Home ಸುದ್ಧಿಗಳು ಪ್ರಾದೇಶಿಕ ಬೈಂದೂರು: ನೆಟ್ವರ್ಕ್ ಆಪರೇಟರ್‌ಗಳ ಸಭೆ

ಬೈಂದೂರು: ನೆಟ್ವರ್ಕ್ ಆಪರೇಟರ್‌ಗಳ ಸಭೆ

384
0

ಬೈಂದೂರಿನ ನೆಟ್ವರ್ಕ್ ಸಮಸ್ಯೆಗೆ ಮುಕ್ತಿ ಕೊಡುವಂತೆ ನೆಟ್ವರ್ಕ್ ಆಪರೇಟರ್‌ ಗಳ ಸಭೆಯು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಗ್ರಾಮೀಣ ಭಾಗಗಳನ್ನು ಹೆಚ್ಚು ಒಳಗೊಂಡಿರುವ ಬೈಂದೂರಿನ ಬಹಳಷ್ಟು ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಇದ್ದು, ಜನರು ಸಂವಹನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ ಲಾಕ್‌ಡೌನ್ ಕಾರಣದಿಂದ ಶಾಲಾ ಕಾಲೇಜುಗಳ ಶಿಕ್ಷಣ ಆನ್‌ಲೈನ್ ಮೂಲಕ ನಡೆಯುತ್ತಿದೆ.‌ ನೆಟ್ವರ್ಕ್ ಸಮಸ್ಯೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆಯಲ್ಲಿ ನಿಂತುಕೊಳ್ಳುವುದು, ಕಿಲೋಮೀಟರುಗಟ್ಟಲೆ ಹೋಗಬೇಕಾದ ಪರಿಸ್ಥಿತಿಯಿದೆ. ಕಾಡು ಪ್ರಾಣಿಗಳ ಕಾಟ, ಹೀಗೆ ಇಲ್ಲಿಯ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಶಾಸಕರು ಸಭೆಯಲ್ಲಿ ಆಪರೇಟರ್ ಗಳ ಗಮನಕ್ಕೆ ತಂದರು.

ಕನ್ವರ್ಷನ್ ಭೂಮಿ ಬೇಕು ಎಂಬ ಕಾರಣಕ್ಕೆ ಹೊಸದಾಗಿ ಟವರ್ ಮಾಡುವಲ್ಲಿ ಕನ್ವರ್ಷನ್ ಜಾಗಗಳ ಸಮಸ್ಯೆ ಎದುರಾಗುತ್ತಿತ್ತು. ಹಾಗಾಗಿ ಅದರಿಂದ ವಿನಾಯತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ (ಸಿಎಸ್) ಮಾತನಾಡಿದ್ದೇನೆ‌. ಎನ್.ಒ.ಸಿ ಸಮಸ್ಯೆ ಎದುರಿಸುತ್ತಿದ್ದ ಗಂಗೊಳ್ಳಿ, ಕಟ್‌ಬೆಲ್ತೂರು ಪಂಚಾಯತ್ ಪಿಡಿಓಗಳ ಜೊತೆಗೆ ಮಾತನಾಡಿದ್ದು, ಸಮಸ್ಯೆ ಬಗೆಹರಿಸಿ ಶೀಘ್ರ ಅನುಮತಿ ನೀಡುವಂತೆ ಸೂಚಿಸಲಾಗಿದೆ ಎಂದು ಶಾಸಕರು ಸಭೆಯ ನಂತರ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.