಜ್, ಕೃಷ್ಣಮೂರ್ತಿ, ಕಾವೇರಿ ಸಂಘದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ವೀರಶೈವದ ಸಂಘದ ಮುಖಂಡ ಮಲ್ಲಿಕಾರ್ಜುನ್, ಪ್ರಸಿದ್ಧ ಕನ್ನಡ ಅಂಕಣಕಾರ ಶ್ರೀನಿವಾಸ ಜೋಶಿಯವರು​ ​ಕೂಡ ಸ್ವಾಮೀಜಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಆಧುನಿಕ ಜೀವನದಲ್ಲಿ ಭಗವದ್ಗೀತೆ ಎನ್ನುವ ವಿಷಯದ ಮೇಲೆ ಅತ್ಯುತ್ತಮ ರೀತಿಯಲ್ಲಿ ಜನರ ಮನ ಮನಸ್ಸಿನ ಮೇಲೆ ಪರಿಣಾಮ ಬೀರುವಂತೆ ಶ್ರೀಪಾದರು ಮಾತನಾಡಿದರು. ಜನಜೀವನದಲ್ಲಿನ ಉದಾಹರಣೆಗಳ ಮೂಲಕ ಭಗವದ್ಗೀತೆಯ ತತ್ವವನ್ನು ಮನಮುಟ್ಟುವಂತೆ ತಿಳಿಸಿದರು. ಸುಮಾರು ​100​ ಜನರು ಭಗವದ್ಗೀತೆ ಲೇಖನ ಯಜ್ಞದ ಸಂಕಲ್ಪ ತೆಗೆದುಕೊಂಡರು. ಕಾರ್ಯಕ್ರಮದ ಪ್ರಾಯೋಜಕರಾದ ವಾಸುದೇವಮೂರ್ತಿ ಕಾರ್ಯಕ್ರಮ ನಡೆಸಿಕೊಟ್ಟರು​.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

‘ರೂಮಿನೊಳಗಿಂದ’ ಬಿಡುಗಡೆ

ಗಂಗೊಳ್ಳಿ, ಜು.24: ನರೇಂದ್ರ ಅವರ ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ಆಕರ್ಷಣೆ ಅಭಿನಂದನೀಯ....

ಜು.27: ಅಜ್ಜರಕಾಡಿನಲ್ಲಿ ನೇರ ಸಂದರ್ಶನ

ಉಡುಪಿ, ಜು.24: ಉಡುಪಿಯ ಅಜ್ಜರಕಾಡು ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಧನಂಜಯ...

ಅಂಚೆ ಜೀವ ವಿಮಾ ಪ್ರತಿನಿಧಿಗಳ ಆಯ್ಕೆಗೆ ನೇರ ಸಂದರ್ಶನ

ಉಡುಪಿ, ಜು.24: ಉಡುಪಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಅಂಚೆ ಜೀವ ವಿಮೆ...

ನಾಟಾ ಪರೀಕ್ಷೆ- ಕ್ರಿಯೇಟಿವ್ ಸಂಸ್ಥೆಯ 4 ವಿದ್ಯಾರ್ಥಿಗಳಿಗೆ 100 ರ‍್ಯಾಂಕ್‌ನೊಳಗೆ ಸ್ಥಾನ

ಉಡುಪಿ, ಜು.24: ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನವರು ನಡೆಸಿದ ನಾಟಾ ಪರೀಕ್ಷೆ...
error: Content is protected !!