Wednesday, October 21, 2026
Wednesday, October 21, 2026

ಅಮೃತ್ ಭಾರತ್ ಯೋಜನೆಯಡಿ ಉಡುಪಿಯ ರೈಲು ನಿಲ್ದಾಣ ಅಭಿವೃದ್ಧಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಅಮೃತ್ ಭಾರತ್ ಯೋಜನೆಯಡಿ ಉಡುಪಿಯ ರೈಲು ನಿಲ್ದಾಣ ಅಭಿವೃದ್ಧಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Date:

ಉಡುಪಿ, ಆ.1: ಭಾರತೀಯ ರೈಲ್ವೆಯ ಅಮೃತಕಾಲದ ಪ್ರತಿಷ್ಠಿತ ಅಮೃತ್ ಭಾರತ ರೈಲು ನಿಲ್ದಾಣ ಯೋಜನೆ ಅಡಿಯಲ್ಲಿ ಉಡುಪಿ ರೈಲು ನಿಲ್ದಾಣದ ಸೇರ್ಪಡೆಯ ಕುರಿತು ಇರುವ ಗೊಂದಲ ಪರಿಹಾರವಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಲೋಕಸಭೆಯಲ್ಲಿ ಈ ಬಗ್ಗೆ ನಾನು ರೈಲ್ವೆ ಸಚಿವರನ್ನು ಕುರಿತು ಪ್ರಶ್ನಿಸಿದ್ದೆ. ಅಮೃತ್ ಭಾರತ್ ರೈಲು ಯೋಜನೆ ಅಡಿಯಲ್ಲಿ ಉಡುಪಿಯಲ್ಲಿಯೂ ರೈಲ್ವೆ ನಿಲ್ದಾಣ ಇರುವ ಬಗ್ಗೆ ಸಂಸತ್ತಿಗೆ ಹೇಳಿಕೆ ನೀಡುವ ಮೂಲಕ ಉಡುಪಿ ಜನತೆಯ ಅನುಮಾನಗಳಿಗೆ ಸ್ವತಃ ರೈಲ್ವೆ ಸಚಿವರು ತೆರೆ ಎಳೆದಿದ್ದಾರೆ. ಕರ್ನಾಟಕದ 59 ಅಮೃತ ಭಾರತ್ ನಿಲ್ದಾಣದಲ್ಲಿ ಇರುವ ಏಕೈಕ ಕೊಂಕಣ ರೈಲು ನಿಲ್ದಾಣ ಉಡುಪಿಯದ್ದಾಗಿದೆ.

ಅಮೃತ ಭಾರತ್ ಯೋಜನೆಯ ಕಾರ್ಯ ಆರಂಭಕ್ಕೆ ರೈಲ್ವೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕವು ಸೇರಿದಂತೆ ಈ ಯೋಜನೆಗೆ ನೀಡಲಾಗುವ ಹಣಕಾಸಿನ ನೆರವಿನ ಸದುಪಯೋಗಕ್ಕೆ ಶೀಘ್ರವೇ ಕೊಂಕಣ ರೈಲ್ವೆ ಅಧಿಕಾರಿಗಳ ಸಭೆಯನ್ನು ಕರೆಯಲಿದ್ದು ಅಲ್ಲಿ ಅತಿ ಮುಖ್ಯವಾಗಿ ಬೇಕಾಗಿರುವ ಎರಡನೇ ಚಾವಣಿ, ಪಾರ್ಕಿಂಗ್ ಮತ್ತು ಫ್ಲೋರಿಂಗ್ ಕುರಿತು ಅಧಿಕಾರಿಗಳಿಗೆ ಸಚಿವರು ಸೂಚಿಸಲಿದ್ದಾರೆ ಎಂದು ತಿಳಿಸಿದ್ದಾರೆ. ನಮ್ಮ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರ ನೀಡಿದ ಗೌರವಾನ್ವಿತ ರೈಲ್ವೆ ಸಚಿವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ. ಉಡುಪಿ ರೈಲು ನಿಲ್ದಾಣ ಅತಿ ಶೀಘ್ರದಲ್ಲೇ ಅಮೃತ್ ಭಾರತ್ ರೈಲ್ವೆ ನಿಲ್ದಾಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಸಜ್ಜಿತವಾದ ವ್ಯವಸ್ಥೆಯ ಜೊತೆಗೆ ಹೊರಹೊಮ್ಮಲಿದೆ ಎಂದು ಸಂಸದರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಉಡುಪಿ, ಅ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಅ. 20: ಉಡುಪಿ ನಗರ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹಣೆಯಲ್ಲಿ ವ್ಯತ್ಯಯ

ಉಡುಪಿ, ಅ. 20: ನವರಾತ್ರಿ ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 20...

ಉಚ್ಚಿಲ ದಸರಾ ಶೋಭಾಯಾತ್ರೆ: ವಾಹನ ಸಂಚಾರಕ್ಕೆ ಬದಲಿ ಮಾರ್ಗ

ಉಡುಪಿ, ಅ.20: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ-ಉಚ್ಚಿಲ ದಸರಾ...

ನವರಾತ್ರಿ ಮಹೋತ್ಸವ

ಪೀಠಿಕೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶರತ್ಕಾಲದ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ...
error: Content is protected !!