Monday, October 26, 2026
Monday, October 26, 2026

ಉಡುಪಿ: ಜೂನ್ 28 ರಂದು ಲಸಿಕಾ ಲಭ್ಯತೆ ವಿವರ

ಉಡುಪಿ: ಜೂನ್ 28 ರಂದು ಲಸಿಕಾ ಲಭ್ಯತೆ ವಿವರ

Date:

ಜಿಲ್ಲೆಯಲ್ಲಿ ಜೂನ್ 28 ರಂದು ಉಡುಪಿ ನಗರ ಪ್ರದೇಶದ ಈ ಕೆಳಗಿನ ಆಸ್ಪತ್ರೆಗಳಲ್ಲಿ ಕೊರೋನ ಮುಂಚೂಣಿ ಕಾರ್ಯಕರ್ತರು/ ದುರ್ಬಲ ಗುಂಪಿನ ಫಲಾನುಭವಿಗಳು/ ಆದ್ಯತಾ ಗುಂಪಿನವರು ಮತ್ತು ಆರೋಗ್ಯ ಕಾರ್ಯಕರ್ತರು/ ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರುಗಳಿಗೆ ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಪ್ರಥಮ ಡೋಸ್ ಮತ್ತು 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯ.

ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಉಡುಪಿ (ಸೇಂಟ್ ಸಿಸಿಲಿ ಶಾಲೆ)- ಕೋವಿಶೀಲ್ಡ್ ಪ್ರಥಮ ಡೋಸ್- (150 ಡೋಸ್ ಲಭ್ಯ), ಕೋವಿಶೀಲ್ಡ್ 2ನೇ ಡೋಸ್ (50 ಡೋಸ್ ಲಭ್ಯ)

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲ (ಮಾಧವ ಕೃಪಾ ಶಾಲೆ, ಮಣಿಪಾಲ)- ಕೋವಿಶೀಲ್ಡ್ ಪ್ರಥಮ ಡೋಸ್- (50 ಡೋಸ್ ಲಭ್ಯ), ಕೋವಿಶೀಲ್ಡ್ 2ನೇ ಡೋಸ್ (150 ಡೋಸ್ ಲಭ್ಯ)

ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿಯ ಹಳೆಕಟ್ಟಡ (ಅಲಂಕಾರ ಥಿಯೇಟರ್ ಹತ್ತಿರ)- ಕೋವಿಶೀಲ್ಡ್ ಪ್ರಥಮ ಡೋಸ್- (50 ಡೋಸ್ ಲಭ್ಯ), ಕೋವಿಶೀಲ್ಡ್ 2ನೇ ಡೋಸ್ (130 ಡೋಸ್ ಲಭ್ಯ)

ಎಫ್.ಪಿ.ಎ.ಐ ಕುಕ್ಕಿಕಟ್ಟೆಯಲ್ಲಿ (ಇಂದಿರಾನಗರ ಅನುದಾನಿತ ಹಿ.ಪ್ರಾ. ಶಾಲೆ, ಇಂದಿರಾನಗರ)- ಕೋವಿಶೀಲ್ಡ್ ಪ್ರಥಮ ಡೋಸ್- (20 ಡೋಸ್ ಲಭ್ಯ), ಕೋವಿಶೀಲ್ಡ್ 2ನೇ ಡೋಸ್ (30 ಡೋಸ್ ಲಭ್ಯ)

ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ- ಕೋವಿಶೀಲ್ಡ್ 2ನೇ ಡೋಸ್ (100 ಡೋಸ್ ಲಭ್ಯ), ಜುಲೈ 5 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್ ಲಸಿಕೆ -(100 ಡೋಸ್ ಲಭ್ಯ)

ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳು, ಆದ್ಯತಾಗುಂಪಿನವರು, ಆರೋಗ್ಯ ಕಾರ್ಯಕರ್ತರು, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್-19 ಪ್ರಥಮ ಡೋಸ್ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಜೂನ್ 28 ರಂದು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುವುದು.

ಜಿಲ್ಲೆಯಲ್ಲಿ 18 ರಿಂದ 44 ವರ್ಷ ವಯೋಮಿತಿಯ ಸಾರ್ವಜನಿಕರಿಗೆ ಯಾವುದೇ ಕೋವಿಡ್-19 ಲಸಿಕೆ ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಹೆಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಾಗತಿಕ ತೈಲ ಬೆಲೆ: ಗರಿಷ್ಠ ಏರಿಕೆ ನಂತರ ಸುಮಾರು 2% ರಷ್ಟು ಕುಸಿತ

ನವದೆಹಲಿ, ಅ.26: ಸುಮಾರು ಆರು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿದ ನಂತರ...

ಬ್ರೆಜಿಲ್‌ನಲ್ಲಿ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬಂದ ಲುಲಾ; ಲ್ಯಾಟಿನ್ ಅಮೆರಿಕದಲ್ಲಿ ಟ್ರಂಪ್ ಪ್ರಭಾವಕ್ಕೆ ಹಿನ್ನಡೆ

ಯು.ಬಿ.ಎನ್.ಡಿ., ಅ.26: ಭಾನುವಾರ ನಡೆದ ಬ್ರೆಜಿಲ್‌ನ ನಿರ್ಣಾಯಕ ಮತದಾನದಲ್ಲಿ ಸೆನೆಟರ್ ಫ್ಲಾವಿಯೊ...

ಆತ್ಮವಿಶ್ವಾಸದಿಂದ ಇಂಗ್ಲೀಷ್ ಸಂವಹನ

ಬಸ್ರೂರು, ಅ.26: ಬಸ್ರೂರು ಶ್ರೀ ಶಾರದಾ ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ...

ಏಷ್ಯನ್ ಪ್ಯಾರಾ ಕ್ರೀಡಾಕೂಟ: 114 ಪದಕಗಳೊಂದಿಗೆ ಭಾರತದ ಭರ್ಜರಿ ಪ್ರದರ್ಶನ

ಜಪಾನ್‌ನ ನಗೋಯಾದಲ್ಲಿರುವ ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ 2026 ಏಷ್ಯನ್...
error: Content is protected !!