Tuesday, August 11, 2026
Tuesday, August 11, 2026

ಬರ ಪರಿಸ್ಥಿತಿ ಕುರಿತು ಡಿಸಿ ಮತ್ತು ಸಿಇಒಗಳ‌ ಜೊತೆ ಸಿಎಂ ವಿಡಿಯೋ ಸಂವಾದ

ಬರ ಪರಿಸ್ಥಿತಿ ಕುರಿತು ಡಿಸಿ ಮತ್ತು ಸಿಇಒಗಳ‌ ಜೊತೆ ಸಿಎಂ ವಿಡಿಯೋ ಸಂವಾದ

Date:

ಬೆಂಗಳೂರು, ಜು.20: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬರ ಪರಿಸ್ಥಿತಿ ಕುರಿತು ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ‌ ಜೊತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಡಿಯೋ ಸಂವಾದ ನಡೆಸಿ ಪ್ರಮುಖ ನಿರ್ದೇಶನ ನೀಡಿದರು, ರೂ. 1 ಕೋಟಿ ಹೆಚ್ಚುವರಿ ಅನುದಾನ: ಗ್ರಾಮೀಣ ತಾಲ್ಲೂಕುಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ಹೆಚ್ಚುವರಿ ಅನುದಾನ ಘೋಷಣೆ. ಬೋಗಸ್ ಬೋರ್‌ವೆಲ್‌ಗೆ ಬ್ರೇಕ್: ಹೊಸ ಬೋರ್‌ವೆಲ್‌ ಕೊರೆಸುವಾಗ ಕಡ್ಡಾಯವಾಗಿ ವಿಡಿಯೋ ಚಿತ್ರೀಕರಣ ಆಗಬೇಕು. ನಕಲಿ ಪ್ರಕರಣಗಳು ಕಂಡುಬಂದರೆ ಸಿಇಒಗಳೇ ನೇರ ಹೊಣೆ. ಕೇಂದ್ರಕ್ಕೆ ಶೀಘ್ರ ವರದಿ: ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬರ ಪರಿಸ್ಥಿತಿಯ ಸಮಗ್ರ ವರದಿ ಸಲ್ಲಿಕೆ; ಕೇಂದ್ರ ತಂಡಕ್ಕೆ ವಾಸ್ತವಾಂಶ ಮನವರಿಕೆ ಮಾಡಲು ಸೂಚನೆ. ರೈತರ ಹಿತರಕ್ಷಣೆಗೆ ಆದ್ಯತೆ: ಸಣ್ಣ ಮತ್ತು ಅತಿ ಸಣ್ಣ ರೈತರ ಹಿತವೇ ಮುಖ್ಯ ಆದ್ಯತೆ. ಕೃಷಿ, ಪಶುಸಂಗೋಪನೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ವಿದ್ಯುತ್ ವ್ಯವಸ್ಥೆ: ಟ್ರಾನ್ಸ್‌ಫಾರ್ಮರ್‌ಗಳ ರಿಪೇರಿಗೆ ವಿಶೇಷ ಗಮನ ನೀಡಿ, ಹೆಚ್ಚುವರಿ ಟ್ರಾನ್ಸ್‌ಫಾರ್ಮರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲು 4G ವಿನಾಯಿತಿ. ‘ಟೀಮ್ ಕರ್ನಾಟಕ” ಮನಸ್ಥಿತಿ: ಅಧಿಕಾರಿಗಳು ಕೇವಲ ಕಾಗದದ ವರದಿ ನೀಡದೆ, ಫೀಲ್ಡ್‌ಗಿಳಿದು ಆಡಳಿತಾತ್ಮಕ ಟೀಮ್‌ ವರ್ಕ್ ಮತ್ತು ಕಾರ್ಯಕ್ಷಮತೆ ಪ್ರದರ್ಶಿಸಬೇಕು. ರಾಜ್ಯದ ಮಳೆ ಹಾಗೂ ಜಲಮಟ್ಟದ ಪ್ರಸ್ತುತ ಅಂಕಿ-ಅಂಶಗಳು:

