Sunday, November 22, 2026
Sunday, November 22, 2026

ವ್ಯವಹಾರಸ್ಥರ ಉತ್ತಮ ನಡವಳಿಕೆಯಿಂದ ಸಂಸ್ಥೆಯ ಮೌಲ್ಯ ವೃದ್ಧಿ: ನರೇಂದ್ರ ಎಸ್ ಗಂಗೊಳ್ಳಿ

ವ್ಯವಹಾರಸ್ಥರ ಉತ್ತಮ ನಡವಳಿಕೆಯಿಂದ ಸಂಸ್ಥೆಯ ಮೌಲ್ಯ ವೃದ್ಧಿ: ನರೇಂದ್ರ ಎಸ್ ಗಂಗೊಳ್ಳಿ

Date:

ಕುಂದಾಪುರ, ನ.21: ಗಂಗೊಳ್ಳಿಯ ಶ್ರೀ ವೆಂಕಟೇಶ ಕೃಪಾ ಟ್ರೇಡರ್ಸ್ ಇವರು ಹಮ್ಮಿಕೊಂಡಿದ್ದ ದೀಪಾವಳಿ ಧಮಾಕ 2026ರ ಸಮಾರೋಪ ಸಮಾರಂಭ ಶಾರದ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಮಾತನಾಡಿ, ಇಂದಿನ ಈ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರ ಜೊತೆಗಿನ ಬಾಂಧವ್ಯ ವೃದ್ಧಿ ಬಹಳ ಅಗತ್ಯವಾದದು. ಅದರ ಜೊತೆಯಲ್ಲಿಯೇ ವ್ಯವಹಾರಸ್ಥರು ವೈಯಕ್ತಿಕವಾಗಿ ಉತ್ತಮ ನಡೆ-ನುಡಿಗಳನ್ನು ಅಳವಡಿಸಿಕೊಂಡಾಗ ಅದು ಸಂಸ್ಥೆಗೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ. ಅಂತಹ ಕಾರ್ಯವನ್ನು ವೆಂಕಟೇಶ್ ಕೃಪಾ ಟ್ರೇಡರ್ಸ್ ನವರು ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಗಂಗೊಳ್ಳಿಯ ಹಿರಿಯ ಕಲಾವಿದರಾದ ಜಿ. ಪಾಂಡುರಂಗ ಮಡಿವಾಳ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಾನ್ವಿ ಏಜೇನ್ಸಿಸ್ ಮಾಲಕ ಪ್ರಶಾಂತ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ ಶೆಣೈ ಮತ್ತು ಜಯಶ್ರೀ ಶೆಣೈ ದಂಪತಿ ಉಪಸ್ಥಿತರಿದ್ದರು. ಗಂಗೊಳ್ಳಿಯಲ್ಲಿ ತುರ್ತು ಚಿಕಿತ್ಸಾ ವಾಹನಗಳ ಚಾಲಕರುಗಳಾದ ಸಚಿನ್ ಖಾರ್ವಿ ಮತ್ತು ಮಹಮ್ಮದ್ ಹಬೀಬಿ ತಾಶಮ್ ರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ದೀಪಾವಳಿ ವಿಶೇಷ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು. ವಿಜಯ ಶೆಣೈ ಪ್ರಾರ್ಥಿಸಿದರು. ವೆಂಕಟೇಶ ಶೆಣೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೃಷಭ್ ಶೆಣೈ ಸ್ವಾಗತಿಸಿದರು. ವಿಠಲ ಶೆಣೈ ಅತಿಥಿಗಳನ್ನು ಪರಿಚಯಿಸಿದರು. ಸುಧೀರ್ ಖಾರ್ವಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವರ್ಷ ಶೆಣೈ ಕಾರ್ಯಕ್ರಮ ನಿರೂಪಿಸಿ, ವಜ್ರೇಶ್ ಶೆಣೈ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವೈಯಕ್ತಿಕ ಬಿಸಿನೆಸ್ ಕರೆಸ್ಪಾಂಡೆಂಟ್‌ಗಳ ನೇಮಕಾತಿ : ಅರ್ಜಿ ಆಹ್ವಾನ

ಉಡುಪಿ, ನ.21: ಅಂಚೆ ಕಚೇರಿಯ ಬ್ಯಾಂಕ್ ಆದ ಇಂಡಿಯಾ ಪೋಸ್ಟ್ ಪೇಮೆಂಟ್ಸ್...

ಬಡ್ಡಿ ಸಹಾಯಧನ ಸಾಲದ ಖಾತೆಗೆ ಜಮಾ: ಪ್ರಸ್ತಾವನೆ ಆಹ್ವಾನ

ಉಡುಪಿ, ನ.21: ಕೇಂದ್ರ ಸರ್ಕಾರದ ಎಂ.ಎಸ್.ಎA.ಇ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ...

ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಅವಶ್ಯಕ: ಪ್ರಸಾದ್ ಮಲ್ಯ

ಉಡುಪಿ, ನ.21: ಹರಿಖಂಡಿಗೆಯ ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯ...

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: ಬಿ. ಬಿ. ಹೆಗ್ಡೆ ಕಾಲೇಜಿನ ಶ್ರಾವ್ಯಾ ವಿಜಯ್ ಪ್ರಥಮ

ಕುಂದಾಪುರ, ನ.21: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ....
error: Content is protected !!