Home ಸುದ್ಧಿಗಳು ಪ್ರಾದೇಶಿಕ ಹಂದೆ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನ: ವಾರ್ಷಿಕ ರಥೋತ್ಸವ; ಸಾಧಕರಿಗೆ ಸನ್ಮಾನ

ಹಂದೆ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನ: ವಾರ್ಷಿಕ ರಥೋತ್ಸವ; ಸಾಧಕರಿಗೆ ಸನ್ಮಾನ

133
0
ಕೋಟ, ಮೇ 10: ಹಂದೆ ವಿಷ್ಣುಮೂರ್ತಿ ವಿನಾಯಕ ದೇವಸ್ಥಾನ ಹಂದಟ್ಟು ಕೋಟ ವಾರ್ಷಿಕ ರಥೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಸಂಪನ್ನಗೊಂಡಿತು. ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್ ಕಾರಂತ ಧಾರ್ಮಿಕ ಉಪನ್ಯಾಸ ನೀಡಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅಮರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೃಷ್ಣಮೂರ್ತಿ ಉರಾಳ, ಜಯರಾಮ ಶೆಟ್ಟಿ, ಯಕ್ಷಗಾನ ಕಲಾವಿದ ರಾಜು ಪೂಜಾರಿ, ಸಮಾಜ ಸೇವಕಿ ಭಾರತಿ ವಿ. ಮಯ್ಯ, ಡಾಕ್ಟ್ರೇಟ್ ಪದವಿ ಪಡೆದ ಡಾ. ಗಣೇಶ ಉರಾಳ, ಸ್ಥಳ ದಾನಿಗಳಾದ ಮಹಾಲಕ್ಷ್ಮಿ ಹಂದೆ, ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ರಾಧ ಮರಕಾಲ್ತಿ ಇವರಿಗೆ ದೇವಳದ ವತಿಯಿಂದ ವಿಶೇಷ ಪುರಸ್ಕಾರ ನೀಡಲಾಯಿತು. ರಾಷ್ಟ್ರಮಟ್ಟದ ಅಬಾಕಸ್ ವಿಜೇತ ಅದ್ವಿತ್, ರಾಷ್ಟ್ರಮಟ್ಟದ ಕರಾಟೆಯಲ್ಲಿ ವಿಜೇತ ಪ್ರಜಿತ್, ವಿಭಾಗ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಸಾಧಕ ಮನ್ವಿತ್ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.
ನಿವೃತ್ತ ಶಿಕ್ಷಕ ಹಂದಟ್ಟು ಸೂರ್ಯನಾರಾಯಣ ಹಂದೆ ಮತ್ತು ಯಶೋಧ ಹಂದೆ ಅವರ ಪ್ರಾಯೋಜಕತ್ವದಲ್ಲಿ ಮಂದಾರ್ತಿ ಮೇಳದ ಕಮಲಶಿಲೆ ಮಹಾಬಲ ದೇವಾಡಿಗ, ಹಟ್ಟಿಯಂಗಡಿ ಮೇಳದ ಹಳ್ಳಾಡಿ ಜಯರಾಮ ಶೆಟ್ಟಿ, ಮಡಾಮಕ್ಕಿ ಮೇಳದ ಹೊಳೆಮಗೆ ನಾಗಪ್ಪ, ಮಕ್ಕೆಕಟ್ಟು ಮೇಳದ ರಮೇಶ್ ಭಂಡಾರಿ ಮೂರುರು ಕಮಲಶಿಲೆ ಮೇಳದ ಲಕ್ಷ್ಮಣ ಭಂಡಾರಿ, ಸಾಲಿಗ್ರಾಮ ಮೇಳದ ಕ್ಯಾದಿಗಿ ಮಹಾಬಲೇಶ್ವರ ಭಟ್ ಈ ಆರು ಮಂದಿ ಹಾಸ್ಯ ಕಲಾವಿದರಿಗೆ ತಲಾ ಐದು ಸಾವಿರ ರೂಪಾಯಿಗಳ ನಗದಿನೊಂದಿಗೆ ಸನ್ಮಾನಿಸಲಾಯಿತು. ದಿ. ನರಸಿಂಹ ಸೋಮಯಾಜಿ ಹಂದಟ್ಟು ಇವರು ಕೊಡಮಾಡಿದ ಹತ್ತು ಸಾವಿರ ರೂಪಾಯಿಗಳನ್ನೊಳಗೊಂಡ ಕಲಾ ಪೋಷಕ ನರಸಿಂಹ ಸೋಮಯಾಜಿ ಪ್ರಶಸ್ತಿಯನ್ನು ಪ್ರಸಿದ್ಧ ಸ್ತ್ರೀ ವೇಷಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ ಇವರಿಗೆ ನೀಡಲಾಯಿತು. ಯಕ್ಷಗಾನ ಕಲಾ ಸಂಘಟಕ, ಚಿಂತಕ ಜನಾರ್ದನ ಹಂದೆ, ಹಂದೆ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಜಾರಾಮ ಹಂದೆ, ಕಟ್ಟೆ ಗೆಳೆಯರು ಹಂದಟ್ಟು ಕೋಟ ಇದರ ಸುರೇಶ ಪೂಜಾರಿ, ಉದಯ ಹಂದೆ ಬೆಂಗಳೂರು ಉಪಸ್ಥಿತರಿದ್ದರು. ಹಂದಟ್ಟು ವಿನಾಯಕ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಡಾ. ಹೆಚ್. ವೆಂಕಟರಮಣ ಸೋಮಯಾಜಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆನೆಗುಡ್ಡ ದೇವಸ್ಥಾನದ ನಿವೃತ್ತ ಪ್ರಬಂಧಕ ಆನಂದರಾಮ ಉರಾಳ ವಂದಿಸಿದರು. ಸುಜಾತ ಬಾಯಿರಿ, ಮಂಜುನಾಥ ಉರಾಳ, ಜಾನಕಿ ಹಂದೆ ಸಹಕರಿಸಿದರು. ಶಿಕ್ಷಕಿ ಆಶಾ ಕಿರಣ್ ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿದರು. ಕೆ. ಮೋಹನ್ ನಿರ್ದೇಶನದ, ಸುದರ್ಶನ ಉರಾಳ ಸಂಯೋಜನೆಯ ಯಕ್ಷದೇಗುಲ ಬೆಂಗಳೂರು ಇಲ್ಲಿಯ ಕಲಾವಿದರಿಂದ `ಸುದರ್ಶನ ಗರ್ವಭಂಗ’ ಯಕ್ಷಗಾನ ಪ್ರದರ್ಶನ ನಡೆಯಿತು. ಲಂಬೋದರ ಹೆಗಡೆ, ರಾಘವೆಂದ್ರ ಹೆಗಡೆ, ಶಿವಾನಂದ ಕೋಟ, ಸುಜಯೀಂದ್ರ ಹಂದೆ, ಉದಯ ಕಡಬಾಳ, ತಮ್ಮಣ್ಣ ಗಾಂವ್ಕರ್, ಸ್ಫೂರ್ತಿ ಭಟ್, ಆದಿತ್ಯ ಭಟ್, ರಾಜು ಪೂಜಾರಿ, ನಾಗರಾಜ ಪೂಜಾರಿ ಕಲಾವಿದರಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.