Sunday, November 22, 2026
Sunday, November 22, 2026

ವೈಯಕ್ತಿಕ ಬಿಸಿನೆಸ್ ಕರೆಸ್ಪಾಂಡೆಂಟ್‌ಗಳ ನೇಮಕಾತಿ : ಅರ್ಜಿ ಆಹ್ವಾನ

ವೈಯಕ್ತಿಕ ಬಿಸಿನೆಸ್ ಕರೆಸ್ಪಾಂಡೆಂಟ್‌ಗಳ ನೇಮಕಾತಿ : ಅರ್ಜಿ ಆಹ್ವಾನ

Date:

ಉಡುಪಿ, ನ.21: ಅಂಚೆ ಕಚೇರಿಯ ಬ್ಯಾಂಕ್ ಆದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB), ಉಡುಪಿ ಶಾಖೆಯು ಜಿಲ್ಲೆಯ ಜನರಿಗೆ ಅಗತ್ಯ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಕಮಿಷನ್ ಆಧಾರಿತ ವೈಯಕ್ತಿಕ ಬಿಸಿನೆಸ್ ಕರೆಸ್ಪಾಂಡೆಂಟ್‌ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಉಡುಪಿ ಶಾಖೆಯಲ್ಲಿ ಒಟ್ಟು 30 ಹುದ್ದೆಗಳು ಲಭ್ಯವಿದ್ದು, ಜಿಲ್ಲೆಯ ಆಸಕ್ತರು, ನಿವೃತ್ತ ನೌಕರರು, ಸಾಮಾನ್ಯ ಸೇವಾ ಕೇಂದ್ರಗಳ ನಿರ್ವಾಹಕರು ಅಥವಾ ಇತರ ವ್ಯಾಪಾರ ಸಂಸ್ಥೆಗಳು ಮತ್ತು ಉದ್ಯಮಗಳನ್ನು ನಡೆಸುತ್ತಿರುವ 18 ರಿಂದ 70 ವರ್ಷದೊಳಗಿನ, ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇದು ಕಮಿಷನ್ ಆಧಾರಿತ ಕೆಲಸವಾಗಿದ್ದು, ನಿಗದಿತ ಮಾಸಿಕ ವೇತನ ಇರುವ ಉದ್ಯೋಗವಲ್ಲ. ಅಭ್ಯರ್ಥಿಗಳು ಒದಗಿಸುವ ಬ್ಯಾಂಕಿಂಗ್ ಸೇವೆಗಳು ಮತ್ತು ನಡೆಸುವ ವಹಿವಾಟುಗಳ ಆಧಾರದ ಮೇಲೆ ಕಮಿಷನ್ ಪಡೆಯಲಿದ್ದಾರೆ. ಅರ್ಜಿ ಸಲ್ಲಿಸಲು ಡಿಸೆಂಬರ್ 5 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಉಡುಪಿ ಶಾಖೆ ದೂ.ಸಂಖ್ಯೆ: 0820-2522005, ಮೊ.ನಂ: 7899971688 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನ ಉಡುಪಿ ಶಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವ್ಯವಹಾರಸ್ಥರ ಉತ್ತಮ ನಡವಳಿಕೆಯಿಂದ ಸಂಸ್ಥೆಯ ಮೌಲ್ಯ ವೃದ್ಧಿ: ನರೇಂದ್ರ ಎಸ್ ಗಂಗೊಳ್ಳಿ

ಕುಂದಾಪುರ, ನ.21: ಗಂಗೊಳ್ಳಿಯ ಶ್ರೀ ವೆಂಕಟೇಶ ಕೃಪಾ ಟ್ರೇಡರ್ಸ್ ಇವರು ಹಮ್ಮಿಕೊಂಡಿದ್ದ...

ಬಡ್ಡಿ ಸಹಾಯಧನ ಸಾಲದ ಖಾತೆಗೆ ಜಮಾ: ಪ್ರಸ್ತಾವನೆ ಆಹ್ವಾನ

ಉಡುಪಿ, ನ.21: ಕೇಂದ್ರ ಸರ್ಕಾರದ ಎಂ.ಎಸ್.ಎA.ಇ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ...

ಉಚಿತ ಆರೋಗ್ಯ ಶಿಬಿರಗಳು ಅತ್ಯಂತ ಅವಶ್ಯಕ: ಪ್ರಸಾದ್ ಮಲ್ಯ

ಉಡುಪಿ, ನ.21: ಹರಿಖಂಡಿಗೆಯ ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಸ್ಥೆಯ...

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ: ಬಿ. ಬಿ. ಹೆಗ್ಡೆ ಕಾಲೇಜಿನ ಶ್ರಾವ್ಯಾ ವಿಜಯ್ ಪ್ರಥಮ

ಕುಂದಾಪುರ, ನ.21: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ....
error: Content is protected !!