Saturday, November 21, 2026
Saturday, November 21, 2026

ರಾಜ್ಯದಲ್ಲಿ ಬೃಹತ್‌ ಸ್ಟಾರ್ಟಪ್‌ ಪಾರ್ಕ್‌ ನಿರ್ಮಾಣ: ಎಂ.ಬಿ. ಪಾಟೀಲ್

ರಾಜ್ಯದಲ್ಲಿ ಬೃಹತ್‌ ಸ್ಟಾರ್ಟಪ್‌ ಪಾರ್ಕ್‌ ನಿರ್ಮಾಣ: ಎಂ.ಬಿ. ಪಾಟೀಲ್

Date:

ಬೆಂಗಳೂರು, ನ.20: ಜಾಗತಿಕ ಸ್ಟಾರ್ಟ್‌ಅಪ್‌ ನಕ್ಷೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಕರ್ನಾಟಕದ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ, ಬೆಂಗಳೂರಿನ ಸಮೀಪ 1,000 ಎಕರೆ ಹಾಗೂ ಹುಬ್ಬಳ್ಳಿ-ಧಾರವಾಡದ ಸಮೀಪ 100ರಿಂದ 200 ಎಕರೆ ವಿಸ್ತೀರ್ಣದಲ್ಲಿ ಮಾದರಿ ಸ್ಟಾರ್ಟ್‌ಅಪ್‌ ಪಾರ್ಕ್‌ಗಳನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸುತ್ತಿದ್ದೇವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದರು. ಬೆಂಗಳೂರು ಟೆಕ್‌ ಸಮ್ಮಿಟ್‌ 2026ರ ಎರಡನೇ ದಿನವಾದ ಬುಧವಾರ ನವೋದ್ಯಮಗಳ ಸಂಸ್ಥಾಪಕರು ಹಾಗೂ ಹೂಡಿಕೆದಾರರೊಂದಿಗೆ ಅವರು ಸಂವಾದ ನಡೆಸಿ, ಅವರ ಸಮಸ್ಯೆಗಳು, ಅಗತ್ಯಗಳು ಮತ್ತು ನಿರೀಕ್ಷೆಗಳನ್ನು ಆಲಿಸಿದರು.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಭೂಮಿಯ ಬೆಲೆಗಳು ನವೋದ್ಯಮಗಳ ಬೆಳವಣಿಗೆಗೆ ಸವಾಲಾಗುತ್ತಿರುವುದನ್ನು ಮನಗಂಡು, ಕೈಗೆಟುಕುವ ದರದಲ್ಲಿ ಕೈಗಾರಿಕಾ ನಿವೇಶನಗಳನ್ನು ಒದಗಿಸುವ ಉದ್ದೇಶದಿಂದ ಈ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಮ್ಮ ಮುಂದಿದೆ.

ಹೊಸ ಆಲೋಚನೆಗಳಿಗೆ ಸೂಕ್ತ ವೇದಿಕೆ, ನವೋದ್ಯಮಗಳಿಗೆ ಅಗತ್ಯ ಮೂಲಸೌಕರ್ಯ, ಯುವ ಉದ್ಯಮಿಗಳಿಗೆ ಉತ್ತೇಜನ ಹಾಗೂ ಅರ್ಹ ನವೋದ್ಯಮಗಳಿಗೆ ಹೆಚ್ಚುವರಿ ಶೇ.5ರಷ್ಟು ಸಹಾಯಧನದ ಮೂಲಕ ಉದ್ಯಮಶೀಲತೆಗೆ ಹೊಸ ಚೈತನ್ಯ ತುಂಬುವುದು ನಮ್ಮ ಗುರಿ.

ಅಷ್ಟೇ ಅಲ್ಲ, ಏಕಗವಾಕ್ಷಿ ವ್ಯವಸ್ಥೆಯಡಿ ಈಗಾಗಲೇ 116 ಸೇವೆಗಳನ್ನು ಒದಗಿಸಲಾಗುತ್ತಿದ್ದು, ಈ ಸಂಖ್ಯೆಯನ್ನು 130ಕ್ಕೂ ಹೆಚ್ಚು ಸೇವೆಗಳಿಗೆ ವಿಸ್ತರಿಸುವ ಗುರಿ ಹೊಂದಿದ್ದೇವೆ. ಕೈಗಾರಿಕೆಗಳ ಅಗತ್ಯಕ್ಕೆ ತಕ್ಕಂತೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮವನ್ನು ಪರಿಷ್ಕರಿಸುವ ಮೂಲಕ ಉದ್ಯಮರಂಗಕ್ಕೆ ಅಗತ್ಯವಿರುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ರೂಪಿಸಲೂ ಒತ್ತು ನೀಡಲಾಗುವುದು.

ನಮ್ಮ ಗುರಿ ಕೇವಲ ಬೆಂಗಳೂರಿನ ಬೆಳವಣಿಗೆಯಲ್ಲ; ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರತಿಯೊಂದು ಭಾಗದಲ್ಲೂ ನವೋದ್ಯಮ, ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಸಮಾನ ಅವಕಾಶಗಳನ್ನು ಕಲ್ಪಿಸಿ, ರಾಜ್ಯವನ್ನು ದೇಶದ ಪ್ರಮುಖ ಸ್ಟಾರ್ಟ್‌ಅಪ್‌ ತಾಣವನ್ನಾಗಿ ರೂಪಿಸುವುದಾಗಿದೆ ಎಂದು ಸಚಿವರು ಹೇಳಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವ್ಯವಹಾರಸ್ಥರ ಉತ್ತಮ ನಡವಳಿಕೆಯಿಂದ ಸಂಸ್ಥೆಯ ಮೌಲ್ಯ ವೃದ್ಧಿ: ನರೇಂದ್ರ ಎಸ್ ಗಂಗೊಳ್ಳಿ

ಕುಂದಾಪುರ, ನ.21: ಗಂಗೊಳ್ಳಿಯ ಶ್ರೀ ವೆಂಕಟೇಶ ಕೃಪಾ ಟ್ರೇಡರ್ಸ್ ಇವರು ಹಮ್ಮಿಕೊಂಡಿದ್ದ...

ವೈಯಕ್ತಿಕ ಬಿಸಿನೆಸ್ ಕರೆಸ್ಪಾಂಡೆಂಟ್‌ಗಳ ನೇಮಕಾತಿ : ಅರ್ಜಿ ಆಹ್ವಾನ

ಉಡುಪಿ, ನ.21: ಅಂಚೆ ಕಚೇರಿಯ ಬ್ಯಾಂಕ್ ಆದ ಇಂಡಿಯಾ ಪೋಸ್ಟ್ ಪೇಮೆಂಟ್ಸ್...

ಬಡ್ಡಿ ಸಹಾಯಧನ ಸಾಲದ ಖಾತೆಗೆ ಜಮಾ: ಪ್ರಸ್ತಾವನೆ ಆಹ್ವಾನ

ಉಡುಪಿ, ನ.21: ಕೇಂದ್ರ ಸರ್ಕಾರದ ಎಂ.ಎಸ್.ಎA.ಇ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ...

ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಅವಶ್ಯಕ: ಪ್ರಸಾದ್ ಮಲ್ಯ

ಉಡುಪಿ, ನ.21: ಹರಿಖಂಡಿಗೆಯ ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯ...
error: Content is protected !!