Wednesday, September 2, 2026
Wednesday, September 2, 2026

ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

ನಾವುಂದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ

Date:

ಕುಂದಾಪುರ, ಆ.9: ಸರಕಾರಿ ಪದವಿಪೂರ್ವ ಕಾಲೇಜು ನಾವುಂದದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. 1994- 96ನೇ ಸಾಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಕೊಡಲ್ಪಡುವ 11ನೇ ವರ್ಷದ ಹದಿನೈದು ಸಾವಿರ ರೂಪಾಯಿ ನಗದು ಪ್ರೋತ್ಸಾಹಧನದ ಪ್ರತಿಭಾ ಪುರಸ್ಕಾರವನ್ನು ಕಳೆದ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ಮನ್ವಿತ ಇವರಿಗೆ ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಸುಜಾತ ಎಂ ಅಧ್ಯಕ್ಷತೆ ವಹಿಸಿದ್ದರು. 1994-96 ಸಾಲಿನ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಡಾ.ರಾಘವೇಂದ್ರ ಶೆಟ್ಟಿ ಉಪಾಧ್ಯಕ್ಷರು ರಿಸರ್ಚ್ ಡೆವಲಪ್ಮೆಂಟ್ ನವಿತಾಸ್ ಲೈಫ್ ಸೈನ್ಸ್ ಮಣಿಪಾಲ ಇವರು ಪ್ರೋತ್ಸಾಹ ಧನವನ್ನು ವಿತರಿಸಿದರು. ವಿದ್ಯಾರ್ಥಿನಿ ಸಿಂಚನ ಪ್ರಾರ್ಥಿಸಿದರು ವಿದ್ಯಾರ್ಥಿನಿ ತ್ರಿಶಾ ಸ್ವಾಗತಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಸಾವಿತ್ರಿ ಎಸ್ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವಿದ್ಯಾರ್ಥಿ ಸಂದೀಪ್ ವಂದಿಸಿದರು. ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಧಾನಮಂತ್ರಿ ಆವಾಸ್ ಯೋಜನೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಉಡುಪಿ, ಸೆ.1: ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯ ಸಮೀಕ್ಷೆ-2018 ರ ಶಾಶ್ವತ...

ಪ್ರೇರಣಾ ಶಿಬಿರ ಮೌಲ್ಯಯುತ ಬದುಕಿಗೆ ರಹದಾರಿ-ಪಿ.ಜಿ.ಆರ್. ಸಿಂಧ್ಯಾ

ಬಾರಕೂರು, ಸೆ.1: ರೇಂಜರ್ ರೋವರ್ಸ್ ಪ್ರೇರಣಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹವನ್ನು...

ಭಯೋತ್ಪಾದನೆ ಕುರಿತು ದ್ವಿಮುಖ ನೀತಿಗಳಿಗೆ ಅವಕಾಶವಿಲ್ಲ: ಬಿಷ್ಕೆಕ್‌ನಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ ಪ್ರಧಾನಿ ಮೋದಿ

ಯು.ಬಿ.ಎನ್.ಡಿ., ಸೆ.1: ಪ್ರಧಾನಿ ನರೇಂದ್ರ ಮೋದಿ ಅವರು ಕಿರ್ಗಿಜ್ ಗಣರಾಜ್ಯದ ರಾಜಧಾನಿ...

ಅಜ್ಜಿ ಕಥೆ ಹೇಳುವ ಸ್ಪರ್ಧೆಯಲ್ಲಿ ಮನೋಜ್ಞ ದೇವಾಡಿಗಳಿಗೆ ದ್ವಿತೀಯ ಸ್ಥಾನ

ಉಡುಪಿ, ಸೆ.1: ಬೈಂದೂರಿನಲ್ಲಿ ನಡೆದ, "ಗಮ್ಮತ್ " ನಮ್ ಮಣ್ಣೂ ಭಾಷಿ...
error: Content is protected !!