ಮಳೆ ಕೊರತೆ: ಜುಲೈ 18ರವರೆಗೆ ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಒಟ್ಟಾರೆ ಶೇ. 39ರಷ್ಟು ಕೊರತೆ. 170ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಮಳೆ ಅಭಾವ (ವಿಜಯನಗರ ಜಿಲ್ಲೆಯಲ್ಲಿ ಅತ್ಯಧಿಕ -67% ಕೊರತೆ). ಪ್ರಾದೇಶಿಕ ಕೊರತೆ: ಮಲೆನಾಡು (-43%), ಕರಾವಳಿ (-35%), ಉತ್ತರ ಒಳನಾಡು (-33%), ದಕ್ಷಿಣ ಒಳನಾಡು (-31%). ಜಲಾಶಯಗಳ ಸ್ಥಿತಿ: ಪ್ರಮುಖ ಜಲಾಶಯಗಳಲ್ಲಿ ಕೇವಲ ಶೇ. 40 ರಷ್ಟು ಮಾತ್ರ ನೀರು ಸಂಗ್ರಹವಿದೆ (ಪ್ರಸ್ತುತ 359.98 ಟಿಎಂಸಿ, ಕಳೆದ ವರ್ಷ 681.83 ಟಿಎಂಸಿ ಇತ್ತು). ಜಲವಿದ್ಯುತ್ ಜಲಾಶಯಗಳು: ಲಿಂಗನಮಕ್ಕಿ, ಸೂಪ ಮತ್ತು ವರಾಹಿಯಲ್ಲಿ ಕೇವಲ ಸರಾಸರಿ ಶೇ. 23 ರಷ್ಟು ಮಾತ್ರ ನೀರು ಸಂಗ್ರಹವಿದೆ. ಕಾವೇರಿ ಕಣಿವೆಯಲ್ಲಿ ಶೇ. 51 ಹಾಗೂ ಕೃಷ್ಣಾ ಕಣಿವೆಯಲ್ಲಿ ಶೇ. 48 ರಷ್ಟು ನೀರಿದೆ. ರೈತರ ಹಿತರಕ್ಷಣೆಗೆ ಆದ್ಯತೆ: ರೈತರು ಕಡಿಮೆ‌ ನೀರಿನ‌ ಬಳಕೆಯಾಗುವ ಬೆಳೆಗಳನ್ನು ಬೆಳೆಯುವ ಮೂಲಕ ಬರದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಕೈಜೋಡಿಸಬೇಕು. ರೈತರ ಹಿತರಕ್ಷಣೆಗೆ ಸಕಲ ಸಿದ್ಧತೆಗಳನ್ನೂ ಮಾಡಲಾಗುವುದು ಎಂದು ಸಿಎಂ ಹೇಳಿದರು.

ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರು, ಸಚಿವರುಗಳಾದ ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಆ. 12 ರಂದು ಮಣಿಪಾಲದಲ್ಲಿ ತಿರಂಗಾ ಯಾತ್ರೆ ದೇಶಕ್ಕಾಗಿ ದೇಶಭಕ್ತರ ನಡಿಗೆ ಕಾರ್ಯಕ್ರಮ

ಉಡುಪಿ, ಆ.10: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉಡುಪಿ ಭಾಗದ...

ವಾರಾಹಿ ಯೋಜನೆ ಬಗ್ಗೆ ಕೇಂದ್ರ ಅರಣ್ಯ ಇಲಾಖೆಗೆ ಸಂಸದ ಕೋಟ ಭೇಟಿ

ಉಡುಪಿ, ಆ.10: ನೆನೆಗುದಿಗೆ ಬಿದ್ದಿರುವ ಉಡುಪಿ ಜಿಲ್ಲೆಯ ವಾರಾಹಿ ಯೋಜನೆಗೆ 17.49...

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ

ಕಾಪು, ಆ.10: ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಕಾಪು...

ಜ್ಯೋತಿ ಸಾಲಿಗ್ರಾಮ ಇವರಿಗೆ ಪಂಚವರ್ಣದ ‘ಆಸಾಡಿ ಒಡ್ರ್ ಪುರಸ್ಕಾರ’

ಕೋಟ, ಆ.10: ಪ್ರತಿಯೊಬ್ಬರೂ ತಮ್ಮ ನೆಲಮೂಲದ ಭಾಷೆಯನ್ನು ಹೃದಯದ ಭಾಷೆಯನ್ನಾಗಿ ಮಾಡಿಕೊಂಡಾಗ...
error: Content is protected !!