Home ಸುದ್ಧಿಗಳು ರಾಜ್ಯ ಕೆನರಾ ಪ್ರೌಢಶಾಲೆಗೆ ತೇಜಸ್ವಿ ಸೂರ್ಯ ಭೇಟಿ

ಕೆನರಾ ಪ್ರೌಢಶಾಲೆಗೆ ತೇಜಸ್ವಿ ಸೂರ್ಯ ಭೇಟಿ

492
0

ಮಂಗಳೂರು, ಫೆ. 5: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ, ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ತೇಜಸ್ವಿ ಸೂರ್ಯ ಅವರು ಮಂಗಳೂರಿನ ಡೊಂಗರಕೇರಿಯಲ್ಲಿರುವ ಕೆನರಾ ಪ್ರೌಢ ಶಾಲೆ (ಪ್ರಧಾನ) ಇಲ್ಲಿ ಭೇಟಿ ನೀಡಿ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡಿದರು.

135 ವರ್ಷಗಳ ಹಿಂದೆ ಭವಿಷ್ಯದ ಭಾರತದ ಬಗ್ಗೆ ದೂರದೃಷ್ಟಿ ಇಟ್ಟುಕೊಂಡು ಅಮ್ಮೆಂಬಳ ಸುಬ್ಬರಾವ್ ಪೈಯವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಕಿಂಗ್ ಕ್ಷೇತ್ರಗಳು ಪ್ರಸ್ತುತ ಸಾಧಿಸಿರುವ ಹಿರಿಮೆಯ ಬಗ್ಗೆ ತೇಜಸ್ವಿ ಸೂರ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್, ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಆಡಳಿತ ಮಂಡಳಿಯ ಸದಸ್ಯರಾದ‌ ನರೇಶ್ ಶೆಣೈ, ಪ್ರಬಂಧಕರಾದ ವಿವೇಕ್ ಶೆಣೈ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.