Wednesday, August 12, 2026
Wednesday, August 12, 2026

ಆ. 12 ರಂದು ಮಣಿಪಾಲದಲ್ಲಿ ತಿರಂಗಾ ಯಾತ್ರೆ ದೇಶಕ್ಕಾಗಿ ದೇಶಭಕ್ತರ ನಡಿಗೆ ಕಾರ್ಯಕ್ರಮ

ಆ. 12 ರಂದು ಮಣಿಪಾಲದಲ್ಲಿ ತಿರಂಗಾ ಯಾತ್ರೆ ದೇಶಕ್ಕಾಗಿ ದೇಶಭಕ್ತರ ನಡಿಗೆ ಕಾರ್ಯಕ್ರಮ

Date:

ಉಡುಪಿ, ಆ.10: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಉಡುಪಿ ಭಾಗದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಗಸ್ಟ್ 12 ಬುಧವಾರ ಮಧ್ಯಾಹ್ನ 3.30ಕ್ಕೆ “ತಿರಂಗಾ ಯಾತ್ರೆ” ದೇಶಕ್ಕಾಗಿ ದೇಶಭಕ್ತರ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಬುಧವಾರ ಮಧ್ಯಾಹ್ನ 3.30ಕ್ಕೆ ಮಣಿಪಾಲ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಮುಂಭಾಗದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರದ ವಿವಿಧ ಗಣ್ಯರು ತಿರಂಗಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ತಿರಂಗಾ ಯಾತ್ರೆ ಮಣಿಪಾಲ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಮುಂಭಾಗದಿಂದ ಆರಂಭಗೊಂಡು ಟೈಗರ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಕಾಯಿನ್ ಸರ್ಕಲ್ ಬಳಿ ಸಮಾಪನಗೊಳ್ಳಲಿದೆ.

ಸಾರ್ವಜನಿಕರು, ದೇಶಭಕ್ತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಟಪಾಡಿ: ಆಟಿ ಕಷಾಯ ಮತ್ತು ಮೆಂತೆ ಗಂಜಿ ವಿತರಣೆ

ಕಟಪಾಡಿ, ಆ.12: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನದಲ್ಲಿ...

ಆ.14: ಆಭರಣ ಮೋಟಾರ್ಸ್ ನಲ್ಲಿ ನೇರ ಸಂದರ್ಶನ

ಉಡುಪಿ, ಆ.11: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್...

ಜಂತುಹುಳು ನಿವಾರಣಾ ಮಾತ್ರೆ ಸೇವಿಸಿ ಆರೋಗ್ಯಯುತ ಜೀವನ ನಡೆಸಿ: ಶಾಸಕ ಯಶ್‌ಪಾಲ್ ಎ ಸುವರ್ಣ ಕರೆ

ಉಡುಪಿ, ಆ.11: ಮಕ್ಕಳಲ್ಲಿ ಜಂತುಹುಳುಗಳ ಭಾದೆಯಿಂದ ಅಪೌಷ್ಟಿಕತೆ ಹಾಗೂ ರಕ್ತಹೀನತೆ ಉಂಟಾಗಿ...

ಜೈ ಕುಂದಾಪ್ರ ಸೇವಾ ಟ್ರಸ್ಟ್ ರಾಜ್ಯಕ್ಕೆ ಮಾದರಿ: ಭಾಸ್ಕರ್ ಸ್ವಾಮಿ

ಕೋಟ, ಆ.11: ಜೈ ಕುಂದಾಪ್ರ ಸೇವಾ ಟ್ರಸ್ಟ್ ಯುವ ಮನಸ್ಸುಗಳಿಗೆ ಸ್ಫೂರ್ತಿ,...
error: Content is protected !!