ಬೆಂಗಳೂರು, ಆ.24: ಕರ್ನಾಟಕ ಲಲಿತಕಲಾ ಅಕಾಡೆಮಿಯು 52ನೇ ವಾರ್ಷಿಕ ಕಲಾ ಸ್ಪರ್ಧೆ ಹಾಗೂ ಕಲಾ ಪ್ರದರ್ಶನಕ್ಕೆ ಚಿತ್ರಕಲಾವಿದರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 10 ಕಲಾಕೃತಿಗಳ ಕಲಾವಿದರಿಗೆ ತಲಾ ರೂ. 25 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ನೀಡಲಾಗುತ್ತದೆ. ಪ್ರವೇಶ ಶುಲ್ಕ ರೂ. 300 ನಗದು ರೂಪದಲ್ಲಿ ಅಥವಾ ಡಿಡಿ ಮೂಲಕ ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಪಾವತಿಸಬೇಕಾಗುತ್ತದೆ.
ಭರ್ತಿ ಮಾಡಿದ ಅರ್ಜಿ ನಮೂನೆಯ ಜೊತೆಗೆ ಕಲಾಕೃತಿಯ ಛಾಯಾಚಿತ್ರ ಹಾಗೂ ದಾಖಲಾತಿಗಳನ್ನು ಸೆಪ್ಟೆಂಬರ್ 21ರ ಒಳಗೆ ಇ-ಮೇಲ್ ವಿಳಾಸ kla.karnataka@gmail.com ಗೆ ಕಳುಹಿಸಬೇಕು. ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – 560002 ಈ ವಿಳಾಸಕ್ಕೆ ನೇರವಾಗಿ ಅಥವಾ ಅಂಚೆಯ ಮೂಲಕ ಸಲ್ಲಿಸಬಹುದಾಗಿದೆ. ಲಕೋಟೆಯ ಮೇಲೆ 52ನೇ ವಾರ್ಷಿಕ ಕಲಾ ಪ್ರದರ್ಶನಕ್ಕಾಗಿ ಅರ್ಜಿ ಎನ್ನುವುದನ್ನು ನಮೂದಿಸಿರಬೇಕು. ಹೆಚ್ಚಿನ ವಿವರಕ್ಕೆ https://lalitkala.karnataka.gov.in ಗೆ ಭೇಟಿ ನೀಡಿ. ಮಾಹಿತಿಗಾಗಿ ಸಂಪರ್ಕಿಸಿ 080 22480297




By
ForthFocus™