Thursday, November 19, 2026
Thursday, November 19, 2026

ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ ಜಿಯೋ ಲ್ಯಾಪ್ಟಾಪ್

ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ ಜಿಯೋ ಲ್ಯಾಪ್ಟಾಪ್

Date:

ಮುಂಬಯಿ: ರಿಲಯನ್ಸ್ ಜಿಯೋದಿಂದ ಅತ್ಯಂತ ಕಡಿಮೆ ಬೆಲೆಯ ಲ್ಯಾಪ್ಟಾಪ್ ಸಿಗಲಿದೆ. ಹೌದು.., ಜಿಯೋಬುಕ್ ಲ್ಯಾಪ್ಟಾಪ್ ನ್ನು ರಿಲಯನ್ಸ್ ಜಿಯೋ ಸದ್ದಿಲ್ಲದೆ ಬಿಡುಗಡೆ ಮಾಡಿದೆ.

ರಿಲಯನ್ಸ್ ಡಿಜಿಟಲ್ ಸ್ಟೋರ್ನಿಂದ ನೂತನ ಲ್ಯಾಪ್ಟಾಪ್ ಖರೀದಿಸಬಹುದು. ಇದು ಜಿಯೋ ಓ.ಏಶ್. ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತದೆ. ರಿಲಯನ್ಸ್ ಡಿಜಿಟಲ್ ವೆಬ್ಸೈಟ್ ನಲ್ಲಿ ಇದು ಪ್ರವೇಶ ಪಡೆದಿದೆ.

ಜಿಯೋಬುಕ್ ಬೆಲೆ: ರಿಲಯನ್ಸ್ ಡಿಜಿಟಲ್ ವೆಬ್ ಸೈಟ್ ನಲ್ಲಿ ರಿಲಯನ್ಸ್ ಜಿಯೋ ಜಿಯೋಬುಕ್ ಲ್ಯಾಪ್ಟಾಪ್ ಬೆಲೆ ಕೇವಲ ರೂ 15,799. ಇ.ಎಂ.ಐ ಸೌಲಭ್ಯಗಳೂ ಇವೆ.

ವಿಶೇಷತೆಗಳು: 11.6 ಇಂಚಿನ ಪರದೆಯೊಂದಿಗೆ 1366 x 768 ಪಿಕ್ಸೆಲ್ಗಳಿಗೆ ರೆಸಲ್ಯೂಶನ್ ಬೆಂಬಲದೊಂದಿಗೆ ಜಿಯೋಬುಕ್ ಬರುತ್ತದೆ. ವೀಡಿಯೊ ಕರೆಗಳನ್ನು ಮಾಡಲು ಸ್ಟೀರಿಯೋ ಸ್ಪೀಕರ್ಗಳು ಮತ್ತು 2ಎಂ.ಪಿ ವೆಬ್ ಕ್ಯಾಮೆರಾ, ಒಂದು ಎಚ್.ಡಿ.ಎಂ.ಐ ಪೋರ್ಟ್ ಕೂಡ ಇದೆ. ವೈ-ಫೈ ಮತ್ತು ಬ್ಲೂಟೂತ್ ಸಂಪರ್ಕ ಕೂಡ ಕಲ್ಪಿಸಲಾಗಿದೆ. 3.5ಎಂ.ಎಂ ಆಡಿಯೋ ಜ್ಯಾಕ್, 128ಜಿಬಿ ವರೆಗಿನ ಮೈಕ್ರೊ ಎಸ್.ಡಿ ಕಾರ್ಡ್ ಸ್ಲಾಟ್, 5000ಎಂ.ಎ.ಎಚ್ ಬ್ಯಾಟರಿ ಮತ್ತು ಒಂದು ವರ್ಷದ ವಾರಂಟಿಯೊಂದಿಗೆ ಜಿಯೋಬುಕ್ ಬರುತ್ತದೆ. ಇದು 32ಜಿಬಿ ಎ.ಎಂ.ಎಂ.ಸಿ ಮೆಮೊರಿಯನ್ನು ಹೊಂದಿದೆ. ಇದರಲ್ಲಿ ಇನ್ ಬಿಲ್ಟ್ ೪ಜಿ ಎಲ್.ಟಿ.ಇ ಸಂಪರ್ಕವಿದೆ. ಇದರಿಂದ ಸುಲಲಿತವಾಗಿ ಅಂತರ್ಜಾಲ ಸಂಪರ್ಕ ಸಾಧ್ಯ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾವೇರಿ 2.0: ಆಸ್ತಿ ನೋಂದಣಿಗೆ ಡಿಜಿಟಲ್ ಸ್ಪರ್ಶ

ಬೆಂಗಳೂರು, ನ.19: ಆಸ್ತಿ ನೋಂದಣಿಗಾಗಿ ಕಚೇರಿಗಳಿಗೆ ತೆರಳಿ ಭೌತಿಕ ದಾಖಲೆಗಳನ್ನು ಸಲ್ಲಿಸುವ...

‘ಋತು ತಾರೆ’ ವಿನೂತನ ಕಾರ್ಯಕ್ರಮ

ಬೆಂಗಳೂರು, ನ.೧೯: ಮಹಿಳೆಯರ ಮಧ್ಯವಯಸ್ಸಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಸೂಕ್ತ...

ಬಂಟ್ವಾಳ: ಹೊಂಡ-ಗುಂಡಿಗಳ ವರದಿ ಬಗ್ಗೆ ಸಿಎಂ ಕಛೇರಿ ಸ್ಪಂದನೆ

ಬಂಟ್ವಾಳ, ನ.19: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಲಕ ಹಾದುಹೋಗುವ...

ಮುರಳಿ ಕಡೆಕಾರ್ ಇವರಿಗೆ ಶಾರದಾಕೃಷ್ಣ ಪ್ರಶಸ್ತಿ-2027

ಉಡುಪಿ, ನ.18: ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ...
error: Content is protected !!