Wednesday, September 2, 2026
Wednesday, September 2, 2026

ಸರಸ್ವತಿ ವಿದ್ಯಾಲಯ: ತರಬೇತಿ ಶಿಬಿರ

ಸರಸ್ವತಿ ವಿದ್ಯಾಲಯ: ತರಬೇತಿ ಶಿಬಿರ

Date:

ಗಂಗೊಳ್ಳಿ, ಆ.9: ಕರಕುಶಲ ಕಲೆಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ಆರ್ಥಿಕವಾಗಿಯು ನಮ್ಮನ್ನು ಸಬಲರನ್ನಾಗಿಸಲು ಸಹಾಯ ಮಾಡುತ್ತದೆ ಎಂದು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಎಸ್‌.ವಿ ಕಾಮರ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ಕ್ರೋಷೆ ತರಬೇತಿ ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯ ಶಿಕ್ಷಕಿ ಜುನಿತಾ ಮಚಾದೋ ಮಾತನಾಡಿ, ಈ ಆಧುನಿಕ ಯುಗದಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಕಲೆಗಳನ್ನು ಕಲಿಯುವುದು ಸುಲಭವಾಗುತ್ತದೆ. ಆಸಕ್ತಿ ಮತ್ತು ಶ್ರದ್ಧೆ ಇದಕ್ಕೆ ಅಗತ್ಯ ಎಂದು ಹೇಳಿದರು. ಉಪನ್ಯಾಸಕಿ ಸುಗುಣ ಆರ್ ಕೆ ಶುಭ ಹಾರೈಸಿದರು. ಎಸ್ ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿದ್ಯಾರ್ಥಿ ಪ್ರತಿನಿಧಿಗಳಾದ ಅಂಕಿತಾ ಖಾರ್ವಿ ಮತ್ತು ಸೃಷ್ಟಿ ಖಾರ್ವಿ ಉಪಸ್ಥಿತರಿದ್ದರು. ಸಾನಿಕ ಎಸ್ ಪೂಜಾರಿ ಸ್ವಾಗತಿಸಿದರು. ವಿದ್ಯಾರ್ಥಿನಿ ಅಂಕಿತ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪ್ರಧಾನಮಂತ್ರಿ ಆವಾಸ್ ಯೋಜನೆ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಉಡುಪಿ, ಸೆ.1: ಪ್ರಧಾನಮಂತ್ರಿ ಆವಾಸ್ ಯೋಜನೆ(ಗ್ರಾಮೀಣ) ಅಡಿಯ ಸಮೀಕ್ಷೆ-2018 ರ ಶಾಶ್ವತ...

ಪ್ರೇರಣಾ ಶಿಬಿರ ಮೌಲ್ಯಯುತ ಬದುಕಿಗೆ ರಹದಾರಿ-ಪಿ.ಜಿ.ಆರ್. ಸಿಂಧ್ಯಾ

ಬಾರಕೂರು, ಸೆ.1: ರೇಂಜರ್ ರೋವರ್ಸ್ ಪ್ರೇರಣಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹವನ್ನು...

ಭಯೋತ್ಪಾದನೆ ಕುರಿತು ದ್ವಿಮುಖ ನೀತಿಗಳಿಗೆ ಅವಕಾಶವಿಲ್ಲ: ಬಿಷ್ಕೆಕ್‌ನಲ್ಲಿ ನಡೆದ ಎಸ್‌ಸಿಒ ಸಭೆಯಲ್ಲಿ ಪ್ರಧಾನಿ ಮೋದಿ

ಯು.ಬಿ.ಎನ್.ಡಿ., ಸೆ.1: ಪ್ರಧಾನಿ ನರೇಂದ್ರ ಮೋದಿ ಅವರು ಕಿರ್ಗಿಜ್ ಗಣರಾಜ್ಯದ ರಾಜಧಾನಿ...

ಅಜ್ಜಿ ಕಥೆ ಹೇಳುವ ಸ್ಪರ್ಧೆಯಲ್ಲಿ ಮನೋಜ್ಞ ದೇವಾಡಿಗಳಿಗೆ ದ್ವಿತೀಯ ಸ್ಥಾನ

ಉಡುಪಿ, ಸೆ.1: ಬೈಂದೂರಿನಲ್ಲಿ ನಡೆದ, "ಗಮ್ಮತ್ " ನಮ್ ಮಣ್ಣೂ ಭಾಷಿ...
error: Content is protected !!