ಶಿರಿಬೀಡು ವಾರ್ಡ್ ನ ಧೂಮಾವತಿ ಮುಖ್ಯ ರಸ್ತೆಯಲ್ಲಿ ಹಾದು ಹೋಗುವ ರಾಜಕಾಲುವೆಗೆ ಅಡ್ಡಲಾಗಿ ನಿರ್ಮಿಸಿದ್ದ ನೂರು ವರ್ಷಕ್ಕಿಂತ ಹಳೆಯ ಸೇತುವೆ ಇದರ (ಪುಳಿಮಾರು ಸಂಕ) ಕಲ್ಲಿನ ಅಡಿ ಪಂಚಾಂಗ ಕುಸಿತದಿಂದಾಗಿ ಸೇತುವೆಯ ಮೇಲ್ಬಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸೇತುವೆ ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿಯಲ್ಲಿದೆ. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ನಗರಸಭಾ ಸದಸ್ಯ ಟಿ. ಜಿ ಹೆಗ್ಡೆ ಪರಿಶೀಲನೆ ನಡೆಸಿ, ಅತೀ ಶೀಘ್ರದಲ್ಲಿ ಸೇತುವೆಯನ್ನು ನವೀಕರಿಸಲಾಗುವುದು ಎಂದುರು.
ಈ ಸಂದರ್ಭದಲ್ಲಿ ಅಂಬಲಪಾಡಿ ನಗರಸಭಾ ಸದಸ್ಯರಾದ ಹರೀಶ್ ಶೆಟ್ಟಿ, ಸ್ಥಳೀಯರಾದ ಅಶೋಕ್ ಶೆಟ್ಟಿ ಪುಳಿಮಾರು ಮನೆ, ಮಹೇಶ್ ಶೆಟ್ಟಿ ಪುಳಿಮಾರು ಮನೆ, ವಿಶ್ವನಾಥ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.




By
ForthFocus™