Monday, July 27, 2026
Monday, July 27, 2026

ವಿಶ್ವಗುರುಗಳಾದ ಶ್ರೀಮಧ್ವಾಚಾರ್ಯರ ಕೊಡುಗೆ ಅಮೋಘ: ಪುತ್ತಿಗೆ ಶ್ರೀ

ವಿಶ್ವಗುರುಗಳಾದ ಶ್ರೀಮಧ್ವಾಚಾರ್ಯರ ಕೊಡುಗೆ ಅಮೋಘ: ಪುತ್ತಿಗೆ ಶ್ರೀ

Date:

ಬೆಂಗಳೂರು, ಜು. 29: ವಿಶ್ವಗುರುಗಳಾದ ಶ್ರೀಮಧ್ವಾಚಾರ್ಯರು ಸಜ್ಜನರ ಉದ್ಧಾರಕ್ಕಾಗಿ ಅಪೂರ್ವವಾದ ಕೊಡುಗೆಯನ್ನು ನೀಡಿದ್ದಾರೆ. ಪ್ರಸ್ಥಾನ ತ್ರಯಗಳಿಗೆ ಅತ್ಯದ್ಭುತವಾದ ವ್ಯಾಖ್ಯಾನವನ್ನು ಮಾಡಿದ್ದಾರೆ. ಶ್ರೀಮಧ್ವಾಚಾರ್ಯರು ನೀಡಿದ ಗ್ರಂಥಗಳೆಲ್ಲವೂ ಅತ್ಯಂತ ವಿಮರ್ಶಾತ್ಮಕವಾಗಿದೆ. ಅದರಲ್ಲಿಯೂ ಅವರು ರಚಿಸಿರುವ ಮಹಾಭಾರತ ತಾತ್ಪರ್ಯ ನಿರ್ಣಯವು ಅತ್ಯುತ್ಕೃಷ್ಟ ವಿಮರ್ಶಾತ್ಮಕ ಗ್ರಂಥವಾಗಿದೆ.

ಈ ಗ್ರಂಥಗಳ ಅಧ್ಯಯನದಿಂದ ಉತ್ತಮವಾದ ಜ್ಞಾನವನ್ನು ಪಡೆಯಬಹುದು ಎಂದು ಪುತ್ತಿಗೆ ಶ್ರೀಪಾದರು ಹೇಳಿದರು. ಶ್ರೀಪಾದರು ಬೆಂಗಳೂರಿನಲ್ಲಿ ನಡೆದ ತಾತ್ಪರ್ಯ ನಿರ್ಣಯ ಗ್ರಂಥದ ಮಂಗಳೋತ್ಸವದಲ್ಲಿ ಅನುಗ್ರಹ ಸಂದೇಶವನ್ನು ನೀಡಿದರು. ಪ್ರಸನ್ನ ಆಚಾರ್ಯರ ಪುತ್ರ ಸಾತ್ವಿಕನಿಗೆ ಪ್ರಸಿದ್ಧ ವಿದ್ವಾಂಸರಾದ ಪ್ರೊ. ಹರಿದಾಸ ಭಟ್ಟರು ಕಳೆದ ಕೆಲವು ತಿಂಗಳುಗಳಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದ ಪಾಠವನ್ನು ಮಾಡುತ್ತಿದ್ದರು. ಅದರ ಮಂಗಳೋತ್ಸವದ ನಿಮಿತ್ತವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ವಾನ್ ಹರಿದಾಸ ಭಟ್ಟರು ಮಧ್ವಾಚಾರ್ಯರ ಗ್ರಂಥಗಳ ಮಹತ್ವವನ್ನು ತಿಳಿಸಿದರು. ಸಾತ್ವಿಕನು ಗ್ರಂಥದ ಅನುವಾದವನ್ನು ಮಾಡಿದನು.

ಶ್ರೀಪಾದರ ಮುಖ್ಯ ಕಾರ್ಯದರ್ಶಿಗಳಾದ ವಿದ್ವಾನ್ ಎಂ.ಪ್ರಸನ್ನ ಆಚಾರ್ಯರ ಮನೆಯಲ್ಲಿ ಶ್ರೀಪುತ್ತಿಗೆ ಮಠದ ಸಂಸ್ಥಾನ ಪೂಜೆ, ಯತಿ ಭಿಕ್ಷೆ ಹಾಗೂ ಮಹಾಭಾರತ ತಾತ್ಪರ್ಯ ನಿರ್ಣಯ ಗ್ರಂಥದ ಮಂಗಳ ಮತ್ತು ಬದರೀಯಾತ್ರೆಯ ಸಮರ್ಪಣಾ ಕಾರ್ಯಕ್ರಮ ನಡೆಯಿತು. 108 ಜನರಿಗೆ ಗೀತಾಲೇಖನ ಯಜ್ಞದ ದೀಕ್ಷೆಯನ್ನು ನೀಡಲಾಯಿತು. ಪ್ರಸಿದ್ಧ ವಿದ್ವಾಂಸರು ಹಾಗೂ ಮಠದ ಅಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದು ಹೆಮ್ಮೆಯ ಕ್ಷಣ: ಕಾರ್ಗಿಲ್ ಯೋಧ ಅನಂತಪದ್ಮನಾಭ ನಾಯಕ್

ಶಿರ್ವ, ಜು.26: 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶದ ಪರವಾಗಿ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ: ಸಿದ್ದರಾಮಯ್ಯ

ಬೆಂಗಳೂರು, ಜು.26: ಧರ್ಮೇಂದ್ರ ಪ್ರಧಾನ್ ರಾಜೀನಾಮೆ ದೇಶದ ಎಚ್ಚೆತ್ತ ಯುವಜನರ ಗೆಲುವಾಗಿದೆ....
error: Content is protected !!