Saturday, November 21, 2026
Saturday, November 21, 2026

‘ಪತ್ರಿಕಾ ಬರಹಗಳು ಮತ್ತು ಲೇಖನಗಳು’- ವಿಶೇಷ ಉಪನ್ಯಾಸ

‘ಪತ್ರಿಕಾ ಬರಹಗಳು ಮತ್ತು ಲೇಖನಗಳು’- ವಿಶೇಷ ಉಪನ್ಯಾಸ

Date:

ಕುಂದಾಪುರ, ನ.20: ಹಲವು ಸ್ಥಿತ್ಯಂತರಗಳು, ತಾಂತ್ರಿಕ ಬದಲಾವಣೆಗಳು ಹಾಗೂ ಕಾಲಘಟ್ಟದ ಸವಾಲುಗಳನ್ನು ದಾಟಿ ಬೆಳೆದು ಬಂದಿರುವ ಪತ್ರಿಕೋದ್ಯಮ ಇಂದು ವೇಗ, ಸಂಕ್ಷಿಪ್ತತೆ ಮತ್ತು ನಿಖರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಓದುಗರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಅರ್ಥಪೂರ್ಣ ಮಾಹಿತಿಯನ್ನು ತಲುಪಿಸುವುದು ಇಂದಿನ ಪತ್ರಿಕಾ ವರದಿಗಳ ಪ್ರಮುಖ ಉದ್ದೇಶವಾಗಿದೆ. ಆದರೆ ವರದಿಗಳು ಕೇವಲ ಮಾಹಿತಿಯ ಸಂಗ್ರಹವಾಗದೆ, ವಾಸ್ತವಿಕ ಜಗತ್ತಿನ ಘಟನೆಗಳು, ಜನಜೀವನದ ಸಮಸ್ಯೆಗಳು ಮತ್ತು ಸಾಮಾಜಿಕ ಬದಲಾವಣೆಗಳಿಗೆ ತೀರ ಹತ್ತಿರವಾಗಿರಬೇಕು. ವಿಷಯದ ಆಳವಾದ ಗ್ರಹಿಕೆ, ನಿರಂತರ ಓದು, ಜೀವನಾನುಭವ ಮತ್ತು ಸೂಕ್ಷ್ಮ ಅವಲೋಕನಗಳು ಪರಿಣಾಮಕಾರಿ ಬರವಣಿಗೆಯ ಮೂಲಾಧಾರಗಳಾಗಿವೆ. ಇವುಗಳ ಮೂಲಕವೇ ಬರವಣಿಗೆಯ ಕೌಶಲ್ಯವನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಕುಂದಾಪುರದ ಹಿರಿಯ ಪತ್ರಕರ್ತ ಜಾನ್ ಡಿಸೋಜಾ ಹೇಳಿದರು.

ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಆಯೋಜಿಸಿದ ಬೆಳದಿಂಗಳ ಚಿಂತನ ಉಪನ್ಯಾಸ ಮಾಲಿಕೆಯಲ್ಲಿ ಪತ್ರಿಕಾ ಬರಹಗಳು ಮತ್ತು ಲೇಖನಗಳು ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಅವರು ವಿದ್ಯಾರ್ಥಿಗಳಿಗೆ ಜ್ಞಾನವನ್ನು ತಲುಪಿಸುವ ಶಿಕ್ಷಕರಲ್ಲಿ ಓದಿನ ಹಸಿವು, ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಹಾಗೂ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕೌಶಲ್ಯ ಸದಾ ಜೀವಂತವಾಗಿರಬೇಕು. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು, ಕಾಲಕ್ಕೆ ತಕ್ಕಂತೆ ಜ್ಞಾನವನ್ನು ನವೀಕರಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಪ್ರಸ್ತಾವಿಸಿದರು. ಕಾರ್ಯಕ್ರಮ ಸಂಯೋಜಕಿ ರೇಷ್ಮಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಶ್ಮಿತಾ ಶೆಟ್ಟಿ ವಂದಿಸಿ, ಪ್ರವೀಣಾ ಎಮ್. ಪೂಜಾರಿ ನಿರೂಪಿಸಿದರು. ಮಹೇಶ್ ನಾಯ್ಕ್ ಮತ್ತು ತಂಡ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ- ಬೋಧಕೇತರ ವೃಂದದವರು ಪಾಲ್ಗೊಂಡರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತೀವ್ರತರ ಅತಿಸಾರ ಭೇದಿ ನಿಯಂತ್ರಣ ಅಭಿಯಾನ

ಉಡುಪಿ, ನ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದಾಪುರ...

‘ಮಕ್ಕಳ ರಕ್ಷಣೆಯಲ್ಲಿ ಪೊಲೀಸ್ ಇಲಾಖೆ ಪಾತ್ರ’ -ಒಂದು ದಿನದ ತರಬೇತಿ ಕಾರ್ಯಾಗಾರ

ಉಡುಪಿ, ನ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,...

ಶಾಸ್ತ್ರೀಯ ಶಿಸ್ತು ಜಾನಪದ ಸ್ವಾತಂತ್ರ‍್ಯದಿಂದ ಯಕ್ಷಗಾನಕ್ಕೆ ಜನಮನ್ನಣೆ: ಪ್ರೊ. ಎಂ.ಎಲ್. ಸಾಮಗ

ಉಡುಪಿ, ನ.20: ಸಾಂಸ್ಕೃತಿಕ ವಿಶ್ವ ಮನ್ನಣೆ ಪಡೆಯಲು ರಾಜ್ಯದ ಎಲ್ಲಾ ಭಾಗವು...

ಸರಸ್ವತಿ ವಿದ್ಯಾಲಯ: ಕನ್ನಡ ಸಿರಿ ಕಾರ್ಯಕ್ರಮ

ಗಂಗೊಳ್ಳಿ, ನ.20: ಒಂದು ಭಾಷೆ ಬೆಳೆಯಲು ವಿವಿಧ ಭಾಷೆಗಳ ನಡುವೆ ಸಮನ್ವಯ...
error: Content is protected !!